ಬೆಂಗಳೂರು:ವೈದ್ಯಕೀಯ ಹಣದುಬ್ಬರದಿಂದಾಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಕಾಯಿಲೆಗಳ ಚಿಕಿತ್ಸಾ ವೆಚ್ಚವೂ ಕಳೆದ ಐದು ವರ್ಷಗಳಲ್ಲಿ ಹೆಚ್ಚಾಗಿದೆ ಎಂಬ ವಿಚಾರವನ್ನು ವಿಮಾ ಸಂಸ್ಥೆಯೊಂದರ ದತ್ತಾಂಶ ಬಹಿರಂಗಗೊಳಿಸಿದೆ.
ಸಾಂಕ್ರಾಮಿಕ ರೋಗಗಳು ಮತ್ತು ಉಸಿರಾಟದ ತೊಂದರೆಗಳಿಗೆ ಆರೋಗ್ಯ ವಿಮೆಯ ಕ್ಲೈಮ್ ಮೊತ್ತವು ವೈದ್ಯಕೀಯ ಹಣದುಬ್ಬರಕ್ಕಿಂತ ವೇಗವಾಗಿ ಬೆಳೆಯುತ್ತಿವೆ. ಅಂದರೆ, ಇದು ಚಿಲ್ಲರೆ ಹಣದುಬ್ಬರಕ್ಕಿಂತ ಶೇ.14 ಹೆಚ್ಚಳವಾಗಿದೆ ಎನ್ನಲಾಗಿದೆ.
2018ರಲ್ಲಿದ್ದ ಸಾಂಕ್ರಾಮಿಕ ರೋಗಗಳ ಸರಾಸರಿ ಕ್ಲೈಮ್ ಈಗ ಶೇ.20-30ಕ್ಕೆ ಏರಿದೆ. ಬೆಂಗಳೂರು, ಮುಂಬೈ ಅಂಥ ಮಹಾನಗರಗಳಲ್ಲಿ ಕ್ಲೈಮ್ ಹೆಚ್ಚಾಗಿದೆ. ಉಸಿರಾಟದ ತೊಂದರೆಗಳಿಗೆ ಇದ್ದ ಸರಾಸರಿ ಕ್ಲೈಮ್ ಶೇ.30 ಏರಿಕೆಯಾಗಿದೆ. ಕರೊನಾ ಸಾಂಕ್ರಾಮಿಕವು ಚಿಕಿತ್ಸಾ ವೆಚ್ಚವನ್ನು ಹೆಚ್ಚಿಸಿದ್ದರೂ, ಅದಕ್ಕೂ ಹಿಂದಿನ ಎರಡು ವರ್ಷಗಳಲ್ಲಿ ಹಣದುಬ್ಬರದ ಪ್ರವೃತ್ತಿ ಕಂಡುಬಂದಿದೆ ಎಂದು ವಿಮಾ ಕಂಪನಿಗಳ ಮುಖ್ಯಸ್ಥರು ತಿಳಿಸಿದ್ದಾರೆ.
ಇತರ ವೆಚ್ಚಗಳೇ ಹೆಚ್ಚು:ಕರೊನಾ ಸಾಂಕ್ರಾಮಿಕದ ನಂತರದಲ್ಲಿ ಕೆಲವು ಅಗತ್ಯ ಚಿಕಿತ್ಸಾ ವಸ್ತುಗಳು ಹಾಗೂ ಸೇವೆಗಳ ದರ ಹೆಚ್ಚಳವಾಗಿದೆ. ಹೊಸ ಔಷಧಗಳು, ತಂತ್ರಜ್ಞಾನ ಬಳಕೆಯಿಂದ ಚಿಕಿತ್ಸೆ ದುಬಾರಿಯಾಗುತ್ತಿದೆ. ವಿಮೆ ಮಾಡಿಸುವ ಪ್ರಮಾಣವೂ ಹೆಚ್ಚಳವಾಗಿದೆ. ಸಾಮಾನ್ಯ ಜನರಲ್ಲೂ ರೋಗನಿರ್ಣಯದ ಜಾಗೃತಿ ಹೆಚ್ಚಿದ್ದು, ನಿಯಮಿತ ಪರೀಕ್ಷೆಗಳಿಂದ ಆರಂಭದ ಹಂತದಲ್ಲೇ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಮುಂದಾಗುತ್ತಿರುವುದು ಕ್ಲೈಮ್ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ದಾಖಲಾತಿ ಅವಧಿ ಕಡಿಮೆ:ಇತರ ವೈದ್ಯಕೀಯ ಚಿಕಿತ್ಸೆಗಿಂತ ಕಣ್ಣಿನ ಪೊರೆ ಚಿಕಿತ್ಸಾ ವೆಚ್ಚ ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದೆ. ಅಲ್ಪ ಪ್ರಮಾಣದ ಈ ಏರಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಚಿಕಿತ್ಸಾ ಪದ್ಧತಿಗಳ ಅಳವಡಿಕೆ ಕಾರಣ ಆಗಿರಬಹುದು. ಏಕೆಂದರೆ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಉಳಿಯುವುದು ಕಡಿಮೆಯಾಗಿದೆ.
ಕರೊನಾ ನಂತರದಲ್ಲಿ ಜನರಿಗೆ ಆರೋಗ್ಯದ ಕಾಳಜಿ ಹೆಚ್ಚುವುದರ ಜತೆಗೆ ಆರೋಗ್ಯ ವಿಮೆ ಬಗ್ಗೆಯೂ ತಿಳುವಳಿಕೆ ಮೂಡಿದೆ. ಹಾಗಾಗಿ ಖಾಸಗಿಯಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ಬಹುತೇಕರು ಆರೋಗ್ಯ ವಿಮೆಯನ್ನು ಹೊಂದಿದವರಾಗಿದ್ದಾರೆ. ಇದರಿಂದಾಗಿ ವಿಮೆ ಕ್ಲೈಮ್ ಸಹ ಹೆಚ್ಚಾಗಿರುವ ಸಾಧ್ಯತೆಗಳಿವೆ.
| ಡಾ.ಆರ್.ರವೀಂದ್ರ, ಮುಖ್ಯಸ್ಥ, ಸುಗುಣ ಆಸ್ಪತ್ರೆ
ಪ್ಲ್ಯಾಸ್ಟಿಕ್​ ಕಪ್​ನಷ್ಟೇ ಪೇಪರ್ ಕಪ್​ ಕೂಡ ಪರಿಸರಕ್ಕೆ ಹಾನಿಕರ; ಅಧ್ಯಯನದಲ್ಲಿ ಬಹಿರಂಗ

40% ಕಮಿಷನ್ ಆರೋಪ ಪ್ರಕರಣ: ತನಿಖೆಗೆ ವಿಚಾರಣಾ ಆಯೋಗ ರಚಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
