ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶನದಂತೆ ಚಾಮರಾಜನಗರ ವೈದ್ಯಕೀಯ ಕಾಲೇಜಿಗೂ ಅರ್ಹ ಅಭ್ಯರ್ಥಿಗಳು ಇಚ್ಛೆ ಅಥವಾ ಆಯ್ಕೆ ದಾಖಲಿಸಲು ಅವಕಾಶ ನೀಡಿದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪರಿಷ್ಕರಿಸಿದೆ. ಇದರಿಂದಾಗಿ 130 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ಆಪ್ಷನ್ ಎಂಟ್ರಿಗೆ ನ.22ರ ಸಂಜೆ 4 ಗಂಟೆಯವರೆಗೂ ಕಾಲಾವಕಾಶ ನೀಡಲಾಗಿದೆ ಮತ್ತು ವೈದ್ಯಕೀಯ, ದಂತವೈದ್ಯಕೀಯ ಸೀಟುಗಳ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಣುಕು ಸೀಟು ಹಂಚಿಕೆಯ ಫಲಿತಾಂಶದ ನಂತರ ನಿಗದಿತ ಸಮಯದೊಳಗೆ ಅಭ್ಯರ್ಥಿಗಳು ಇಚ್ಛೆ ಅಥವಾ ಆಯ್ಕೆಯನ್ನು ಆದ್ಯತಾ ಕ್ರಮದಲ್ಲಿ ಹೊಸದಾಗಿ ಸೇರಿಸಲು, ಅಳಿಸಲು, ಮಾರ್ಪಡಿಸಲು, ಬದಲಾಯಿಸಲು ಅವಕಾಶವಿರುತ್ತದೆ. ನ.23ರಂದು ಅಣುಕು ಸೀಟು ಹಂಚಿಕೆ ನಡೆಯಲಿದೆ. ನ.24ರ ಬೆಳಗ್ಗೆ 11 ಗಂಟೆಯವರೆ ಆಯ್ಕೆ ಬದಲಿಸಲು ಅವಕಾಶವಿದೆ. ಅದೇ ರಾತ್ರಿ 8ಗಂಟೆಗೆ ನೈಜ ಸೀಟು ಹಂಚಿಕೆಯಾಗಲಿದೆ. ನ.26ರವರೆಗೆ ಆಪ್ಷನ್ ಎಂಟ್ರಿಗೆ ಅವಕಾಶವಿದೆ. ನ.27ರ ಮಧ್ಯಾಹ್ನ 1ಗಂಟೆಯೊಳಗೆ ಛಾಯ್ಸ-1 ಮತ್ತು 2 ಆಯ್ಕೆ ಮಾಡಿರುವವರು ಶುಲ್ಕ ಪಾವತಿಸಿ, ಸಂಬಂಧಪಟ್ಟ ಕಾಲೇಜಿನಲ್ಲಿ ನ.28ರ ಸಂಜೆಯೊಳಗೆ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರ ಸೂಚಿಸಿದೆ.
ಇಂಜಿನಿಯರಿಂಗ್ ದಾಖಲಾತಿ ಸ್ಲಿಪ್ ಸಮಸ್ಯೆ:ಸಿಇಟಿ-2020ರ ಮೊದಲ ಹಂತ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳಿಗೆ ಅವಶ್ಯವಾದ ದಾಖಲಾತಿ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ವಿದ್ಯಾರ್ಥಿಗಳು ಕೆಇಎ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ದಾಖಲಾತಿ ಸ್ಲಿಪ್‌ಗಳ ಡೌನ್‌ಲೋಡ್ ಮಾಡಿಕೊಳ್ಳಲು ಅರ್ಹತೆ ಇದ್ದರೂ, ಕೆಇಎನಲ್ಲಿ ಸಿಗುತ್ತಿಲ್ಲ. ಆಯ್ಕೆ ದಾಖಲಿಸಬೇಕಾದಲ್ಲಿ ಈ ಸ್ಲಿಪ್ ಅವಶ್ಯವಾಗಿದೆ. ಆದರೆ, ತಾಂತ್ರಿಕ ಕಾರಣದಿಂದ ಡೌನ್‌ಲೋಡ್ ಆಗುತ್ತಿಲ್ಲವೆಂದು ಕೆಇಎ ವಿರುದ್ಧ ವಿದ್ಯಾರ್ಥಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + five =
Remember me
