ಬೆಂಗಳೂರು:ಔಷಧ ಸಸ್ಯ ಸಂರಕ್ಷಣೆ, ಕ್ಷೇತ್ರ ವಿಸ್ತರಣೆ, ಸಂಸ್ಕರಣೆ, ಸಂವರ್ಧನೆ, ಮಾರುಕಟ್ಟೆ, ಸುಸ್ಥಿರ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಐಇಸಿ ಚಟುವಟಿಕೆಗಳ ಕುರಿತು ಔಷಧ ಸಸ್ಯವಲಯದ ಕ್ರಿಯಾ ಯೋಜನೆ (2023-33) ರಚಿಸುವ ಕುರಿತು ರಾಜ್ಯ ಮಟ್ಟದ ಪಾಲುದಾರರ ಸಮಾಲೋಚನಾ ಕಾರ್ಯಾಗಾರದಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಔಷಧ ಸಸ್ಯ ಸಂರಕ್ಷಣಾ ಪ್ರದೇಶ ಗುರುತಿಸುವುದು, ಜಿಲ್ಲಾ ಮಟ್ಟದಲ್ಲಿ ಔಷಧ ಸಸ್ಯ ಬೆಳೆಯುವುದು, ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು, ರೈತರಿಗೆ ಮಾಹಿತಿ ಒದಗಿಸುವುದು ಹಾಗೂ ಉದ್ಯಮಗಳ ಬೇಡಿಕೆಗೆ ಪೂರಕವಾಗಿ ಔಷಧ ಸಸ್ಯ ಬೆಳೆಯುವ ಕುರಿತು ಪಾಲುದಾರರು ಸಮಾಲೋಚನೆ ನಡೆಸಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಆಯುಷ್ ಇಲಾಖೆ ಆಯುಕ್ತೆ ಡಾ.ಕೆ.ಲೀಲಾವತಿ, ಔಷಧ ಸಸ್ಯಗಳನ್ನು ಕೃಷಿ ವಲಯಗಳಲ್ಲಿ ಬೆಳೆಸುವುದರಿಂದ ಅರಣ್ಯ ಸಂರಕ್ಷಣೆ ಮಾಡಬಹುದು. ರೈತರು ವ್ಯವಸಾಯದಲ್ಲಿ ಔಷಧ ಸಸ್ಯ ಬೆಳೆಯುವಂತಾಗಬೇಕು. ಈ ಬೆಳೆಗೆ ಮಾರುಕಟ್ಟೆ ಒದಗಿಸಿ, ಬೆಲೆಯನ್ನು ನಿಗದಿಗೊಳಿಸಿದರೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗಿಡಮೂಲಿಕೆ ಬೆಳೆಸಲು ಮುಂದಾಗುತ್ತಾರೆ ಎಂದು ಹೇಳಿದರು.
ಅಥರ್ವಣ ವೇದದಲ್ಲಿ ಕಾಯಿಲೆ, ಗುಣಲಕ್ಷಣ, ಗುಣಪಡಿಸಬಹುದುದಾದ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ. ಕಾಲನಂತರ ಆಯುರ್ವೇದದ ಬಗ್ಗೆ ಪ್ರಾಶಸ್ತ್ಯ ನೀಡದ ಕಾರಣ ಕೆಲವು ಔಷಧ ಸಸ್ಯಗಳು ನಶಿಸಿ ಹೋಗಿವೆ ಎಂದು ತಿಳಿಸಿದರು.
ಔಷಧ ಸಸ್ಯಗಳ ಬೇಡಿಕೆ ಹಾಗೂ ಪೂರೈಕೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಬೇಕು. ಜನಸಾಮಾನ್ಯರಿಗೆ ಗಿಡಮೂಲಿಕೆಗಳ ಅರಿವು ಮೂಡಿಸಬೇಕು. ಗಿಡಮೂಲಿಕೆಗಳ ಗಾರ್ಡನ್ ಬೆಳೆಯಲು ಆಯುಷ್ ಇಲಾಖೆಯಲ್ಲಿ ಅನುದಾನ ನೀಡಲಾಗುತ್ತಿದೆ. ಆಯುಷ್ ಇಲಾಖೆಯು ಕಿಚನ್ ಗಾರ್ಡನ್ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತಿದೆ. ಕಿಚನ್ ಗಾರ್ಡನ್ ಉಪಯೋಗಿಸಿ ಆರೋಗ್ಯ ಸಮಸ್ಯೆಗಳನ್ನು ಹೇಗೆ ಗುಣಪಡಿಸಬಹುದು ಎಂಬ ಜ್ಞಾನ ನೀಡಲಾಗುತ್ತಿದೆ ಎಂದರು.ಔಷಧ ಸಸ್ಯ, ಬಳಕೆ ಕುರಿತು ಡಿಜಿಟಲ್ ಮಾಹಿತಿಯನ್ನು ಒದಗಿಸಬೇಕು. ಈ ಸಸ್ಯಗಳ ಬಗೆಗಿನ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ರಾಜೀವ್ ರಂಜನ್ ಮಾತನಾಡಿ, ಕಾರ್ಯಾಗಾರವು ಔಷಧ ಸಸ್ಯಗಳ ಪರಿಚಯ, ಸಂರಕ್ಷಣೆ, ಉಪಯೋಗ ಬಗ್ಗೆ ಮತ್ತು ಕಾಡು ಮತ್ತು ಇತರೆ ಸ್ಥಳಗಳಲ್ಲಿ ಔಷಧ ಸಸ್ಯಗಳನ್ನು ಹೇಗೆ ಬೆಳೆಯಬಹುದು ಎಂಬ ಉದ್ದೇಶವನ್ನು ಹೊಂದಿದೆ ಎಂದರು.
ಕೋವಿಡ್ ಸಮಯದಲ್ಲಿ ಜನರು ಮುಂಜಾಗ್ರತಾ ಕ್ರಮವಾಗಿ ಆಯುರ್ವೇದ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಿ ಕಷಾಯವನ್ನು ಸೇವಿಸುತ್ತಿದ್ದರು. ಇದರಿಂದ ಅನೇಕರು ಪ್ರಯೋಜನ ಪಡೆದರು ಎಂದು ತಿಳಿಸಿದರು.
ಔಷಧ ಸಸ್ಯವಲಯದ ಕ್ರಿಯಾ ಯೋಜನೆ (2023-33) 10 ವರ್ಷದ ಯೋಜನೆಯಾಗಿದೆ. ಯೋಜನೆಯ ಬಗ್ಗೆ ಚರ್ಚೆ ಮಾಡಿ ಎರಡು ಮೂರು ವರ್ಷಕ್ಕೊಮ್ಮೆ ಸಾಧ್ಯವಾದರೆ ತಿದ್ದುಪಡಿ ಮಾಡಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎ. ಸುದರ್ಶನ್ ಮಾತನಾಡಿದರು. ಕರ್ನಾಟಕ ಆಯುರ್ವೇದ ಔಷಧ ತಯಾರಕರ ಸಂಘದ ಅಧ್ಯಕ್ಷ ಡಾ. ನಿರಂಜನ್‌ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಸಹಯೋಗದೊಂದಿಗೆ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 19 =
Remember me
