ಗೌರಿಬಿದನೂರು:ದೇಶದಲ್ಲೇ ಪ್ರಪ್ರಥಮವಾಗಿ ಡ್ರೋನ್ ಮೂಲಕ ಔಷಧ ಸಾಗಿಸುವ 45 ದಿನಗಳ ಪ್ರಾಯೋಗಿಕ ಪರೀಕ್ಷೆಗೆ ತಾಲೂಕಿನ ಶಂಭೂಕ ನಗರದಲ್ಲಿ ಸೋಮವಾರ ಚಾಲನೆ ಸಿಕ್ಕಿತು. ಮೊದಲ ದಿನ 2.5 ಕೆಜಿ ತೂಕ ಹೊಂದಿದ್ದ ಔಷಧ ಕಿಟ್ ಹೊತ್ತ ಡ್ರೋನ್, 2.5 ಕಿ.ಮೀ. ವೈಮಾನಿಕ ದೂರವನ್ನು 250 ಅಡಿ ಎತ್ತರದಲ್ಲಿ 7 ನಿಮಿಷದಲ್ಲಿ ತಲುಪಿತು. ಪ್ರವಾಹ, ಯುದ್ಧ, ಅಪಘಾತ ಇನ್ನಿತರ ತುರ್ತು ಸಂದರ್ಭಗಳಲ್ಲಿ ದೂರದ ಪ್ರದೇಶಗಳಿಗೆ ಔಷಧ, ರಕ್ತವನ್ನು ಡ್ರೋನ್ ಮೂಲಕ ಕ್ಷಿಪ್ರಗತಿಯಲ್ಲಿ ಸಾಗಿಸುವ ನಿಟ್ಟಿನಲ್ಲಿ ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಹಾಗೂ ಟಿಎಎಸ್ ಕಂಪನಿ ಹಾಗೂ ನಾರಾಯಣ ಹೃದಯಾಲಯದ ಸಹಭಾಗಿತ್ವದಲ್ಲಿ ಪ್ರಯೋಗ ನಡೆಸಲಾಗುತ್ತಿದೆ.
ಮೊದಲ ದಿನ ಶಂಭೂಕ ನಗರದಿಂದ 2.5 ಕಿ.ಮೀ (ವೈಮಾನಿಕ ದೂರ) ದೂರದಲ್ಲಿರುವ ಹುದೂತಿ ನಾಗಸಂದ್ರಕ್ಕೆ (ರಸ್ತೆ ಮಾರ್ಗ 7 ಕಿ.ಮೀ) ಡ್ರೋನ್ 7 ನಿಮಿಷಗಳಲ್ಲಿ ತಲುಪಿತು. ಇದೇ ರೀತಿ ಸುತ್ತಲ ಪ್ರದೇಶಗಳಲ್ಲಿ ಮೂರು ಪ್ರಯೋಗ ನಡೆಸಲಾಯಿತು. ಇದು ಯಶಸ್ವಿಯಾದರೆ ಕರೊನಾ ಲಸಿಕೆ ಸಾಗಣೆಗೂ ಬಳಸಬಹುದಾಗಿದೆ.
15 ಕಿ.ಮೀ ಗುರಿ:ಬಿಯಾಂಡ್ ವಿಜುವಲ್ ಸೈಟ್ ಆಫ್ ಲಾಸ್ (ಬಿವಿ ಲಾಸ್) ಅಂದರೆ ಕಣ್ಣಿಗೆ ಕಾಣದ ದೂರಕ್ಕೆ ಡ್ರೋನ್​ಗಳ ಮೂಲಕ ರವಾನೆ ಮಾಡುವ ಪರೀಕ್ಷೆ ಮಾಡಲಾಗುತ್ತಿದೆ. ಇದಕ್ಕೆ 2 ಮಾದರಿ ಡ್ರೋನ್ ಬಳಸಲಾಗುತ್ತಿದ್ದು, ಒಂದು ಡ್ರೋನ್ 15 ಕಿ.ಮೀ. ದೂರಕ್ಕೆ 1 ಕೆ.ಜಿ. ಹಾಗೂ ಮತ್ತೊಂದು 12 ಕಿ.ಮೀ ದೂರಕ್ಕೆ 2 ಕೆ.ಜಿ.ಸಾಮರ್ಥ್ಯದ ಸಾಮಗ್ರಿ ಸಾಗಿಸುವ ಪ್ರಯೋಗ ನಡೆಸಲಾಗುತ್ತಿದೆ. 35 ಮಂದಿ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟಿಎಎಸ್ ಕಂಪನಿ ಸಿಇಒ ಕೆ.ನಾಗೇಂದ್ರ ತಿಳಿಸಿದ್ದಾರೆ.
ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

ಭಾರತದಲ್ಲಿ ಇಂದು ಒಂದು ಸೆಕೆಂಡ್​ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
