|ಪಂಕಜ ಕೆ.ಎಂ.ಬೆಂಗಳೂರು
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗಿ ಜನರು ತುಸು ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ಬ್ಲ್ಯಾಕ್​ ಫಂಗಸ್ (ಕಪ್ಪು ಶಿಲೀಂಧ್ರ) ಪ್ರಕರಣ ದಿಢೀರ್ ಏರಿಕೆಯಾಗುತ್ತಿದ್ದು, ಇದರ ಚಿಕಿತ್ಸೆಗೆ ನೀಡಲಾಗುವ ಔಷಧಗಳ ಅಭಾವ ಉಂಟಾಗಿರುವುದು ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಬ್ಲ್ಯಾಕ್​ ಫಂಗಸ್ ಸೋಂಕಿತರ ಸಂಖ್ಯೆ 1,034 ತಲುಪಿದೆ. ಸೋಂಕಿತರಿಗೆ ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಎಂಬ ಔಷಧ ನೀಡಬೇಕಾಗುತ್ತದೆ. ಈ ಔಷಧದ ವೆಚ್ಚ ದಿನಕ್ಕೆ ಒಬ್ಬ ವ್ಯಕ್ತಿಗೆ 15 ರಿಂದ 20 ಸಾವಿರ ರೂ. ಆಗುತ್ತದೆ. 10 ರಿಂದ 30 ದಿನಗಳವರೆಗೆ ಇದನ್ನು ನೀಡಬೇಕಾಗುತ್ತದೆ.
ಉಚಿತ ಚಿಕಿತ್ಸೆ:ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹಾಸಿಗೆಗಳ ಕೊರತೆಯಿಂದಾಗಿ ಖಾಸಗಿಯಲ್ಲಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದೆ. ಆದರೆ, ಔಷಧ ದುಬಾರಿಯಾಗಿರುವ ಕಾರಣ ಪ್ರತಿ ರೋಗಿಗೆ ಚಿಕಿತ್ಸೆಗೆ 4 ಲಕ್ಷದಿಂದ 5 ಲಕ್ಷ ವೆಚ್ಚವಾಗುತ್ತಿದೆ. ಖಾಸಗಿಯಲ್ಲಿಯೂ ಔಷಧಗಳ ಕೊರತೆ ಎದುರಾಗಿದ್ದು, ವೈದ್ಯರು ರೋಗಿಗಳ ಕುಟುಂಬಸ್ಥರಿಗೆ ಔಷಧ ತರಲು ಸೂಚಿಸುತ್ತಿದ್ದಾರೆ.
ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಔಷಧ ಕೊರತೆ ಕಾರಣ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ವೈದ್ಯರು ಅಸಹಾಯಕತೆ ತೋಡಿಕೊಂಡಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸ್ಟೆರಾಯ್್ಡ ಪಡೆದವರಿಗೆ, ದೀರ್ಘಕಾಲ ಐಸಿಯುನಲ್ಲಿದ್ದು, ಆಕ್ಸಿಜನ್ ಮತ್ತು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆದವರಿಗೆ, ಅನಿಯಂತ್ರಿತ ಮಧುಮೇಹ ಹೊಂದಿದವರಿಗೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ಲಾ್ಯಕ್ ಫಂಗಸ್ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಸೋಂಕಿಗೆ ಒಳಗಾಗಿ ಗುಣ ಹೊಂದಿದ ನಂತರವೂ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬ್ಲಾ್ಯಕ್ ಫಂಗಸ್​ನ ಯಾವುದೇ ರೋಗ ಲಕ್ಷಣಗಳು ಕಂಡು ಬಂದರೂ ಕೂಡಲೇ ಇಎನ್​ಟಿ ವೈದ್ಯರನ್ನು ಸಂರ್ಪಸಿ ಚಿಕಿತ್ಸೆ ಪಡೆಯಬೇಕು ಎನ್ನುತ್ತಾರೆ ತಜ್ಞರು.
ಸೋಂಕಿನ ಪ್ರಮುಖ ಲಕ್ಷಣಗಳು:ಅತಿಯಾದ ತಲೆನೋವು, ಕಣ್ಣು ನೋವು, ಕಣ್ಣು ಕೆಂಪಾಗುವುದು, ಕಿವಿಯ ಹಿಂದೆ ಊತ, ಕಣ್ಣು ಗುಡ್ಡೆ ಮುಂದೆ ಬರುವುದು, ಕಣ್ಣಿನ ಸುತ್ತಲಿನ ಭಾಗದಲ್ಲಿ ನೋವು, ಚರ್ಮ ಕಪ್ಪಾಗುವಿಕೆ, ದವಡೆ ಭಾಗದಲ್ಲಿ ನೋವು, ಮೂಗು ಕಟ್ಟುವಿಕೆ, ಹಲ್ಲುಗಳು ಸಡಿಲಗೊಳ್ಳುವುದು, ಮೂಗಿನಲ್ಲಿ ರಕ್ತ ಸೋರುವಿಕೆ ಬ್ಲಾ್ಯಕ್ ಫಂಗಸ್​ನ ಪ್ರಮುಖ ಲಕ್ಷಣಗಳಾಗಿವೆ.
ಎಲ್ಲಿ ಎಷ್ಟು ಪ್ರಕರಣಗಳು?:ಬೆಂಗಳೂರು ನಗರ 476, ಧಾರವಾಡ 110, ಕಲಬುರಗಿ 81, ಕೋಲಾರ 46, ವಿಜಯಪುರ 44, ಬಾಗಲಕೋಟೆ 37, ಮೈಸೂರು 34, ಶಿವಮೊಗ್ಗ 33, ಬೆಳಗಾವಿ 28, ತುಮಕೂರು ಮತ್ತು ರಾಯಚೂರು ತಲಾ 23, ಬೆಂಗಳೂರು ಗ್ರಾಮಾಂತರ 19, ದಾವಣಗೆರೆ 18, ಬೀದರ್ 12, ಉಡುಪಿ 10, ಹಾಸನ 9, ಕೊಪ್ಪಳ 8, ಬಳ್ಳಾರಿ, ಗದಗ ಮತ್ತು ದಕ್ಷಿಣ ಕನ್ನಡ ತಲಾ 6, ಮಂಡ್ಯ, ಯಾದಗಿರಿ ಮತ್ತು ಚಿತ್ರದುರ್ಗ ತಲಾ 3, ಹಾವೇರಿ 2, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಉತ್ತರ ಕನ್ನಡ ತಲಾ ಒಂದು ಸೇರಿ 1,034 ಮಂದಿಗೆ ಬ್ಲಾ್ಯಕ್ ಫಂಗಸ್ ಸೋಂಕು ತಗುಲಿದೆ.
ಲಭ್ಯವಿರುವ ಸ್ವಲ್ಪ ಪ್ರಮಾಣದ ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧವನ್ನು ಅಗತ್ಯ ಇರುವ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ರಾಜ್ಯಕ್ಕೆ 5,190 ವೈಯಲ್ಸ್ ಔಷಧವನ್ನು ನಿಗದಿಪಡಿಸಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಬರಲಿದೆ. ಬಂದ ಕೂಡಲೇ ಅಗತ್ಯ ಇರುವ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು.
|ಡಾ. ತ್ರಿಲೋಕ್ ಚಂದ್ರಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 4 =
Remember me
