| ಹರೀಶ್ ಬೇಲೂರು ಬೆಂಗಳೂರುರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಕಳೆಯುತ್ತಿದ್ದರೂ ರೋಗಿಗಳಿಗೆ ವಿತರಣೆಯಾಗಬೇಕಿರುವ ಔಷಧ ಸಮಸ್ಯೆಗೆ ಮುಕ್ತಿ ದೊರೆತಿಲ್ಲ. ಔಷಧ ಕೊರತೆ ಇರುವ ವಿಚಾರವನ್ನು ಸರ್ಕಾರವೂ ಒಪ್ಪಿಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ 600 ಕೋಟಿ ರೂ. ಮೊತ್ತದ 733 ಔಷಧಗಳಿಗೆ ಬೇಡಿಕೆ ಬಂದಿದೆ. ಆದರೆ, ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್​ಎಂಎಸ್​ಸಿಎಲ್) ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆಗಳ ನಿವಾರಿಸುವ ಔಷಧ ಕೊರತೆ ಉಂಟಾಗಿದೆ. ಇದರಿಂದಾಗಿ ಜೀವರಕ್ಷಕ ಔಷಧಗಳು ಸಿಗದೆ ರೋಗಿಗಳು ಪರದಾಡುವಂತಾಗಿದೆ. ಜತೆಗೆ, ಬಾಕಿ ಬಿಲ್​ಗಳ ವಿಲೇವಾರಿಗೆ ವಿಳಂಬ ಹಿನ್ನೆಲೆಯಲ್ಲಿ ಟೆಂಡರ್​ಗಳಲ್ಲಿ ಭಾಗಿಯಾಗಲು ಕಂಪನಿಗಳು ಹಿಂದೇಟು ಹಾಕಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಂಪನಿಗಳ ಸಂಖ್ಯೆ ಕುಸಿತವಾಗಿದೆ. ಕೆಎಸ್​ಎಂಎಸ್​ಸಿಎಲ್ ಪ್ರತಿವರ್ಷ ನೂರಾರು ಕೋಟಿ ರೂ. ಮೌಲ್ಯದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಆಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ವಿವಿಧ ಔಷಧಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುತ್ತದೆ. ಆದರೆ, ಈ ನಿಗಮವು ಪ್ರಸಕ್ತ ಸಾಲಿನ ಮೇ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಎಲ್ಲ ಬಗೆಯ ಔಷಧ ಹಾಗೂ ವೈದ್ಯಕೀಯ ಉಪಕರಣ ಖರೀದಿಸಿ ದಾಸ್ತಾನು ಮಾಡಬೇಕಿತ್ತು. ಆಗಸ್ಟ್ ಕಳೆಯುತ್ತಿದ್ದರೂ ನಿಗಮ ಇದುವರೆಗೆ ಟೆಂಡರ್ ಪ್ರಕ್ರಿಯೆ ಮುಗಿದಿಲ್ಲ.
ಬಾಕಿ ಬಿಲ್ ಸಮಸ್ಯೆ:ನಿಗಮದಲ್ಲಿ ಫೈಲ್​ಗಳ ವಿಲೇವಾರಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯತ್ತಿದ್ದು, ಇದರಿಂದಾಗಿ ಶೇ.100 ಔಷಧಗಳ ಪೂರೈಕೆ ಮಾಡಿರುವ ಕಂಪನಿಗಳಿಗೆ ನಿಗದಿತ ಸಮಯದಲ್ಲಿ ಪೇಮೆಂಟ್ ಆಗುತ್ತಿಲ್ಲ. 2012ರಿಂದ ಔಷಧ ಬಿಲ್​ಗಳ ಜತೆಗೆ ಕೋಟ್ಯಂತರ ರೂ. ಭದ್ರತಾ ಠೇವಣಿ ಹಾಗೂ ಇಎಂಡಿ ಬಾಕಿಯಿವೆ. 30 ದಿನದೊಳಗೆ ಔಷಧ ಬಿಲ್​ಗಳಿಗೆ ಹಣ ಪಾವತಿಸಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ನಿಗಮದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್​ಎಚ್​ಎಂ) ‘ನಮ್ಮ ಕ್ಲಿನಿಕ್’ಗಳಿಗೆ ಸರಬರಾಜು ಮಾಡಿದ್ದ ಅಂದಾಜು 30-40 ಕೋಟಿ ರೂ. ಔಷಧ ಮತ್ತು ವೈದ್ಯಕೀಯ ಉಪಕರಣ ಬಿಲ್ ಪಾವತಿಯಾಗಿಲ್ಲ. ಜತೆಗೆ, ಆರೋಗ್ಯ ಇಲಾಖೆಯಿಂದ ನಿಗಮಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ನಿಗಮದಲ್ಲಿ 90 ಕೋಟಿ ರೂ. ಔಷಧ ಹಾಗೂ 40 ಕೋಟಿ ರೂ. ವೈದ್ಯಕೀಯ ಉಪಕರಣ ಸೇರಿ ಒಟ್ಟು 130 ಕೋಟಿ ರೂ. ಬಾಕಿ ಇದೆ.
ರಾಜ್ಯದಲ್ಲಿ ಔಷಧ ಕೊರತೆ ಇರುವುದು ನಿಜ. ಕೆಎಸ್​ಎಂಎಸ್​ಸಿಎಲ್​ನ ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಗದಿತ ಸಮಯದಲ್ಲಿ ಟೆಂಡರ್ ಮುಗಿಸಿ ಔಷಧ ದಾಸ್ತಾನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಔಷಧ ಅಭಾವ ತಡೆಗೆ ಮುಂದಿನ ದಿನಗಳಲ್ಲಿ ವಾರ್ಷಿಕ ಟೆಂಡರ್ ಬದಲು ಎರಡು ವರ್ಷಕ್ಕೊಮ್ಮೆ ಟೆಂಡರ್ ಕರೆಯಲಾಗುವುದು.
| ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ಯಾವ ಔಷಧಗಳ ಕೊರತೆ?:ಶ್ವಾಸಕೋಶ, ಕರುಳುಸಂಬಂಧಿ, ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆ ಕಾಯಿಲೆ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಹೃದಯಾಘಾತ, ತುರಿಕೆ, ಫಂಗಸ್, ಮೈಗ್ರೇನ್, ಹುಣ್ಣು, ನೋವು, ಶೀತ, ಅನಸ್ತೇಸಿಯಾ, ಹೃದಯ ಶಸ್ತ್ರಚಿಕಿತ್ಸೆ, ರಕ್ತಹೆಪ್ಪುಗಟ್ಟುವಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ಸೇರಿ ವಿವಿಧ ಗಂಭೀರ ಕಾಯಿಲೆಗಳ ನಿವಾರಣೆಗೆ ಬಳಸುವ ಔಷಧಗಳ ಅಭಾವ ಉಂಟಾಗಿದೆ. ಅಲ್ಬುಮಿನಿ, ಆಂಪ್ಸಿಲಿನ್, ಲೆವೊಥ್ರಕ್ಸಿನ್, ವಿಲ್ಡಗ್ಲೀಪ್ಟಿನ್, ಅಕ್ಲೆವೀರ್, ಪ್ಯಾರಾಸಿಟಾಮಲ್, ನ್ಯುಸ್ಟೊಜಿಮೈನ್, ಸಬ್ಲೋಟಮಲ್, ಅಸ್ಟೋಪೈನ್, ಡಿಕ್ಲೋಮೈನ್, ಮಿಡರೆಲಂ, ಅಝುಥ್ರೊಮೈಸಿನ್, ಥಿಯೋಪ್ಲಲೈನ್, ಡಿಕ್ಲೋಪೆನಕನ್ ಸೇರಿ ವಿವಿಧ ಬಗೆಯ ಮಾತ್ರೆಗಳು, ಚುಚ್ಚುಮದ್ದು, ಗ್ಲೂಕೋಸ್, ಬ್ಯಾಂಡೇಜ್, ಸರ್ಜಿಕಲ್​ಗಳ ಅಗತ್ಯವಿದೆ.
ಇದಕ್ಕೆ ನಾನೇ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗಂದಿದ್ದೇಕೆ?

ಗಾದೆಮಾತು ಪ್ರಕರಣ: ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಮಹತ್ವದ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 19 =
Remember me
