ಬೆಂಗಳೂರು:ಕರೊನಾಗೆ ರೆಮಿಡಿಸಿವಿರ್ ಔಷಧ ಹೌದೋ ಅಲ್ಲವೋ ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ಹಲವರು ಅದಕ್ಕಾಗಿ ಮುಗಿಬೀಳುತ್ತಿರುವುದು ಮುಂದುವರಿದಿದೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದುಬಾರಿ ಬೆಲೆಗೆ ರೆಮಿಡಿಸಿವಿರ್​ ಮಾರಾಟ ಮಾಡುತ್ತಿದ್ದಾರೆ. ದುರಂತವೆಂದರೆ ವೈದ್ಯರೊಬ್ಬರೇ ಈ ಕೃತ್ಯ ಎಸಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಲಭ್ಯ ಖಚಿತ ಮಾಹಿತಿ ಮೇರೆಗೆ ಪೊಲೀಸರು ಖಾಸಗಿ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದ್ದು, ವೈದ್ಯರು ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜಿಗಣಿ ಠಾಣೆಯ ಇನ್​ಸ್ಪೆಕ್ಟರ್ ಶೇಖರ್ ನೇತೃತ್ವದ ಕ್ರೈಂ ತಂಡ ಈ ದಾಳಿಯನ್ನು ನಡೆಸಿದೆ. ಜಿಗಣಿಯ ಸುಹಾಸ್​ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ:ಮದುವೆ ಮಾಡಿಕೊಂಡಿದ್ದಕ್ಕೆ ವಧು-ವರರ ಮೇಲೆ ಬಿತ್ತು ಕೇಸ್; ಎರಡೂ ಕುಟುಂಬಗಳವರ ವಿರುದ್ಧ ಪ್ರಕರಣ ದಾಖಲು
ಬಡ ಕುಟುಂಬದ ಒಬ್ಬರಿಗೆ ಈ ಆಸ್ಪತ್ರೆಯಲ್ಲಿ ರೆಮಿಡಿಸಿವರ್ ಔಷಧ ನೀಡಲು 15 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ಮಾಹಿತಿ ತಿಳಿದ ಪೊಲೀಸರ ತಂಡ, ಮಫ್ತಿಯಲ್ಲಿ ಆಸ್ಪತ್ರೆಗೆ ಹೋಗಿ ಎರಡು ರೆಮಿಡಿಸಿವಿರ್ ಇಂಜೆಕ್ಷನ್​ ಬೇಕು ಎಂದು ಕೇಳಿದ್ದಾರೆ. ಆಗ ಆಸ್ಪತ್ರೆಯವರು 30 ಸಾವಿರ ರೂ. ಕೊಡುವಂತೆ ಹೇಳಿದ್ದಾರೆ. ಅದರಂತೆ ಕೊಟ್ಟ ಹಣವನ್ನು ಸ್ವೀಕರಿಸುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸುಹಾಸ್ ಆಸ್ಪತ್ರೆಯ ವೈದ್ಯ ಫಾರ್ಮನ್ ಅಲಿ ಹಾಗೂ ರಕ್ಷಿತ್ ಎಂಬವರು ಬಂಧಿತರು.
ಇದನ್ನೂ ಓದಿ:ಬಾರ್​-ಮದ್ಯದಂಗಡಿ ಯಾವಾಗಿಂದ ಅತಿ ಅವಶ್ಯಕವಾಯಿತು?; ಸರ್ಕಾರಕ್ಕೆ ಬಿಜೆಪಿ ಶಾಸಕರಿಂದಲೇ ಪ್ರಶ್ನೆ
ಕಳೆದ ಬಾರಿ ಕೋವಿಡ್ ಸಮಯದಲ್ಲೂ ಈ ಆಸ್ಪತ್ರೆ ಕುರಿತು ಸಾಕಷ್ಟು ದೂರು ಕೇಳಿ ಬಂದಿತ್ತು. ಸುಹಾಸ್ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಸಾಕಷ್ಟು ಜನ ರೋಗಿಗಳು ಜೀವ ಕಳೆದುಕೊಂಡ ಆರೋಪ ಕೂಡ ಕೇಳಿ ಬಂದಿತ್ತು. ಇದೀಗ ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟದಲ್ಲಿ ಸಿಕ್ಕಿ ಬಿದ್ದಿದ್ದು, ಸರ್ಕಾರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವ ಆಸ್ಪತ್ರೆಯ ಮುಖ್ಯಸ್ಥ ಜಗದೀಶ್ ಮೇಲೆ ಜಿಗಣಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಉಸಿರಾಟದ ಸಮಸ್ಯೆಯೇ..? ತುರ್ತು ಪರಿಹಾರಕ್ಕೆ ಇಲ್ಲಿದೆ ಸುಲಭದ ಮನೆಮದ್ದು..

ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
