ಬೆಂಗಳೂರು:ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ ಬಗ್ಗೆ ಬೇಸರ ಹೊರಹಾಕಿದ ವಕೀಲೆ ಮೀರಾ ರಾಘವೇಂದ್ರ, “ಎಂಥವರಿಗೆ ಸೆಕ್ಯುರಿಟಿ ಕೊಡುವ ಕಾಲ ನಮ್ಮ ಪೊಲೀಸರಿಗೆ ಬಂತು?” ಎಂದು ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಸರಣಿ ಪೋಸ್ಟ್​ ಮಾಡಿದ್ದಾರೆ.
“ಈ ಹಿಂದೆ ಇಂಥಹ‌ ಕೇಸ್​ಗಳಲ್ಲಿ ಮೃತಪಟ್ಟ ಮಹಿಳೆಯರು ಯಾರಿಗೂ ಬೇಡವಾದರು. ಕರೊನಾಗಿಂತಲೂ ಭಯಾನಕ ಈ ಸಿಡಿ ಕೇಡಿಗಳ ಕಥಾನಕ. ಸಿಡಿ ಕಥನದಲ್ಲಿ ಎಲ್ಲರೂ ವಿಲನ್​ಗಳೇ. ಒಂದು ಸಾಲು ಬಹಳ ಇಷ್ಟ ಆಗಿದ್ದು ಹುಡುಗಿ “ತಮ್ಮ” ಹೇಳಿದ ಮಾತು ”ಎರಡು ಹೊತ್ತು ಊಟ ಮಾಡೋಣ ಸಾಕು ಬಾ”. ಬಹಳ ಬೇಜಾರಾಗಿದ್ದು ಮಾತ್ರಾ ಎಕ್ಸ್ ಆರ್ಮಿ ತಂದೆಗೆ ಎಂಥಾ ಅವಮಾನ ಈ ಸಿಡಿಯಿಂದ? ದೇವರು ಅವರಿಗೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿರಿಸುಳ್ಳು‌ ದೂರಿಗೆ ನನ್ನಿಂದ ಹೆಂಡತಿ‌-ಮಕ್ಕಳು ದೂರವಾದರು: ಆರ್​. ಅಶೋಕ್​ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್​ ವಾಗ್ದಾಳಿ
ನಿಜವಾಗಿ ರೇಪ್​ಗೆ ಒಳಪಟ್ಟವರು ಎಷ್ಟೋ ಹೆಣ್ಣುಮಕ್ಕಳು ಇದ್ದಾರೆ. ಅವರ ಸಹಾಯಕ್ಕೆ ಯಾರೂ ಇಲ್ಲ. ನಾನು ಇತ್ತೀಚೆಗೆ ನೆಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬದವರನ್ನ ಭೇಟಿ ಮಾಡಿ ಅವರ ಕಥೆಯನ್ನ ಪೋಸ್ಟ್ ಮಾಡಿದ್ದೆ. ಅವರನ್ನು ಯಾರೂ ಕೇಳಿ ನೋಡಿಲ್ಲ. ನನ್ನ ಕೈಯಿಂದ ಆಗೋ ಸಹಾಯವಷ್ಟೆ ಮಾಡೋಕೆ ಆಯ್ತು. ಕುಟುಂಬದಲ್ಲಿ ನಾಲ್ವರು ಹೆಣ್ಣುಮಕ್ಕಳು, ಅವರು ಕೂಡ ದಲಿತರು. ಆದರೂ ಅವರ ಬಗ್ಗೆ ಯಾರೂ ತಲೆಕೆಡೆಸಿಕೊಳ್ಳಲಿಲ್ಲ. ಇಂದು ರಾಜಕೀಯ ಬೇಳೆ ಬೇಯಿಸೋಕೆ ಮಾತ್ರ ಸಿಡಿ ಲೇಡಿಯೊಂದಿಗೆ ಒಂದು ಪಕ್ಷವೇ ನಿಂತಿದ ಎಂದು ಕಾಂಗ್ರೆಸ್​ ವಿರುದ್ಧ ಮೀರಾ ರಾಘವೇಂದ್ರ ಕಿಡಿಕಾರಿದ್ದಾರೆ.
ಇತ್ತೀಚಿಗೆ ಹಿಂದು ಧರ್ಮದ ಬಗ್ಗೆ ಅವಹೇಳನಾಕಾರಿ ಹೇಳಿಕೆ ಕೊಟ್ಟಿದ್ದ ಪ್ರೊ.ಭಗವಾನ್​ ಮುಖಕ್ಕೆ ಕೋರ್ಟ್​ ಆವರಣದಲ್ಲೇ ಮಸಿ ಬಳಿಯುವ ಮೂಲಕ ಮೀರಾ ರಾಘವೇಂದ್ರ ಸುದ್ದಿಯಲ್ಲಿದ್ದರು.
ನಾನು ನಂದಿ ಅಲ್ಲ, ಜಗದೀಶ! ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ: ಸಿಡಿ ಲೇಡಿ ವಕೀಲರ ಖಡಕ್​ ವಾರ್ನಿಂಗ್​ ಯಾರಿಗೆ?

ಮೂರು ಪುಟ್ಟ ಕಂದಮ್ಮಗಳ ಕಣ್ಣೆದುರಲ್ಲೇ ತಾಯಿ ದುರಂತ ಸಾವು! ‘ನನ್ನನ್ನು ಎತ್ತಿಕೊಳ್ಳಮ್ಮಾ…’ ಎಂದು ಶವದ ಮುಂದೆ ಕಣ್ಣೀರಿಟ್ಟ ಮಕ್ಕಳು

ಪತಿಯನ್ನ ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ! ಬೇಲ್​ ಮೇಲೆ ಹೊರ ಬಂದವಳಿಂದ ಮತ್ತೊಂದು ನೀಚ ಕೃತ್ಯ

ಮಗಳನ್ನು ಕೊಟ್ಟಿದ್ದಲ್ಲದೇ, ನಿತ್ಯ ಹಸಿವು ನೀಗಿಸುತ್ತಿದ್ದ ಅತ್ತೆಯನ್ನೇ ಕೊಂದ ಅಳಿಯ! ಕಾರಣ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
