ಮಂಡ್ಯ:ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರೈತ ಸಂಘದ ನಾಯಕ ದರ್ಶನ್​ ಪುಟ್ಟಣ್ಣಯ್ಯ ಅವರು ವಿದೇಶಕ್ಕೆ ತೆರಳಿದ್ದಾರೆ.
ಹೆಂಡತಿ ಮತ್ತು ಮಕ್ಕಳನ್ನು ನೋಡಲು ದರ್ಶನ್​ ಪುಟ್ಟಣ್ಣಯ್ಯ ಅವರು ಅಮೆರಿಕಗೆ ತೆರಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆಂದು ದರ್ಶನ್​ ಅವರು ಐದು ತಿಂಗಳ‌ ಹಿಂದೆ ಮಂಡ್ಯಗೆ ಬಂದಿದ್ದರು. ಚುನಾವಣೆ ಮುಗಿದು ಜಯಶಾಲಿಯಾಗಿರುವ ದರ್ಶನ್​ ಅವರು ಕೊಂಚ ಬಿಡುವು ಮಾಡಿಕೊಂಡು ಇದೀಗ ಹೆಂಡತಿ ಮಕ್ಕಳನ್ನು ನೋಡಲು ಅಮೆರಿಕಗೆ ತೆರಳಿದ್ದಾರೆ.
ಇದನ್ನೂ ಓದಿ:ಹಾವುಗಳು ಸರ್ಕಾರಕ್ಕೆ ಸೇರಿದ್ದು ಎಂದಾದರೆ, ಕೋಳಿಗಳು ನನಗೆ ಸೇರಿದ್ದು: ಪರಿಹಾರ ಬೇಕೇ ಬೇಕೆಂದ ವ್ಯಕ್ತಿ
ಈ ಬಗ್ಗೆ ಮಾತನಾಡಿರುವ ದರ್ಶನ್​, ಪತ್ನಿ ಮತ್ತು ಮಕ್ಕಳನ್ನು ನೋಡಿ 5 ತಿಂಗಳು‌ ಆಗಿವೆ. ಹೀಗಾಗಿ ಅವರನ್ನು ನೋಡಲು ಅಮೆರಿಕಗೆ ಹೋಗುತ್ತಿದ್ದೇನೆ. 10 ದಿನಗಳ ಬಳಿಕ ವಾಪಸ್​ ಬರುತ್ತೇನೆ. ಅಲ್ಲಿಯವರೆಗೂ ಎಲ್ಲರೂ ಶಾಂತಿಯಿಂದ‌ ಇರಬೇಕು. ಜನರಿಗೆ ಏನಾದರೂ ಸಮಸ್ಯೆ ಇದ್ದರೆ ನನ್ನ ನಂಬರ್‌ಗೆ ಕರೆ ಮಾಡಿ. ನಮ್ಮ ಕಡೆಯವರು‌ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಅಮೆರಿಕದಿಂದ ಬಂದು ಎಲ್ಲರನ್ನು ಕಾಣುತ್ತೇನೆ ಎಂದು ಅಮೆರಿಕಗೆ‌ ಹೊರಡುವ ಮುನ್ನ ವಿಡಿಯೋ ಸಂದೇಶವನ್ನು ಹರಿಬಿಟ್ಟಿದ್ದಾರೆ.
ಅಂದಹಾಗೆ ದರ್ಶನ್​ ಪುಟ್ಟಣ್ಣಯ್ಯ ಅವರು ಪುಟ್ಟರಾಜು ವಿರುದ್ಧ ಜಯ ದಾಖಲಿಸಿದರು. ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್​ ಸ್ಪರ್ಧಿಸಿದರು. ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್​ ಬೆಂಬಲ ನೀಡಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್​ ಪುಟ್ಟಣ್ಣಯ್ಯ ಮೇಲೆ ಜನರ ನಿರೀಕ್ಷೆ ತುಂಬಾ ಇದೆ. (ದಿಗ್ವಿಜಯ ನ್ಯೂಸ್​)
ಪದಗ್ರಹಣ ಸಮಾರಂಭಕ್ಕೆ ರೈಲಿನಲ್ಲಿ ಆಗಮಿಸಿದ ಶಾಸಕ: ಸರಳತೆ ಮೆರೆದ ದರ್ಶನ್ ಪುಟ್ಟಣ್ಣಯ್ಯ

ನಾಪತ್ತೆಯಾಗಿದ್ದವರನ್ನು ಹುಡುಕಲು ಹೋಗಿದ್ದ ಪೊಲೀಸರಿಗೆ ಸಿಕ್ಕಿದ್ದು 45 ಮನುಷ್ಯ ಮೃತದೇಹದ ಚೀಲಗಳು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 10 =
Remember me
