ಬೆಂಗಳೂರು:ದೇಶದ ಅತೀದೊಡ್ಡ ರಾಜಕೀಯ ರಹಿತ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘವು ಫೆ.೧ ರಿಂದ ೧೦ ರ ವರೆಗೆ ಸದಸತ್ವ ಅಭಿಯಾನ ಕೈಗೊಂಡಿದೆ ಎಂದು ಸಂಘದ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ತಿಳಿಸಿದ್ದಾರೆ.ಮಂಗಳವಾರ ಪ್ರೆಸ್‌ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪೫ ವರ್ಷಗಳಿಂದ ಭಾರತೀಯ ಕಿಸಾನ್ ಸಂಘ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸಂಘದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸದಸತ್ವ ಅಭಿಯಾನ ಮಾಡಲಾಗುವುದು. ಕಳೆದ ವರ್ಷ ದಕ್ಷಿಣ ಪ್ರಾಂತದಿಂದ ೬೦ ಸಾವಿರ ಮತ್ತು ಉತ್ತರ ಪ್ರಾಂತದಿಂದ ೧ ಲಕ್ಷ ಸದಸತ್ವ ಮಾಡಲಾಗಿತ್ತು. ಈ ವರ್ಷ ಐದು ಲಕ್ಷ ಸದಸತ್ವದ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ದೇಶದ ಅತಿ ಹೆಚ್ಚು ಸದಸತ್ವ ಹೊಂದಿರುವ ಸಂಘಟನೆಯೆಂದರೆ ಅದು ನಮ್ಮ ಕಿಸಾನ್ ರೈತ ಸಂಘಟನೆಯಾಗಿದೆ. ದೇಶದ ಎಲ್ಲ ರಾಜ್ಯ, ಜಿಲ್ಲೆ ಮತ್ತು ತಾಲೂಕುಗಳಲ್ಲಿ ನಮ್ಮ ಸಂಘ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಇಡೀ ದೇಶದಲ್ಲಿ ೬೦ ಲಕ್ಷ ಸದಸತ್ವವಿತ್ತು. ಈ ವರ್ಷ ೧ ಕೋಟಿ ಸದಸತ್ವ ಮಾಡುವ ಗುರಿಯಿದೆ. ಕಳೆದ ವರ್ಷ ೫೦ ಸಾವಿರ ಗ್ರಾಮಸಮಿತಿಗಳನ್ನು ಇಡೀ ದೇಶದಲ್ಲಿ ಹೊಂದಲಾಗಿತ್ತು. ಈ ವರ್ಷ ೧ ಲಕ್ಷ ಗ್ರಾಮ ಸಮಿತಿಗಳನ್ನು ಮಾಡಲು ಹೊರಟಿದ್ದೇವೆ. ಕನಿಷ್ಠ ಒಂದು ಗ್ರಾಮದಲ್ಲಿ ೫೦ ಸದಸತ್ವನ್ನು ಮಾಡಿ ಅಲ್ಲಿ ೭ ಜನರನ್ನೊಳಗೊಂಡ ಒಂದು ಸಮಿತಿಯನ್ನು ಮಾಡುತ್ತೇವೆ. ಹೀಗಾಗಿ ನಮ್ಮ ಸಂಘ ರಚನಾತ್ಮಕವಾಗಿ, ಸಂಘಟನಾತ್ಮಕವಾಗಿ ಮತ್ತು ಆಂದೋಲನಾತ್ಮಕವಾಗಿ ಮೂರು ರೀತಿಯಲ್ಲಿಯೂ ಕೆಲಸವನ್ನು ನಿರ್ಗಳವಾಗಿ ಮಾಡುತ್ತಿದೆ.ಇದು ಗ್ರಾಮ ಮಟ್ಟದಲ್ಲಿ ಹೆಚ್ಚಿನ ಮನ್ನಣೆಯನ್ನು ಗಳಿಸಿದೆ. ೧೮ ಮೇಲ್ಪಟ್ಟವರು ಸಂಘದ ಸದಸ್ಯರಾಗಬಹುದು. ಫೆ.೧ ರಿಂದ ೧೦ ರ ವರೆಗೆ ಸದಸತ್ವ ಅಭಿಯಾನ ದಿನವಾಗಿದೆ. ೨೦೨೪ ರಿಂದ ೨೦೨೭ ರವೆಗೆ ಮೂರು ವರ್ಷಗಳ ಕಾಲ ಸದಸತ್ವದ ಅವಧಿ ಇರುತ್ತದೆ. ನಾವು ವರ್ಷ ಪೂರ್ತಿ ಸದಸತ್ವ ಮಾಡುವುದಿಲ್ಲ. ಬದಲಾಗಿ ನಿಗದಿತ ಅವಧಿಯಲ್ಲಿ ಮಾತ್ರ ಸದಸತ್ವ ಮಾಡಲಾಗುವುದು. ರೈತರನ್ನು ಸಂಘಟಿತರನ್ನಾಗಿ ಮಾಡಿ ರೈತರ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ಸಂಗ್ರಹಿಸಿ ಸರ್ಕಾರದ ಮುಂದಿಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − two =
Remember me
