ಬೆಂಗಳೂರು:ಬಿಕ್ಕಟ್ಟಿನ ಸಮಯದಲ್ಲಿ ನಾವು ಕಲಿತ ಕೆಲಸಗಳು ಆರಾಮವಾಗಿರುವ ಸಂದರ್ಭದಲ್ಲಿ ಸಹಾಯ ಮಾಡುತ್ತವೆ. ಮನೆಯ ಕೆಲಸವನ್ನು ಎಲ್ಲರೂ ಹಂಚಿಕೊಂಡಾಗ ಪ್ರೀತಿ ದ್ವಿಗುಣಗೊಳ್ಳುತ್ತದೆ ಎಂಬ ಸಂದೇಶ ಸಾರುವ ಏರಿಯಲ್ ಇಂಡಿಯಾ ಕಂಪನಿಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ವಿಡಿಯೋವನ್ನು ಈಗಾಗಲೇ 10 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಕಷ್ಟದ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರು ಕೆಲಸಗಳನ್ನು ಹಂಚಿಕೊಂಡು ಮಾಡಿ ಮುಗಿಸಿದಾಗ ದೊರೆಯುವ ಪ್ರೀತಿ ಹಾಗೂ ಸಂತೋಷವನ್ನು ಈ ವಿಡಿಯೋ ಹೇಳುತ್ತದೆ.
ಏರಿಯಲ್ ಇಂಡಿಯಾ ಕಂಪನಿ 2015ರಲ್ಲಿ ಕುಟುಂಬದ ಕೆಲಸಗಳಲ್ಲಿ ಬಟ್ಟೆ ತೊಳೆಯುವುದು ಹಾಗೂ ಇಸ್ತ್ರಿ ಮಾಡುವುದು ಕೇವಲ ಮಹಿಳೆಗಷ್ಟೇ ಸೀಮಿತವೇ, ಇದು ಅಸಮಾನತೆ ಅಲ್ಲವೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿತ್ತು. ಅಲ್ಲದೆ 2016ರಲ್ಲಿ ‘ಅಪ್ಪ.. ನೀನೂ ಕೆಲಸವನ್ನು ಹಂಚಿಕೋ’ (ಡ್ಯಾಡ್ ಶೇರ್ ದಿ ಲೋಡ್) ಎನ್ನುವ ಅಭಿಯಾನವನ್ನು ಆರಂಭಿಸಿತ್ತು. 2019ರಲ್ಲಿ ಮಕ್ಕಳು ಮನೆ ಕೆಲಸವನ್ನು ಹಂಚಿಕೊಳ್ಳಬೇಕು. ಈಗ 2020ರಲ್ಲಿ ಮನೆ ಕೆಲಸವನ್ನು ಸಮಾನವಾಗಿ ಎಲ್ಲರೂ ಹಂಚಿಕೊಂಡು ಮಾಡಬೇಕು ಎಂಬ ಚಿಂತನೆ ಹುಟ್ಟು ಹಾಕಿತ್ತು. ಕಂಪನಿಯ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಕೇವಲ ಮಹಿಳೆಗಷ್ಟೇ ಮನೆಕೆಲಸ ಅಲ್ಲ, ಅದರಲ್ಲಿ ಅಪ್ಪ, ಮಕ್ಕಳು ಎಲ್ಲರೂ ಭಾಗಿಯಾಗಬೇಕು ಎನ್ನುವ ಪ್ರತಿಕ್ರಿಯೆ ಬಂದಿದೆ. ಅದರಂತೆ ಎಲ್ಲರೂ ಕೆಲಸ ಹಂಚಿಕೊಂಡು ಮಾಡಿರುವ ವಿಡಿಯೋ ಹಾಗೂ ಫೋಟೋಗಳನ್ನು ಅಪ್​ಲೋಡ್ ಮಾಡಿದ್ದಾರೆ. ಪತಿ, ಪತ್ನಿ, ಮಕ್ಕಳು, ಅಜ್ಜ, ಅಜ್ಜಿ ಎಲ್ಲರೂ ಸೇರಿಕೆಲಸ ಮಾಡುವ ವಿಡಿಯೋಗಳು ಬಂದಿದ್ದವು. ಪುರುಷರು ಮನೆಕೆಲಸಗಳಲ್ಲಿ ಹಿಂದೆಗಿಂತ ಇಂದು ಹೆಚ್ಚು ಮಂದಿ ತೊಡಗಿಸಿಕೊಂಡಿರುವುದು ಇದರಿಂದ ಪತ್ತೆಯಾಗಿದೆ.
ಸಮಾನ ಎಂಬ ಭಾವ ಮೂಡಿದೆ
ಈ ಅಭಿಯಾನದನ ಬಗ್ಗೆ ಪ್ರಾಕ್ಟರ್ ಆಂಡ್ ಗ್ಯಾಂಬಲ್(ಭಾರತ) ಕಂಪನಿ ಮುಖ್ಯಸ್ಥ ಶರತ್ ವರ್ಮ ಮಾತನಾಡಿ, ಬಟ್ಟೆ ತೊಳೆಯುವುದು ಸೇರಿ ಹಲವು ಮನೆ ಕೆಲಸಗಳನ್ನು ಪುರುಷರು ಈಗ ಮಾಡುತ್ತಿದ್ದಾರೆ. ಮನೆಯ ಕೆಲಸಗಳಲ್ಲಿ ಸಮಾನತೆ ತರಲು ಪುರುಷರು ಶ್ರಮಿಸುತ್ತಿದ್ದಾರೆ. ಮನೆ ಕೆಲಸದಲ್ಲಿ ಪುರುಷರು ಕೂಡ ಮಹಿಳೆಯರಷ್ಟೇ ಸಮಾನ ಎನ್ನುವ ಭಾವನೆ ಮೂಡಿದೆ ಎಂದು ಹೇಳಿದ್ದಾರೆ.
ಲಿಂಗ ತಾರತಮ್ಯ ನಿವಾರಣೆ
2014ರಲ್ಲಿ ಮನೆ ಕೆಲಸ ಮಹಿಳೆಯರಿಗೆ ಮಾತ್ರ ಎಂದು ಶೇ. 99 ಪುರುಷರು ಭಾವಿಸಿದ್ದರು. 2019ರಲ್ಲಿ ಇದು ಶೇ.41 ಕ್ಕೆ ಇಳಿದಿದೆ. ಈ ಅಂಕಿ-ಅಂಶ ಪುರುಷರು ಮನೆ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಲಿಂಗ ತಾರತಮ್ಯ ಕೂಡ ನಿವಾರಣೆಯಾಗುತ್ತಿದೆ. ಲಾಕ್​ಡೌನ್ ವೇಳೆ ಪುರುಷರು ಹಾಗೂ ಮಹಿಳೆಯರು ಎನ್ನುವ ತಾರತಮ್ಯ ಇಲ್ಲದೆ ಕೆಲಸ ಹಂಚಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಸಮುದಾಯಕ್ಕೆ ಸೋಂಕು? ರಾಜ್ಯದಲ್ಲಿ ಕೈಮೀರಿತೇ ಕರೊನಾ; ಆರೋಗ್ಯ ತಜ್ಞರ ಅನುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 15 =
Remember me
