ದಾವಣಗೆರೆ:ಸೀರೆ ಎಂದರೆ ಮಹಿಳೆಯರಿ ಸಖತ್​ ಇಷ್ಟ ಎನ್ನುವುದು ಗೊತ್ತಿರುವ ವಿಚಾರ. ಇತ್ತೀಚೆಗೆ ವಿದೇಶಿ ಮಹಿಳೆಯರು ಕೂಡಾ ಸೀರೆಯನ್ನು ಇಷ್ಟ ಪಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಸೀರೆ ಕಡೆಮೆ ಬೆಲೆ ಸಿಗುತ್ತದೆ ಎಂದರೆ ನಮ್ಮನೆಯ ಹೆಣ್ಣುಮಕ್ಕಳು  ಅದೆಷ್ಟೇ ನೂಕುನುಗ್ಗಲು ಇರಲಿ ನನಗೂ ಒಂದು ಸೀರೆ ಬೇಕು ಎಂದು ಮುನ್ನುಗ್ಗುತ್ತಾರೆ. ಹೀಗೆ ದಾವಣಗೆರೆಯಲ್ಲಿ ಸೀರೆಗಾಗಿ ಮಹಿಳಯರ ಜತೆಗೆ ಗಂಡಸರು ಕೂಡಾ ಮುಗಿಬಿದ್ದ ವಿಡಿಯೋ ವೈರಲ್​​ ಆಗಿದೆ.
ಶ್ರಾವಣ ಮಾಸಕ್ಕೂ ಮುನ್ನೆ ಬಿಎಸ್ ಚನ್ನಬಸಪ್ಪ ಅಂಗಡಿಯಲ್ಲಿ ಆಫರ್ ನೀಡಲಾಗಿತ್ತು. ಹೀಗಾಗಿ ಈ ಆಫರ್ ಪಡೆಯಲು ನೂರಾರು ಮಹಿಳೆಯರು ಗಲಾಟೆ ನಡೆಸಿದ್ದಾರೆ. ದಾವಣಗೆರೆ ಕಾಳಿಕಾ ರಸ್ತೆಯಲ್ಲಿರುವ ಬಿಎಸ್ ಚನ್ನಬಸಪ್ಪ ಅಂಗಡಿಯಲ್ಲಿನಾರಿಯರು ಸೀರೆಗಾಗಿ ಭಾರೀ ಕಿತ್ತಾಟ ನಡೆಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
10 ಶೇಕಡಾ ಡಿಸ್ಕೌಂಟ್ ನೀಡಿ, ಅದನ್ನು ಡಬಲ್ ಡಿಸ್ಕೌಂಟ್ ಎಂದು ಘೋಷಣೆ ಮಾಡಲಾಗಿತ್ತು. ಹೀಗಾಗಿ ಒಂದು ಸಾರಿಗೆ ಒಟ್ಟು 20% ಆಫರ್ ನೀಡಲಾಗಿತ್ತು. ಈ ಆಫರ್​​​ನಲ್ಲಿ ಸೀರೆ ಖರೀದಿ ಮಾಡಲು ಅಂಗಡಿಯಲ್ಲಿ ನೂಕು ನೂಗ್ಗಲು ಉಂಟಾಗಿತ್ತು. ಇದರಿಂದ ಸೀರೆಗಾಗಿ ಕಿತ್ತಾಟ ಆರಂಭವಾಗಿದೆ. ಆಫರ್ ಪಡೆಯಲು ನೂರಾರು ಮಹಿಳೆಯರು ಗಲಾಟೆ ನಡೆಸಿದ್ದಾರೆ.

ಹೆಂಡತಿ ಮತ್ತು ಆಕೆಯ ಪ್ರೇಮಿಯನ್ನು ಕೊಲೆ ಮಾಡಿದ್ದ ಪತಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

Sign in to your account
Please enter an answer in digits:sixteen + 20 =
Remember me
