ಚಾಮರಾಜನಗರ:ದಲಿತ ಕೋಮಿನ ಸ್ವಜಾತಿಯ ಜನರೇ ತಮ್ಮನ್ನು ಬಹಿಷ್ಕಾರ ಹಾಕಿ ಮಾನಸಿಕ ಹಿಂಸೆ ನೀಡಿದ್ದಾರೆಂದು ಮನನೊಂದ ವ್ಯಕ್ತಿಯೊಬ್ಬ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗ್ರಾಮದ‌ ಪುಟ್ಟಯ್ಯ (52)ಆತ್ಮಹತ್ಯೆ ಯತ್ನಿಸಿದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ ಸ್ವಜಾತಿಯ‌ ಜನರೊಂದಿಗೆ ನಡೆದ ಜಗಳದಲ್ಲಿ ಮನನೊಂದು ಪುಟ್ಟಯ್ಯ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.
ಇದನ್ನೂ ಓದಿ:ಹೊರಗಡೆ ತಿರುಗಾಡಿ ಬರುತ್ತೇವೆಂದು ಹೇಳಿ ಹೊರಟ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆ
ಕಳೆದ 5 ವರ್ಷಗಳ‌ ಹಿಂದೆ ಗ್ರಾಮದಲ್ಲಿ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಮಾಡಲು ತಲಾ ಒಂದು ಕುಟುಂಬದಿಂದ 200 ರೂ. ಚಂದ‌ ಕೇಳಲಾಗಿತ್ತು. ಈ ಹಣವನ್ನು ತಡವಾಗಿ ನೀಡಿದ್ದಕ್ಕೆ ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಬೇಕೆಂದು ಗ್ರಾಮದ ಯಜಮಾನರು ತಾಕೀತು ಮಾಡಿದ್ದರು.ದಂಡವನ್ನು ಕಟ್ಟದ ಕಾರಣಕ್ಕೆ ಅಂದಿನಿಂದ‌ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಪುಟ್ಟಯ್ಯ ತಿಳಿಸಿದ್ದಾರೆ.
ಕಂಡಾಯ‌ ತಂದಿದ್ದಕ್ಕೆ‌ಗಲಾಟೆ:ಗುರುವಾರ ಮನೆಯಲ್ಲಿ ಮಂಟೆಸ್ವಾಮಿ ಕಂಡಾಯ ಪೂಜೆ ಮಾಡಿಸಲು ಚನ್ನಪ್ಪನ ಪುರದಿಂದ ಇಬ್ಬರು ಗುಡ್ಡಪ್ಪರನ್ನ ಕರೆಸಿದ್ದಕ್ಕೆ ಕೋಪಗೊಂಡ ಗ್ರಾಮದ ಯಜಮಾನರು ಜಗಳ‌ ಮಾಡಿದರು. ಇವರ ವಿರುದ್ಧ ಚಾಮರಾಜನಗರ ಗ್ರಾಮಾಂತರ ‌ಪೊಲೀಸ್ ಠಾಣೆಗೆ ದೂರು ನೀಡಿದೆ.‌ ಇದರಿಂದ ಮತ್ತಷ್ಟು ಅಸಮಾಧನಗೊಂಡು ಗುರುವಾರ ರಾತ್ರಿ ಜಗಳ ಮಾಡಿದರು.‌‌ ಇವರು ನೀಡುತ್ತಿರುವ ಕಿರುಕುಳ ತಾಳಲಾದರೆ ಆತ್ಮಹತ್ಯೆ‌‌ ಮಾಡಿಕೊಳ್ಳಲು ಮುಂದಾದೆ ಎಂದರು.
ಇದನ್ನೂ ಓದಿ:VIDEO| ಕುಡಿಯಲು ಹಣವಿಲ್ಲದೇ‌ ಮನೆಯಲ್ಲಿದ್ದ ಟಿವಿ ಮಾರಲು ಹೊರಟವನ ಮಾತು ಕೇಳಿದ್ರೆ ದಂಗಾಗ್ತಿರಾ!
ಲಾಕ್​ಡೌನ್​ನಲ್ಲಿ ಸರ್ಕಾರಿ ಶಾಲೆಯೇ ಕುಡುಕರ ಅಡ್ಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 4 =
Remember me
