ವಿಜಯಪುರ:ಪ್ರೇಮ ವೈಫಲ್ಯಕ್ಕೋ ಅಥವಾ ಇನ್ಯಾವುದೋ ಕಾರಣದಿಂದ ದುಃಖಿತರಾಗಿ ಅಥವಾ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೊಬೈಲ್ ಟವರ್ ಹತ್ತುವವರನ್ನು ನೋಡಿದ್ದೇವೆ. ಇಲ್ಲೊಬ್ಬ ಯುವಕ ಮಾತ್ರ ಬೆತ್ತಲೆಯಾಗಿ ಮೊಬೈಲ್ ಸ್ಥಾವರ ಹತ್ತಿದ್ದಾನೆ! ಹತ್ತಿ ಅಲ್ಲೂ ಹುಚ್ಚಾಟ ಮಾಡಿದ್ದು ಕಂಬಿಯಿಂದ ಜೋತು ಬೀಳುವುದು, ಕಂಬಿ ಹಿಡಿದು ಸುತ್ತುವುದು ಮಾಡಿದ್ದಾನೆ.
ಈ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾ. ಬಳಗಾನೂರ ಗ್ರಾಮದಲ್ಲಿ ಘಟನೆ ನಡೆದಿದ್ದು ಈತ ತೆಗ್ಗಿಹಳ್ಳಿಯ ಸತೀಶ್​ (25) ಎನ್ನುವ ಯುವಕ ಎಂದು ತಿಳಿದು ಬಂದಿದೆ. ಈತ ಮಾನಸಿಕ ಅಸ್ವಸ್ಥ ಎನ್ನಲಾಗುತ್ತಿದ್ದು ಟವರ್ ಮೇಲಿಂದ ಆಯತಪ್ಪಿ ಬಿದ್ದರೆ ಅನಾಹುತವಾಗಲಿದೆ. ಅಂದಹಾಗೆ ಈತ ಬಳಗಾನೂರಿನಲ್ಲಿರುವ ತಮ್ಮ ಸಂಬಂಧಿಕರ ಹೊಲಕ್ಕೆ ಬಂದು ಟವರ್ ಏರಿದ್ದಾನೆ.
ವಿಜಯವಾಣಿಗೆ ಟವರ್ ತುದಿಯ ಮೇಲೆ ಹತ್ತಿ ಜೋತಾಡುತ್ತಿರೋ ಯುವಕನ ವಿಡಿಯೋ ಲಭ್ಯವಾಗಿದ್ದು ಈತ ಬಟ್ಟೆ ಬಿಚ್ಚಿ ನಗ್ನವಾಗಿಯೇ ಟವರ್ ಹತ್ತಿದ್ದ. ಯುವಕನನ್ನ ಕೆಳಗೆ ಇಳಿಸೋದಕ್ಕೆ ಗ್ರಾಮಸ್ಥರು ಹರಸಾಹಸ ಪಟ್ಟಿದ್ದು ವಿಚಾರ ತಿಳಿಯುತ್ತಿದ್ದಂತೆಯೇ ಆಲಮೇಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಸದ್ಯ, ಟವರ್ ಬಳಿ ಬಳಗಾನೂರ ಗ್ರಾಮದ ಜನರು ಹಾಗೂ ಆಲಮೇಲ ಠಾಣೆ ಪೊಲೀಸರು ಬೀಡು ಬಿಟ್ಟಿದ್ದು ಆತನನ್ನು ಕೆಳಗಿಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಈತ ಮಾತ್ರ ಯಾರ ಮಾತನ್ನೂ ಕೇಳದೇ ಇನ್ನೂ ಟವರ್​ ಮೇಲೆ ಇದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eight =
Remember me
