ಬೆಂಗಳೂರು:ಬಿಳಿಯಾನೆಯಂತಾಗಿರುವ ಇಲಾಖೆಗಳ ನಿರ್ವಹಣೆ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದ್ದರೆ, ರಾಜ್ಯದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ವೈವಿಧ್ಯಮಯ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ 6ನೇ ವೇತನ ಆಯೋಗ ಕೆಲ ಇಲಾಖೆಗಳ ವಿಲೀನ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಖಾಲಿ ಹುದ್ದೆಗಳ ಪೈಕಿ ಶೇ.50 ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಇವೆ. ಉಳಿದ ಹಲವು ಇಲಾಖೆಗಳಲ್ಲಿ ಮಿತಿಗಿಂತ ಹೆಚ್ಚುವರಿ ಸಿಬ್ಬಂದಿ ಇದ್ದಾರೆ. ಕಾರ್ಯಾಚರಣೆ ವೃಂದದಲ್ಲೂ ಅನುಪಯುಕ್ತ, ಹೆಚ್ಚುವರಿ ಹುದ್ದೆಗಳು ಇರುವುದು ಆಯೋಗದ ಗಮನಕ್ಕೆ ಬಂದಿದೆ. ಪ್ರಸ್ತುತ ಕಾರ್ಯಾಚರಣೆಯ ಅಗತ್ಯ, ನವೀನ ತಾಂತ್ರಿಕತೆಗಳನ್ನು ಬಳಸುವ ಸಾಮರ್ಥ್ಯ ಮತ್ತು ಅವರ ಸೇವೆಗೆ ಇರುವ ಬೇಡಿಕೆ ಗಮನಿಸಿ ಬಹುತೇಕ ಇಲಾಖೆಗಳ ಕಾರ್ಯಾಚರಣೆ ಸಿಬ್ಬಂದಿಯ ಅಗತ್ಯದ ಬಗ್ಗೆ ಸಮಗ್ರ ಪುನರ್ ಮೌಲ್ಯಮಾಪನ ಮಾಡುವಂತೆ ಶಿಫಾರಸು ಮಾಡಿದೆ.
ಲಿಪಿಕ ಸಿಬ್ಬಂದಿ ಹೆಚ್ಚಳ:ಕಾರ್ಯಾಚರಣೆ ಸಿಬ್ಬಂದಿಗೆ ಹೋಲಿಸಿದಾಗ ಲಿಪಿಕ ಸಿಬ್ಬಂದಿ ಪ್ರಮಾಣ ಅತಿ ಹೆಚ್ಚಿದ್ದು, ದಾಖಲೆ ನಿರ್ವಹಣೆ, ಮಾಹಿತಿ ಸಂಸ್ಕರಣೆಗೆ ಇವರನ್ನು ಹೆಚ್ಚಾಗಿ ಅವಲಂಬಿಸಿರುವುದೇ ಈ ಸ್ಥಿತಿಗೆ ಕಾರಣ. ಇದನ್ನು ಬದಲಾಯಿಸಲು ರಾಜ್ಯದ ಆಡಳಿತ ವ್ಯವಸ್ಥೆಯ ಕೂಡಲೇ ಪುನರ್ ರಚನೆ ಬಗ್ಗೆ ಕೂಡಲೇ ಗಮನ ಹರಿಸಬೇಕು. ಬಹುತೇಕ ಹುದ್ದೆಗಳ ಶೇ.20-25 ಮಿತಿಯಲ್ಲಿ ಲಿಪಿಕ ಹಾಗೂ ಸಹಾಯಕ ಸಿಬ್ಬಂದಿ ಸಂಖ್ಯೆ ಕಾಯ್ದುಕೊಳ್ಳಲು ಪ್ರಯತ್ನಿಸುವಂತೆ ಆಯೋಗ ಶಿಫಾರಸು ಮಾಡಿದೆ. ರೇಷ್ಮೆ ಇಲಾಖೆಯ ಕ್ಷೇತ್ರ ಸಿಬ್ಬಂದಿಯ ಎಲ್ಲ ಖಾಲಿ ಹುದ್ದೆಗಳನ್ನು ರದ್ದುಗೊಳಿಸಲು ಆಯೋಗ ಸೂಚಿಸಿದೆ.
ಸದ್ಬಳಕೆ ಆಗಲಿ ಇರುವ ಸಿಬ್ಬಂದಿ:2016-17ರ ಅಂತ್ಯಕ್ಕೆ ಸರ್ಕಾರದಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಶೇ.33 ಖಾಲಿ ಇವೆ. ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಲ 2000-01ರಲ್ಲಿ 5.29 ಲಕ್ಷ ಇತ್ತು. 2017-18ರಲ್ಲಿ 5.2 ಲಕ್ಷವಿದ್ದು, ಅದೇ ಮಟ್ಟದಲ್ಲಿ ಮುಂದುವರಿದಿದೆ. ಇರುವ ಸಿಬ್ಬಂದಿಯನ್ನು ಸದ್ಬಳಕೆ ಮಾಡಿಕೊಂಡ ಬಳಿಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ವಿಲೀನಕ್ಕೆ ಶಿಫಾರಸಾದ ಇಲಾಖೆಗಳು:ಕೆಲವು ಪ್ರಕರಣಗಳಲ್ಲಿ ಇಡೀ ಇಲಾಖೆಗಳನ್ನೇ ವಿಲೀನ ಗೊಳಿಸಿದರೆ, ಇತರ ಪ್ರಕರಣಗಳಲ್ಲಿ ವೃಂದಗಳ ಗಣನೀಯ ಪ್ರಮಾಣದ ಹುದ್ದೆಗಳ ಮರು ಹಂಚಿಕೆ ಉತ್ತಮ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಸಹಕಾರಿ ಲೆಕ್ಕಪರಿಶೋಧನೆ ಇಲಾಖೆ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ವಿಲೀನದ ಬಗ್ಗೆ ಪರಿಶೀಲಿಸಬೇಕು. ಕಾನೂನುಮಾಪನ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳನ್ನು ವಿಲೀನ ಗೊಳಿಸಬಹುದು. ಸರ್ಕಾರಿ ವಿಮಾ ಇಲಾಖೆ ಹಾಗೂ ಪಿಂಚಣಿ ಮತ್ತು ಆಸ್ತಿ ನಿರ್ವಹಣೆ ಇಲಾಖೆಗಳನ್ನು, ರಾಜ್ಯ ಗೆಜೆಟಿಯರ್ ಇಲಾಖೆ ಮತ್ತು ರಾಜ್ಯ ಪತ್ರಗಾರ ಇಲಾಖೆ, ಭಾಷಾಂತರ, ಕನ್ನಡ-ಸಂಸ್ಕೃತಿ, ಪ್ರವಾಸೋದ್ಯಮ, ಪ್ರಾಚ್ಯವಸ್ತು-ಸಂಗ್ರಹಾಲಯ ಇಲಾಖೆಗಳ ವಿಲೀನದ ಬಗ್ಗೆ ಪರಿಶೀಲಿಸಬೇಕು ಎಂಬುದು ಆಯೋಗದ ಶಿಫಾರಸು.
ವೆಚ್ಚ ಕಡಿತಕ್ಕೆ ಮುಂದಾದ ಎಸ್​ಬಿಐ; ಸ್ವಯಂ ನಿವೃತ್ತಿ ಯೋಜನೆಗೆ ಚಿಂತನೆ; 30 ಸಾವಿರ ಸಿಬ್ಬಂದಿ ಲಿಸ್ಟ್​ ರೆಡಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
