ಚಿಕ್ಕಬಳ್ಳಾಪುರ: ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಸೇರಿದಂತೆ ಬಹುತೇಕ ಸಂದರ್ಭಗಳಲ್ಲಿ ಪರಸ್ಪರ ಟೀಕೆಗಳಲ್ಲಿ ಅಬ್ಬರಿಸಿದ್ದ ಸಂಸದ ಡಾ ಕೆ.ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಅಕ್ಕಪಕ್ಕದಲ್ಲಿಯೇ ಕುಳಿತು ಯೋಗ ಪ್ರದರ್ಶಿಸಿದ್ದು ಇದೀಗ ಅಭಿವೃದ್ಧಿ ಮತ್ತು ಆಡಳಿತ ವಿಚಾರವಾಗಿ ಪರಸ್ಪರ ಸಹಕಾರ ತೋರುವ ಪತ್ರಗಳ ರವಾನೆಯಲ್ಲೂ ತೊಡಗಿದ್ದಾರೆ.ಮೊದಲಿನಿಂದಲೂ ಸಂಸದರು ಮತ್ತು ಸಚಿವರ ನಡುವೆ ಹಳಸಿದ ಸಂಬಂಧ ಇದೆ. ಹಾವು ಮುಂಗುಸಿಯಂತೆ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿ, ಪರಸ್ಪರ ಟೀಕಿಸಿಕೊಂಡಿದ್ದಾರೆ. ಹಾಗೆಯೇ ಭ್ರಷ್ಟಾಚಾರ, ಅವ್ಯವಹಾರ, ಅವೈಜ್ಞಾನಿಕ ಆಡಳಿತ ವೈಖರಿ, ದಬ್ಬಾಳಿಕೆ, ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸುವ ಮೂಲಕ ಗಮನ ಸೆಳೆದಿದ್ದರು.
*ಸಚಿವರಿಗೆಪತ್ರಬರೆದಸಂಸದರು*ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಗೆನೂತನ ಸಂಸದ ಡಾ ಕೆ‌.ಸುಧಾಕರ್ ಪತ್ರ ಬರೆದಿದ್ದಾರೆ‌ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು ಈ ಭಾಗದಲ್ಲಿ ಜನಪರ ಅಭಿವೃದ್ಧಿ ಕೆಲಸ ಮತ್ತು ಆಡಳಿತವನ್ನು ಕೈಗೊಳ್ಳಲು ಅಗತ್ಯ ಸಹಕಾರ ನೀಡಬೇಕು.‌ ಇದರ ವಿಚಾರವಾಗಿ ಭೇಟಿ ಮಾಡಿ ಚರ್ಚಿಸಬೇಕಾಗಿದೆ. ಇದಕ್ಕೆ ಸಮಯ ನೀಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಭಿನಂದನೆಯ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಜೂ.24 ರಿಂದ ಲೋಕಸಭಾ ಅಧಿವೇಶನ ನಡೆಯುತ್ತಿದೆ. ಇದು ಮುಗಿಯುತ್ತಿದ್ದಂತೆ ಪರಸ್ಪರ ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂತಲೂ ತಿಳಿಸಿದ್ದಾರೆ.
*ಪರಸ್ಪರಆಹ್ವಾನ*ಸಂಸದರು ಕಚೇರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ, ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಅಧಿಕಾರಿಗಳ ಸಭೆಗೆ ಸಂಸದರನ್ನು ಸಚಿವರು ಆಹ್ವಾನಿಸಿದರು.‌ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕೈ ಕುಲುಕಿ ಮಾತನಾಡಿಕೊಂಡರು.
*ರಾಜಕೀಯಕಡುವೈರಿಗಳು*ರಾಜಕೀಯದಲ್ಲಿ ಸಾಮಾನ್ಯವಾಗಿ ಕಡು ವೈರಿಗಳು, ಎದುರಾಳಿಗಳು ಇರುವುದು ಮತ್ತು ಪರಸ್ಪರ ಟೀಕಿಸಿಕೊಳ್ಳುವುದು ಸಾಮಾನ್ಯ. ಹಾಗೆಯೇ ಎಲ್ಲೆಡೆಯಂತೆ ರಾಜಕೀಯ ಹಗೆತನವನ್ನು ವೈಯಕ್ತಿಕ ಪ್ರತಿಷ್ಠೆಯನ್ನಾಗಿ ಪರಿಗಣಿಸಿ ಮುಖ ಸಿಂಡರಿಸಿಕೊಳ್ಳುವ,  ಒಂದೇ ವೇದಿಕೆಯ ಸಭೆ ಸಮಾರಂಭದಲ್ಲಿ ಆಸೀನರಾಗದೇ ದೂರ ಉಳಿದು ಜಿದ್ದಾಜಿದ್ದಿಯಲ್ಲಿ ಕಿಡಿಕಾರುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಾಯಕರು ಈ ಭಾಗದಲ್ಲೂ ಗಮನ ಸೆಳೆದಿದ್ದಾರೆ.ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಮತ್ತು ಅಂದಿನ ಸಂಸದ ಬಿ.ಎನ್.ಬಚ್ಚೇಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಒಬ್ಬರು ಭಾಗವಹಿಸಿದ್ದರೆ ಮತ್ತೊಬ್ಬರು ಗೈರಾಗುತ್ತಿದ್ದರು. ಸ್ವಪಕ್ಷೀಯ ಬೆಂಬಲಿತ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಡಾ ಎಂ.ಸಿ.ಸುಧಾಕರ್ ಮತ್ತು ಕೆ.ಎಚ್.ಮುನಿಯಪ್ಪ ಪರಸ್ಪರ ಮುನಿಸಿಕೊಂಡು ಗಮನ ಸೆಳೆದಿದ್ದೇ ಹೆಚ್ಚು. ಇನ್ನು ಗೌರಿಬಿದನೂರು ಶಾಸಕರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಮತ್ತು ಇಂದಿನ ಸಂಸದ ಡಾ ಕೆ.ಸುಧಾಕರ್ ಮುನಿಸು ಪ್ರದರ್ಶಿಸಿದ್ದರು.
*ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಬಹುದು. ಜನರ ಅಭಿವೃದ್ಧಿ ಕೆಲಸದ ವಿಚಾರಗಳಲ್ಲಿ ಇರಬಾರದು. ಜನರ ತೀರ್ಪಿಗೆ ತಲೆಭಾಗಬೇಕಾಗುತ್ತದೆ. ಸಂಸದರು ಜನಪರ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಲು ಕೋರಿ ಪತ್ರ ಬರೆದಿದ್ದಾರೆ. ನಾನು ಸಹ ಚುನಾವಣೆಯ ಗೆಲುವಿಗೆ ಅಭಿನಂದಿಸಿ ಪತ್ರ ಬರೆಯುವೆ. ಅವರು ಗಮನಕ್ಕೆ ತಂದಿರುವಂತೆ  ಸೂಕ್ತ ಸಮಯದಲ್ಲಿ ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸುತ್ತೇನೆ.
ಡಾ ಎಂ.ಸಿ.ಸುಧಾಕರ್,ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಚಿಕ್ಕಬಳ್ಳಾಪುರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 6 =
Remember me
