| ಹೀರಾನಾಯ್ಕ ಟಿ. ವಿಜಯಪುರ
ಮಕ್ಕಳು ಶಾಲೆಗೆ ಚಕ್ಕರ್ ಹೊಡೆದರೆ ಪಾಲಕರಿಗೆ ಸಂದೇಶ ಕಳಿಸುವ ವ್ಯವಸ್ಥೆಯನ್ನು ಸರ್ಕಾರಿ ಶಾಲೆಯೊಂದು ಅಳವಡಿಸಿಕೊಳ್ಳುವ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ನೂತನ ತಂತ್ರಾಂಶ ಅಳವಡಿಸಿ ಕೊಂಡಿದ್ದು, ಮಕ್ಕಳು ಶಾಲೆಗೆ ಸರಿಯಾಗಿ ಬರದಿದ್ದರೆ ಪಾಲಕರ ಮೊಬೈಲ್ ಫೋನ್​ಗೆ ಎಸ್​ಎಂಎಸ್ ಕಳಿಸಲಾಗುತ್ತದೆ.
ಕರೊನಾ ಸಂಕಷ್ಟದಿಂದ ಶಾಲೆ ಆರಂಭ ವಿಳಂಬವಾಗಿದ್ದು, ಶಾಲೆಗಳು ಆರಂಭವಾದ ಬಳಿಕ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಮಮದಾಪುರ ಸರ್ಕಾರಿ ಪ್ರೌಢಶಾಲೆಗೆ ಖಾಸಗಿ ಶಾಲೆಯನ್ನು ತೊರೆದು ಬರುವವರೇ ಹೆಚ್ಚಾಗಿದ್ದಾರೆ. ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಈ ಶಾಲೆ ನೂತನವಾಗಿ ವೆಬ್​ಸೈಟ್​ವೊಂದನ್ನು ಅಭಿವೃದ್ಧಿ ಪಡಿಸಿಕೊಂಡಿದ್ದು, ವಿದ್ಯಾರ್ಥಿಗಳ ಹಾಜರಾತಿ, ಶೈಕ್ಷಣಿಕ ಪ್ರಗತಿ, ವಾರ್ಷಿಕ ಫಲಿತಾಂಶ ಅಲ್ಲದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಶಾಲೆಯಲ್ಲಿ ಪ್ರವೇಶಾತಿ ಪಡೆಯಬೇಕಾದರೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು.
ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್:ಸ್ಮಾರ್ಟ್ ಕ್ಲಾಸ್ ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ. ಸರ್ಕಾರಿ ಶಾಲೆಯೊಂದು ಪ್ರತ್ಯೇಕ ಯೂಟ್ಯೂಬ್ ಚಾನಲ್ ಹೊಂದಿದೆ. kಟಠಞಚಞಚಛಚಟ್ಠ್ಟಜ್ಞಿ ಎನ್ನುವ ಯೂಟ್ಯೂಬ್ ಚಾನಲ್ ಮೂಲಕ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳನ್ನು ಅಪ್​ಲೋಡ್ ಮಾಡಲಾಗುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಪರೀಕ್ಷೆಗೆ ತಯಾರಿ, ವಿವಿಧ ದಿನಾಚರಣೆಗಳ ಭಾಷಣ, ಶಿಕ್ಷಕರು ಕೈಗೊಳ್ಳುವ ಬೋಧನಾ ಕ್ರಮಗಳ ಬಗ್ಗೆ ಯೂಟ್ಯೂಬ್ ಚಾನಲ್​ನಲ್ಲಿ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ ಎಲ್​ಕೆಜಿಯಿಂದ ಪಿಯುಸಿ ವರೆಗೆ ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಮೂಲಕ ಬೋಧನೆ ಮಾಡಲಾಗುತ್ತದೆ. ಅದಕ್ಕಾಗಿ 10 ಪ್ರೊಜೆಕ್ಟರ್, ಆಂಡ್ರಾಯ್್ಡ ಮೊಬೈಲ್, ವಿಡಿಯೋ ಕ್ಯಾಮರಾ ಇನ್ನಿತರ ಉಪಕರಣಗಳನ್ನು ಖರೀದಿಸಲಾಗಿದೆ.
ಖಾಸಗಿ ಶಾಲೆಯಿಂದ ವಿಮುಖ:ಕಳೆದ ವರ್ಷ ಎಲ್​ಕೆಜಿಯಿಂದ ಎಸ್​ಎಸ್​ಎಲ್​ಸಿ ವರೆಗೆ 1025 ಮಕ್ಕಳು ಶಿಕ್ಷಣ ಪಡೆದರೇ, ಪ್ರಸಕ್ತ ಸಾಲಿನಲ್ಲಿ 1460 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಅದರಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಈ ಕನ್ನಡ ಮಾಧ್ಯಮ ಶಾಲೆಗೆ ಆಗಮಿಸಿದ್ದಾರೆ. ಪ್ರತಿ ವರ್ಷ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿಯೂ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. 2019-20ನೇ ಸಾಲಿನಲ್ಲಿ ಶೇ.96.2 ಫಲಿತಾಂಶ ಬಂದಿದೆ.
ಪ್ರವೇಶಾತಿ ಹೆಚ್ಚಳಕ್ಕೆ ಕಾರಣವೇನು ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
