ದಕ್ಷಿಣ ಕನ್ನಡ:ಮೀಟರ್​ ರೀಡರ್​ ಮಾಡಿದ ತಪ್ಪು ಗ್ರಹಿಕೆಯಿಂದಾಗಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ರೂ. ಕರೆಂಟ್​ ಬಿಲ್​ ಅನ್ನು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಕಬೈಲಿನ ನಿವಾಸಿ ಸದಾಶಿವ ಆಚಾರ್ಯ ಅವರಿಗೆ 7.71 ಲಕ್ಷ ರೂ. ಮೌಲ್ಯದ ಕರೆಂಟ್​ ಬಿಲ್​ ನೀಡುವ ಮೂಲಕ ಮೆಸ್ಕಾಂ ಮೀಟರ್ ರೀಡರ್​ ಶಾಕ್​ ಕೊಟ್ಟಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸದಾಶಿವ ಆಚಾರ್ಯ ತಿಂಗಳಿಗೆ ನಮ್ಮ ಮನೆಯ ಕರೆಂಟ್​ ಬಿಲ್​ ಸರಾಸರಿ ಮೂರು ಸಾವಿರ ರೂಪಾಯಿ ಬರುತ್ತಿತ್ತು. ಪ್ರತಿ ತಿಂಗಳು ಸರಿಯಾಗಿ ಮೊತ್ತವನ್ನು ಪಾವತ್ತಿಸುತ್ತಿದ್ದೆವು. ಮನೆಗೆ ಬಂದು ಮೀಟರ್​ ರೀಡ್​ ಮಾಡಿದ ಬಳಿಕ ಮೆಸ್ಕಾಂ ಅಧಿಕಾರಿಯೂ 99,338 ಯೂನಿಟ್ ಬಳಸಲಾಗಿದೆ ಎಂದು ಹೇಳಿ 7,71,072 ಲಕ್ಷ ರೂ. ಮೊತ್ತದ ಬಿಲ್​ಅನನ್ಉ ನೀಡಿ ಹೊರಟು ಹೋದರು.
ಇದನ್ನೂ ಓದಿ:VIDEO| ಕುಟುಂಬಸ್ಥರಿಗೆ ಪಾಠ ಕಲಿಸಲು ತನ್ನ ಸಾವನ್ನೇ ನಕಲು ಮಾಡಿದ ವ್ಯಕ್ತಿ
ಆ ಬಳಿಕ ಮೆಸ್ಕಾಂ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದಾಗ ಎಚ್ಚೆತ್ತ ಅಧಿಕಾರಿಗಳು ತಮ್ಮ ತಪ್ಪನ್ನು ಸರಿ ಮಾಡಿಕೊಂಡು 2,833 ರೂ. ಮೌಲ್ಯದ ಪರಿಷ್ಕೃತ ಬಿಲ್​ಅನ್ನು ನೀಡಿದ್ದರು ಎಂದು ಸದಾಶಿವ ಆಚಾರ್ಯ ತಿಳಿಸಿದ್ದಾರೆ.
ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದಯಾನಂದ್​​ ಪ್ರತಿಕ್ರಿಯಿಸಿ ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್​ ಮಾಡಿಸಿ ಬಿಲ್​ ವಿತರಿಸಲಾಗುತ್ತದೆ. ಬಿಲ್​ಅಲ್ಲಿ ಲೋಪ ಕಂಡು ಬಂದರೆ ಅಂತಹದ್ದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಆದರೂ, ಸಿಬ್ಬಂದಿ ತಿಳಿಯದೆ ಕೊಟ್ಟಿದ್ದಾರೆ. ವಿಚಾರ ತಿಳಿದ ತಕ್ಷಣ ಲೋಪವನ್ನು ಸರಿಪಡಿಸಿ ಪರಷ್ಕೃತ ಬಿಲ್​ಅನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
