ಹುಬ್ಬಳ್ಳಿ:ಲಾಕ್​ಡೌನ್​ನಲ್ಲಿ ವಿನಾಯಿತಿ ನೀಡಿರುವುದ ರಿಂದ ಈ ತಿಂಗಳು ವಿದ್ಯುತ್ ಮೀಟರ್ ರೀಡರ್​ಗಳು ಮನೆ ಮನೆಗೆ ಬರಲಿದ್ದಾರೆ. ಬಳಕೆ ಮಾಡಿದಷ್ಟು ಯುನಿಟ್​ಗೆ ಬಿಲ್ ಪಾವತಿಸುವ ಸಮಾಧಾನ ಗ್ರಾಹಕರದ್ದಾಗಲಿದೆ. ಸರಾಸರಿ ಬಿಲ್ ಗೊಂದಲ ಇರುವುದಿಲ್ಲ.
ಮೇ ಮತ್ತು ನಂತರದ ತಿಂಗಳಿನಲ್ಲಿ ಮೀಟರ್ ರೀಡಿಂಗ್ ಮಾಡಿಯೇ ಎಲ್ಲ ವರ್ಗದ ವಿದ್ಯುತ್ ಗ್ರಾಹಕರಿಗೆ ಬಿಲ್ ನೀಡಬೇಕೆಂದು ಇಂಧನ ಇಲಾಖೆ, ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳಿಗೆ ಸೂಚಿಸಿದೆ. ಇದೇ ವೇಳೆ ಸಂಪೂರ್ಣ ಸೀಲ್​ಡೌನ್ ಆಗಿರುವ ಪ್ರದೇಶದ ಹಾಗೂ ಕ್ವಾರಂಟೈನ್​ನಲ್ಲಿರುವ ವಿದ್ಯುತ್ ಬಳಕೆದಾರರಿಗೆ ಇದು ಅನ್ವಯವಾಗುವುದಿಲ್ಲ. ಅಲ್ಲಿ ಸರಾಸರಿ ಲೆಕ್ಕಾಚಾರ ಮುಂದುವರಿಯಲಿದೆ.
ಇದನ್ನೂ ಓದಿ:ಊರಿಗೂರೇ ಖಾಲಿ, ದಾರಿ ತುಂಬ ಬೇಲಿ; ಕರೊನಾ ಹೊತ್ತಲ್ಲಿ, ಭಟ್ಟರ ಹಾಡು ಬಂತಿಲ್ಲಿ..
ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ಗ್ರಾಹಕರು ಸರಾಸರಿ ಬಳಕೆ ಲೆಕ್ಕದಲ್ಲಿ ವಿದ್ಯುತ್ ಶುಲ್ಕ ಪಾವತಿಸಿದ್ದರು. ಆದರೆ, ಮೇ ತಿಂಗಳಲ್ಲಿ ಹಾಗೇ ಇರುವುದಿಲ್ಲ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ)ದ ಮಾರ್ಗಸೂಚಿಯಂತೆ ಏಪ್ರಿಲ್ ತಿಂಗಳ ನಿಜವಾದ ಬಿಲ್ ಸೃಜಿಸಿ ಗ್ರಾಹಕರು ಸಂದಾಯ ಮಾಡಿರುವ ಹೆಚ್ಚುವರಿ ಅಥವಾ ಕೊರತೆ ಬಿಲ್ ಮೊತ್ತವನ್ನು ಮೇ ತಿಂಗಳಲ್ಲಿ ಹೊಂದಾಣಿಕೆ ಮಾಡಿ ಬಿಲ್ ನೀಡಬೇಕೆಂದು ಇಲಾಖೆ ಸೂಚಿಸಿದೆ. ಇ-ಮೇಲ್, ಎಸ್​ಎಂಎಸ್, ವಾಟ್ಸ್ ಆಪ್ ಮೂಲಕ ಗ್ರಾಹಕರಿಗೆ ಬಿಲ್ ನೀಡಬಹುದು.
ಪ್ರಧಾನಿ ಹೆಲಿಕಾಪ್ಟರ್ ಚೆಕ್ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿಯಿಂದ ಈಗ ತಬ್ಲಿಘಿಗಳ ಪ್ರಶಂಸೆ!: ರಾಜ್ಯ ಸರ್ಕಾರದಿಂದ ನೋಟಿಸ್
ಲಾಕ್​ಡೌನ್ ಕಾರಣಕ್ಕೆ ಏಪ್ರಿಲ್ ತಿಂಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಘಟಕಗಳು ಉತ್ಪಾದನೆ, ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ಈ ಅವಧಿಯಲ್ಲಿ ಕನಿಷ್ಠ ಶುಲ್ಕ ಮಾತ್ರ ಆಕರಣೆ ಮಾಡಬಹುದೇ ಹೊರತು ಸರಾಸರಿ ಬಿಲ್ ಪಡೆಯುವುದು ಸಮಂಜಸವಲ್ಲ. ಬೇಸಿಗೆ ಕಾರಣಕ್ಕೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗೃಹ ಬಳಕೆ ವರ್ಗದಲ್ಲಿ ವಿದ್ಯುತ್ ಬಳಕೆ ಅಧಿಕವಾಗಿರುತ್ತದೆ. ಇವರಿಂದಲೂ ಸರಾಸರಿ ಬಿಲ್ ಪಡೆಯುವುದು ತಾಂತ್ರಿಕ ಸಮಸ್ಯೆ ತಂದೊಡ್ಡುತ್ತದೆ ಎಂದು ಎಸ್ಕಾಂಗಳು ಮನವಿ ಮಾಡಿದ್ದವು.
ಗ್ರಾಹಕರು ಸಹಾಯವಾಣಿ (ಸಂಖ್ಯೆ 1912)ಗೆ ಕರೆ ಮಾಡಿ ತಮ್ಮ ಖಾತೆ ಸಂಖ್ಯೆ ಹಾಗೂ ಮೊಬೈಲ್ ನಂಬರ್ ನೀಡಿ ಇ-ಮೇಲ್, ಎಸ್​ಎಂಎಸ್, ವಾಟ್ಸ್​ಆಪ್ ಮೂಲಕ ಬಿಲ್ ಪ್ರತಿ ಪಡೆಯಬಹುದು. ಆಯಾ ಎಸ್ಕಾಂ ಮೊಬೈಲ್ ಆಪ್ ಅಥವಾ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿ ಬಿಲ್ ವಿವರಗಳನ್ನು ಪಡೆಯಬಹುದು. ಕರ್ನಾಟಕ ಒನ್ ವೆಬ್​ಸೈಟ್, ಆಪ್, ಬ್ಯಾಂಕ್​ಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್​ನೆಟ್ ಬ್ಯಾಂಕಿಂಗ್, ವ್ಯಾಲೆಟ್ ಪೇಮೆಂಟ್ಸ್, ಯುಪಿಐ ಪೇಮೆಂಟ್ಸ್, ಪೇ ಯು ಆಪ್ ಮೂಲಕ, ಉಪ ವಿಭಾಗೀಯ ಕಚೇರಿಯ ಕ್ಯಾಷ್ ಕೌಂಟರ್, ಎಟಿಪಿ ಕೌಂಟರ್​ನಲ್ಲಿ ವಿದ್ಯುತ್ ಬಿಲ್ ಸಂದಾಯ ಮಾಡಬಹುದಾಗಿದೆ.
VIDEO| ಲಾಕ್‍ಡೌನ್ ತೆರವಿನ ಬಳಿಕ ಎದುರಾಗುವ ಸವಾಲುಗಳನ್ನು ಎದುರಿಸುವ ಕುರಿತು ಸಚಿವರ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 6 =
Remember me
