ಹಾಸನ:ಆಲೂರು ತಾಲೂಕು ಪಾಳ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೆಥೆನಾಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಬರೋಬ್ಬರಿ 16 ಸಾವಿರ ಲೀಟರ್​ ಮೆಥೆನಾಲ್ ಮಣ್ಣು ಪಾಲಾಗಿದೆ.
ಮಂಗಳೂರಿನಿಂದ ಹಾಸನಕ್ಕೆ ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಶುಕ್ರವಾರ ಬೆಳಗ್ಗೆ ರಸ್ತೆಗೆ ಉರುಳಿತ್ತು. ಈ ವೇಳೆ ಟ್ಯಾಂಕರ್​ನಿಂದ ಹೊರ ಬಂದ ಮೆಥೆನಾಲ್ ರಸ್ತೆಯಲ್ಲಿ ಮಳೆ ನೀರಿನಂತೆ ಹರಿದಿದೆ.
ಟ್ಯಾಂಕ್​ನಿಂದ ಸೋರಿಕೆಯಾದ ಮೆಥೆನಾಲ್​ ಅನ್ನು ಸ್ಥಳೀಯರು ತಾ ಮುಂದು-ನಾ ಮುಂದು ಎಂಬಂತೆ ತುಂಬಿಕೊಳ್ಳಲು ಬಕೆಟ್​ ಹಿಡಿದು ಬಂದ ಘಟನೆಯೂ ಸಂಭವಿಸಿತು. ಬೆಂಕಿ ಅವಘಡ ಸಂಭವ ಅರಿಯುತ್ತಿದ್ದಂತೆ ಎಚ್ಚೆತ್ತ ಜನರು ದೂರ ಸರಿದರು. ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳೀಯರು ಗುದ್ದಲಿ ಬಳಸಿ ಮೆಥೆನಾಲ್ ಅನ್ನು ಚರಂಡಿಗೆ ಹರಿಯುವಂತೆ ಮಾಡಿದರು.
ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಅಗ್ನಿ ಅವಘಡ ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
https://www.facebook.com/VVani4U/videos/358401332254883
ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

ಪ್ರೇಮ ವಿವಾಹವಾಗಿದ್ದ ಮಗಳು 5 ವರ್ಷದ ಹಿಂದೆಯೇ ನಾಪತ್ತೆ! ಗಂಡನ ಮನೆಯಲ್ಲಿದೆ ನಿಗೂಢ ರಹಸ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
