ಬೆಂಗಳೂರು:ಆಟೋ ಚಾಲಕರು ಬರುವುದಿಲ್ಲ, ಹೆಚ್ಚಿಗೆ ಹಣ ಪೀಕುತ್ತಾರೆ ಎಂದು ಹೀಗೆ ಮೆಟ್ರೋ ಪ್ರಯಾಣಿಕರಿಂದ ಹಲವರು ದೂರುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಸ್ವತಃ ಆಟೋ ಚಾಲಕರೇ ಪರಿಹಾರವನ್ನ ನೀಡಲು ಮುಂದಾಗಿದ್ದಾರೆ. ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘವು ಹೊಸ ಆ್ಯಪ್ ಹೊರತರಲು ಸಜ್ಜಾಗಿದೆ. ‘ಮೆಟ್ರೋ ಮಿತ್ರ’ ಮೆಟ್ರೋ ಸಂಚಾರಿಗಳಿಗೆ ಆಟೋ ವ್ಯವಸ್ಥೆ ಕಲ್ಪಿಸಿ ಅನುಕೂಲ ಉಂಟುಮಾಡಲಿದೆ.
ಏನಿದು ಮೆಟ್ರೋ ಮಿತ್ರ ? :ಸೆ. 6ರಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (BMRCL) ಸಹಯೋಗದಲ್ಲಿ ‘ಮೆಟ್ರೋ ಮಿತ್ರ’ ಆ್ಯಪ್ ಬಿಡುಗಡೆಯಾಗಿ ಮೆಟ್ರೋ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ. ಮೆಟ್ರೋ ಮಿತ್ರ ಆ್ಯಪ್ ನಗರದ ಪ್ರಮುಖ ಮೆಟ್ರೋ ಸ್ಟೇಷನ್​ಗಳಿಗೆ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಮೆಟ್ರೋ ಮಿತ್ರವು ಮೆಟ್ರೋ ಬಳಕೆದಾರರಿಗೆ ಮಾತ್ರ ಉಪಯೋಗವಾಗಲಿದೆ. ಸದ್ಯ ಜಯನಗರ ಮತ್ತು ಆರ್‌ವಿ ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ಮಿತ್ರ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ ಎನ್ನಲಾಗಿದೆ.
ಸರ್ಕಾರದ ನಿಯಮವನ್ನು ಪಾಲಿಸಿ, ಮೀಟರ್ ಪ್ರಕಾರವೇ ಪ್ರಯಾಣಿಕರಿಗೆ ಶುಲ್ಕ ವಿಧಿಸಲಾಗುತ್ತದೆ. ಸದ್ಯಕ್ಕೆ ಆ್ಯಪ್ ತಂತ್ರಜ್ಞಾನ ಮತ್ತು ನಿರ್ವಹಣೆಗಾಗಿ 10 ರೂ. ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುತ್ತದೆ.
ಮೆಟ್ರೋ ಮಿತ್ರ ಬಳಸುವುದು ಹೇಗೆ?‘ಮೆಟ್ರೋ ಮಿತ್ರ’ ಅಪ್ಲಿಕೇಷನ್​ನಲ್ಲಿ ಮೊದಲು ಪ್ರಯಾಣಿಯರು ತಾವು ಇರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಮೆಟ್ರೋ ನಿಲ್ದಾಣಗಳಲ್ಲಿ ಇನ್ಮುಂದೆ ಕ್ಯೂ ಆರ್ ಕೋಡ್​ಗಳನ್ನು ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್ ಮಾಡಿಯೂ ಆಟೋ ಬುಕ್ ಮಾಡಬಹುದಾಗಿದೆ. ಆ್ಯಪ್ ಡೌನ್​ಲೋಡ್ ಮಾಡಿರುವ ಚಾಲಕರು ಸ್ಪಂದಿಸಿ ಪ್ರಯಾಣಿಕರಿಗೆ ಸೌಲ್ಯಭ್ಯ ಒದಗಿಸಲಿದ್ದಾರೆ. ಆಟೋ ಹತ್ತುವ ಮುನ್ನ ಜೆನೆರೆಟ್ ಆಗಿರುವ ಓಟಿಪಿ ತೋರಿಸುವುದು ಮಾತ್ರ ಕಡ್ಡಾಯವಾಗಿರುತ್ತದೆ.  ಸರ್ಕಾರದ ನಿಯಮವನ್ನು ಪಾಲಿಸಿ, ಮೀಟರ್ ಪ್ರಕಾರವೇ ಪ್ರಯಾಣಿಕರಿಗೆ ಶುಲ್ಕ ವಿಧಿಸಲಾಗುತ್ತದೆ.
ಸದ್ಯಕ್ಕೆ ಮೆಟ್ರೋ ನಿಲ್ದಾಣದ 5 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಮೆಟ್ರೋ ಮಿತ್ರ ಸೇವೆ ಲಭ್ಯವಿರಲಿದೆ. ಕೆಲ ತಿಂಗಳಲ್ಲಿ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೆಶ ಹೊಂದಿದೆ. ಮೆಟ್ರೋ ಟಿಕೆಟ್ ಬುಕ್ ಮಾಡಲು ಬಳಸುವ ವಾಟ್ಸ್ಯಾಪ್ ಚಾಟ್​ಬಾಕ್ಸ್​ನಲ್ಲೂ ಆಟೋ ಬುಕ್ ಮಾಡುವ ಸೌಲಭ್ಯ ಒದಗಿಸಲಾಗುವ ವ್ಯವಸ್ಥೆ ಮಾಡಲಾಗುತ್ತಿದೆ.
ಮದುವೆಯಾದ 24 ಗಂಟೆಯಲ್ಲಿ ವರ ಸಾವು; ವಧು ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
