| ದೇವರಾಜ್​ ಕನಕಪುರ ಬೆಂಗಳೂರುಕೆಲಸದ ಜತೆಗೆ ವ್ಯಾಸಂಗವನ್ನೂ ಮಾಡಬೇಕೆಂದುಕೊಂಡಿರುವ ಲಾಂತರ ವಿದ್ಯಾಥಿರ್ಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇದೇ ಮೊದಲ ಬಾರಿಗೆ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ “ಸಂಜೆ ಕಾಲೇಜು’ ಆರಂಭಿಸಲು ನಿರ್ಧರಿಸಿದೆ. 2021&22ನೇ ಸಾಲಿನಿಂದಲೇ “ಸಂಧ್ಯಾ ಶಕ್ತಿ’ ಯೋಜನೆ ಅಡಿಯಲ್ಲಿ ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಸಂಜೆ ಕಾಲೇಜುಗಳು ಕಾರ್ಯಾರಂಭಿಸಲಿವೆ.
ಎಲ್ಲೆಲ್ಲಿ?ಬೆಂಗಳೂರಿನ ಆರ್​.ಸಿ.ಕಾಲೇಜು, ಬೆಳಗಾವಿಯ ಪ್ರಥಮ ದರ್ಜೆ ಮಹಿಳಾ ಕಾಲೇಜು, ತುಮಕೂರಿನ ಬಿ.ಎಚ್​.ರಸ್ತೆ, ಮೈಸೂರಿನ ಕುವೆಂಪುನಗರ, ಶಿವಮೊಗ್ಗ, ದಾವಣಗೆರೆಯ ಎಂಸಿಸಿ ಬ್ಲಾಕ್​, ಮಂಗಳೂರು ರಥಬೀದಿ, ಧಾರವಾಡ ಕುಮಾರೇಶ್ವರನಗರ, ಬಿಜಾಪುರ ನವಬಾಗ್​ ಖಾಜಾ ಕಾಲನಿ, ಕಲಬುರಗಿ ಸೇಡಂ ರಸ್ತೆ, ಬಳ್ಳಾರಿಯಲ್ಲಿರುವ ಪ್ರಥಮ ದರ್ಜೆ ಕಾಲೇಜು
ಪದವಿ ಕೋರ್ಸ್​ಸರ್ಕಾರಿ ಸಂಜೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಿಸಿಎ ಮತ್ತು ಬಿ.ಕಾಂ ಕೋರ್ಸ್​ ಮಾತ್ರ ಇರುತ್ತವೆ. ಈ ಎರಡು ಕೋರ್ಸ್​ಗಳನ್ನು ಪೂರೈಸಿದ ವಿದ್ಯಾಥಿರ್ಗಳಿಗೆ ಉದ್ಯೋಗಾವಕಾಶ ದೊರೆಯುತ್ತಿರುವುದರಿಂದ ಶಿಕ್ಷಣ ಇಲಾಖೆಯು ಆರಂಭಿಕವಾಗಿ ಈ ಕೋರ್ಸ್​ಗೆ ಅವಕಾಶ ಕಲ್ಪಿಸಿದೆ.
ಸಿಬ್ಬಂದಿ ನೇಮಕಕೋರ್ಸ್​ ಆರಂಭಿಸುವುದರಿಂದ 11 ಕಾಲೇಜಿಗೆ ವರ್ಷಕ್ಕೆ 6.30 ಕೋಟಿ ರೂ.ಆಥಿರ್ಕ ಹೊರೆ ಬೀಳಲಿದೆ. ಇದಕ್ಕೆ ಆಥಿರ್ಕ ಇಲಾಖೆ ಒಪ್ಪಿಗೆ ನೀಡಿದೆ. ಒಂದು ಕಾಲೇಜಿನಲ್ಲಿ ಒಬ್ಬ ಪ್ರಾಂಶುಪಾಲ, 7 ಬೋಧಕ, 2 ಆಡಳಿತ ಸಿಬ್ಬಂದಿ, ಗ್ರೂಪ್​ “ಡಿ’ 3 ಸೇರಿ ಒಟ್ಟಾರೆ 13 ಸಿಬ್ಬಂದಿ ನೇಮಕಕ್ಕೆ ಅವಕಾಶ ಇದೆ. ಈ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಪ್ರತಿ ಕಾಲೇಜಿಗೆ ಮಾಸಿಕ 57.36 ಲಕ್ಷ ರೂ. ಅವಶ್ಯವಿದೆ ಎಂದು ಇಲಾಖೆ ಲೆಕ್ಕಹಾಕಿದೆ. ಅಗತ್ಯವಿರುವ ಹುದ್ದೆಗಳ ಸೃಜನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಪ್ರಸ್ತಾವನೆ ಸಲ್ಲಿಸಬೇಕು. ಇದಕ್ಕೆ ತಗಲುವ ವೆಚ್ಚವನ್ನು ಇಲಾಖೆಗೆ ಒದಗಿಸಿರುವ ಅನುದಾನದಿಂದ ಭರಿಸಿ ನಿಯಮಾನುಸಾರ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.
ಕಡಿಮೆ ಶುಲ್ಕರಾಜ್ಯದಲ್ಲಿ ಈಗಾಗಲೇ ಖಾಸಗಿ ಕಾಲೇಜುಗಳು ಸಂಜೆ ಕಾಲೇಜುಗಳನ್ನು ನಡೆಸುತ್ತಿವೆ. ಬೆಂಗಳೂರು ಒಂದರಲ್ಲೇ 15 ಸಂಜೆ ಕಾಲೇಜುಗಳಿದ್ದು, ಇಲ್ಲಿ ಬಿಸಿಎಗೆ 35 ಸಾವಿರ ರೂ. ಹಾಗೂ ಬಿ.ಕಾಂಗೆ 26 ಸಾವಿರ ರೂ. ಪ್ರವೇಶ ಶುಲ್ಕವಿದೆ. ಈ ದುಬಾರಿ ವೆಚ್ಚ ನೀಡಿ ಪ್ರವೇಶ ಪಡೆಯುವುದು ಆಥಿರ್ಕ ದುರ್ಬಲ ವರ್ಗದವರಿಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಂಜೆ ಕಾಲೇಜು ಆರಂಭಿಸಲು ನಿರ್ಧರಿಸಿದೆ.
’ನಮ್ಮ ಕಾಲೇಜಿನಲ್ಲಿ ಸಂಜೆ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದು ಖುಷಿಯ ವಿಚಾರ. ಇದರಿಂದ ಬಡ ವಿದ್ಯಾಥಿರ್ಗಳಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಆರ್​.ಸಿ.ಕಾಲೇಜು ಪ್ರಾಂಶುಪಾಲ ಡಾ.ಬಿ.ಚಂದ್ರಶೇಖರ್​.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + sixteen =
Remember me
