ಬೆಂಗಳೂರು:ಭಾರತದ ಪ್ರತಿ ಮನೆಯಲ್ಲೂ ಡೋಲೋ 650 ಮಾತ್ರೆ ಜನಪ್ರಿಯವಾಗಿದೆ. ಡೋಲೋ 650 ಮಾತ್ರೆ ಕಂಪನಿ ಮುಖ್ಯಸ್ಥ ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ.
ಕೋವಿಡ್ ಕಾಲದಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟಗೊಂಡ ಮಾತ್ರೆ ಡೋಲೋ 650. ಇದರ ಪರಿಣಾಮ 2020ರಲ್ಲಿ ಡೋಲೋ ಕಂಪನಿ 400 ಕೋಟಿ ರೂಪಾಯಿ ಆದಾಯ ಗಳಿಸಿತ್ತು. 2019ರಿಂದ 2021ರ ವರೆಗೆ ಡೋಲೋ ಆದಾಯದಲ್ಲಿ ಶೇಕಡಾ 244ರಷ್ಟು ಏರಿಕೆಯಾಗಿತ್ತು.
ಇದನ್ನೂ ಓದಿ:ಬೋರ್ನ್​​ವೀಟಾದಲ್ಲಿ ಸಕ್ಕರೆ ಅಂಶ ವಿವಾದ; ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ತೆಗೆಯುವಂತೆ ಸೂಚನೆ
ಮನೆ ವಿಶೇಷತೆ:ಕೋಟಿ ಕೋಟಿ ಆದಾಯಗಳಿಸುತ್ತಿರುವ ಡೋಲೋ ಕಂಪನಿ ಸಿಇಒ ದಿಲೀಪ್ ಸುರಾನ ಇದೀಗ ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿರುವ ಈ ಮನೆ ಹಾಗೂ ನಿವೇಷನ ಜಾಗ 12,043 ಚದರ ಅಡಿ ವಿಸ್ತಾರವಾಗಿದೆ. ಇದರಲ್ಲಿ 8,373 ಚದರ ಅಡಿಯಲ್ಲಿ ಭವ್ಯ ಬಂಗಲೆ ಇದೆ. ಡೋಲೋ 650 ಮಾತ್ರೆ ಭಾರಿ ವ್ಯಾಪಾರದಿಂದ ದಿಲೀಪ್ ಸುರಾನಾ ಒಟ್ಟು ಆಸ್ತಿ ಇದೀಗ 26,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಬೆಂಗಳೂರು, ಕರ್ನಾಟಕದಲ್ಲಿ ಸೀಮಿತವಾಗಿದ್ದ ಮೈಕ್ರೋ ಲ್ಯಾಬ್ಸ್‌ನ ಡೋಲೋ 650 ಹಾಗೂ ಇತರ ಔಷಧಿಗಳು ಭಾರತದಲ್ಲಿ ವ್ಯಾಪಾರ ವಹಿವಾಟು ಆರಂಭಿಸಿತು.
ಕಾಂಗ್ರೆಸ್ ಒಡೆದ ಮನೆಯಂತಾಗಿದೆ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
