|ವಿಲಾಸ ಮೇಲಗಿರಿಬೆಂಗಳೂರು
ಬಿಡಿಗಾಸಿನ ಸಂಬಳ ಪಡೆದು ಬಡ ಮಕ್ಕಳಿಗೆ ಅಡುಗೆ ಮಾಡಿ ಬಡಿಸುವ ಬಿಸಿಯೂಟ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ಸಂಬಳವಿಲ್ಲ. ಅಷ್ಟೇ ಅಲ್ಲ, ಶಿಕ್ಷಕರ ಕೊರತೆಯನ್ನು ತಾತ್ಕಾಲಿಕವಾಗಿ ನೀಗಿಸಲು ನೇಮಕ ಮಾಡಿಕೊಂಡ 34 ಸಾವಿರ ಅತಿಥಿ ಶಿಕ್ಷಕರಿಗೂ ಮೂರು ತಿಂಗಳಿಂದ ಸರ್ಕಾರ ಗೌರವಧನ ಪಾವತಿಸಿಲ್ಲ! ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶಭರಿತ ಆಹಾರ ಒದಗಿಸುವ ದೃಷ್ಟಿಯಿಂದ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿ, ಅಡುಗೆಯವರು ಮತ್ತು ಅಡುಗೆ ಸಹಾಯಕರನ್ನು ನೇಮಕ ಮಾಡಿಕೊಂಡಿದೆ. ಈ ನೌಕರರಿಗೆ ಕ್ರಮವಾಗಿ ತಿಂಗಳಿಗೆ 2,600 ಹಾಗೂ 2,500 ರೂ. ಗೌರವಧನ ನೀಡಲಾಗುತ್ತದೆ. 2022-23ನೇ ಸಾಲಿನ ಬಜೆಟ್​ನಲ್ಲಿ ಜನವರಿ 2022ರಿಂದ ಅನ್ವಯವಾಗುವಂತೆ 1,000 ರೂ. ಹೆಚ್ಚಳ ಮಾಡಲಾಗಿದೆ. ಆದರೆ ರಾಜ್ಯಾದ್ಯಂತ ಇರುವ 1.19 ಲಕ್ಷ ಬಿಸಿಯೂಟ ತಯಾರಿಕೆ ನೌಕರರಿಗೆ ಮೂರು ತಿಂಗಳಿಂದ ಗೌರವಧನ ಪಾವತಿಸಿಲ್ಲ. ಇದರಿಂದ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡಿಬಿಟಿ ನೆಪದಲ್ಲಿ ಗೌರವಧನ ಸಿಕ್ಕಿಲ್ಲ:ನೇರ ನಗದು ವರ್ಗಾವಣೆ ಅಳವಡಿಕೆಯ ತಾಂತ್ರಿಕ ಕಾರಣದಿಂದ ಬಿಸಿಯೂಟ ನೌಕರರಿಗೆ ಗೌರವ ಧನ ಪಾವತಿಯಾಗಿಲ್ಲ. ಸಮಸ್ಯೆ ಸರಿಪಡಿ ಸಲು ಇಲಾಖೆ ಬಳಿ ಸರಿಯಾದ ಡೇಟಾ ಇಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಐಸಿಡಿಎಸ್ ಕಾರ್ಯಕ್ರಮ ಜಾರಿ ವೇಳೆ ಸಂಬಳ ವ್ಯತ್ಯಯ ವಾಗದಂತೆ ಹಳೇ ಪದ್ಧತಿಯಲ್ಲೇ ವೇತನ ನೀಡಿ ತಾಂತ್ರಿಕತೆ ಅಳವಡಿಸಲಾಗಿದೆ. ಆದರೆ ಬಿಸಿಯೂಟ ತಯಾರಕರ ಬಗ್ಗೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಬಿಸಿಯೂಟ ನೌಕರರ ಆರೋಪ.
ಅತಿಥಿ ಶಿಕ್ಷಕರ ಅಳಲು:ಶಿಕ್ಷಕರ ಕೊರತೆ ನೀಗಿಸುವ ನಿಟ್ಟಿನಲ್ಲಿ 2022-23ನೇ ಸಾಲಿನಲ್ಲಿ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. 34 ಸಾವಿರ ಅತಿಥಿ ಶಿಕ್ಷಕರನ್ನು ಶಾಲೆ ಆರಂಭದ ದಿನದಿಂದಲೇ ನೇಮಕ ಮಾಡಿ ಶಹಬ್ಬಾಶ್​ಗಿರಿ ಪಡೆದುಕೊಂಡಿದೆ. ಆದರೆ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯದೆ ಸರ್ಕಾರ ತೆಗೆದುಕೊಂಡ ಈ ತೀರ್ವನದಿಂದ ಬಡ ಶಿಕ್ಷಕರು ಬರಿಗೈಲಿ ಕೆಲಸ ಮಾಡುವ ಸ್ಥಿತಿ ನಿರ್ವಣವಾಗಿದೆ. 35-40 ಬಿಇಒಗಳಿಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ ಮನವಿ ಮಾಡಿದಾಗ್ಯೂ ಪರಿಹಾರ ಸಿಕ್ಕಿಲ್ಲ.
ನಮಗೂ ನ್ಯಾಯ ಕೊಡಿ:ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಧನವನ್ನು ಸರ್ಕಾರ 13 ಸಾವಿರ ರೂ.ಗಳಿಂದ 32 ಸಾವಿರ ರೂ.ವರೆಗೆ ಹೆಚ್ಚಿಸಿದೆ. ಆದರೆ ಅತಿಥಿ ಶಿಕ್ಷಕರನ್ನು ಕಡೆಗಣಿಸಿದೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಸಲ್ಲದು. ಬೆಲೆ ಏರಿಕೆ, ಜೀವನ ನಿರ್ವಹಣಾ ವೆಚ್ಚವನ್ನು ಪರಿಗಣಿಸಿ ಪ್ರಸ್ತುತ ಇರುವ ಮಾಸಿಕ 10 ಸಾವಿರ ರೂ. ಸಂಬಳವನ್ನು 25 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂಬುದು ಅತಿಥಿ ಶಿಕ್ಷಕರ ಆಗ್ರಹ.
ಸರ್ಕಾರ ಪಠ್ಯ ಪರಿಷ್ಕರಣೆ, ಟಿಪ್ಪು, ಸಾವರ್ಕರ್, ಗಣೇಶ ಹಬ್ಬದ ವಿಚಾರದಲ್ಲಿ ತೋರಿದ ಆಸಕ್ತಿಯನ್ನು ನಮ್ಮ ಬೇಡಿಕೆ ಈಡೇರಿಸುವತ್ತ ತೋರುತ್ತಿಲ್ಲ. ಕನಿಷ್ಠ ಕೂಲಿಗಿಂತಲೂ ಕಡಿಮೆ ಗೌರವಧನಕ್ಕೆ ಕೆಲಸಕ್ಕೆ ಬರುತ್ತಾರೆ ಎಂದರೆ ಅವರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಮಾನವೀಯ ನೆಲೆಯಲ್ಲಿ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
|ಎಸ್.ವರಲಕ್ಷ್ಮಿಗೌರವಾಧ್ಯಕ್ಷರು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ
ದುಬಾರಿ ದುನಿಯಾದಲ್ಲಿ ನಮ್ಮ ಬದುಕು ದುಸ್ತರವಾಗಿದೆ. ಕನಿಷ್ಠ ವೇತನಕ್ಕಿಂತಲೂ ಕಡಿಮೆ ಗೌರವ ಧನ ನೀಡುತ್ತಿದ್ದು, ಸಾರಿಗೆ, ಊಟಕ್ಕೆ ಮಾತ್ರ ಸಾಕಾಗುತ್ತದೆ. ಕುಟುಂಬ ನಿರ್ವಹಣೆ ಕಷ್ಟ.
|ಡಿ.ಕೋಟೇಶ್ಅಧ್ಯಕ್ಷ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಅತಿಥಿ ಶಿಕ್ಷಕರ ಸಂಘ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + twenty =
Remember me
