ಬಾಗಲಕೋಟೆ:ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸಲು ನಮ್ಮ ರಾಜ್ಯ ಸರ್ಕಾರ ಬಸ್​, ಟ್ರೇನ್​ಗಳ ವ್ಯವಸ್ಥೆ ಮಾಡಿತ್ತು. ಅನೇಕ ಕಾರ್ಮಿಕರನ್ನು ಅವರ ಊರಿಗೆ ಕಳಿಸಿಕೊಟ್ಟಾಗಿದೆ. ಆದರೆ ಬೇರೆ ರಾಜ್ಯದಲ್ಲಿ ಸಿಲುಕಿರುವ ನಮ್ಮ ರಾಜ್ಯದ ವಲಸೆ ಕಾರ್ಮಿಕರು ಊರಿಗೆ ಬರಲಾಗದೆ ಪರದಾಡುತ್ತಿದ್ದಾರೆ.
ಇದನ್ನೂ ಓದಿ:ಗುಜರಾತ್​​-ರಾಜಸ್ಥಾನ ಗಡಿಯಲ್ಲಿನ ಈ ಜಿಲ್ಲೆಗೆ 2015ರಲ್ಲೇ ಕಾಲಿಟ್ಟಿದೆ ಕರೊನಾ…!
ಮಹಾರಾಷ್ಟ್ರದಲ್ಲಿ ಒಂದಷ್ಟು ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದು, ಅವರಿಗೆ ಮರಳಿ ರಾಜ್ಯಕ್ಕೂ ಬರಲಾಗದೆ, ಅಲ್ಲಿಯೂ ಇರಲಾಗದೆ ಕಷ್ಟಪಡುತ್ತಿದ್ದಾರೆ.
ನಮ್ಮ ರಾಜ್ಯದ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ ಜಿಲ್ಲೆಗಳ 14 ವಲಸೆ ಕಾರ್ಮಿಕರು ಕೆಲಸ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅವರೆಲ್ಲ ಈಗ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈಸಿಂಗಪುರ ಗ್ರಾಮದಲ್ಲಿ ಇದ್ದಾರೆ.
ಇದನ್ನೂ ಓದಿ:ರಾತ್ರೋರಾತ್ರಿ ನಾಲ್ವರು ನಕ್ಸಲರನ್ನು ಗುಂಡಿಟ್ಟು ಕೊಂದ ರಕ್ಷಣಾ ಪಡೆ; ಓರ್ವ ಪೊಲೀಸ್​ ಹುತಾತ್ಮ
ಇವರನ್ನೆಲ್ಲ ಜೈಸಿಂಗಪುರ ಗ್ರಾಮದಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಅದರ ಅವಧಿ ಕೂಡ ಮುಗಿದಿದೆ. ಆದರೂ ಕರ್ನಾಟಕ್ಕೆ ತೆರಳಲು ಮಹಾರಾಷ್ಟ್ರ ಸರ್ಕಾರ ಅವಕಾಶ ಕೊಡುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್​ಡೌನ್​ ವಿಸ್ತರಣೆಯಾಗುತ್ತಿದ್ದಂತೆ ಕರ್ನಾಟಕಕ್ಕೆ ತೆರಳಲು ಕಾರ್ಮಿಕರು ನಡೆದುಕೊಂಡೇ ಹೊರಟಿದ್ದರು. ಆದರೆ ಚೆಕ್​ಪೋಸ್ಟ್​ವೊಂದರ ಬಳಿ ತಡೆದ ಮಹಾರಾಷ್ಟ್ರ ಪೊಲೀಸರು ಇವರೆಲ್ಲರನ್ನೂ ಜೈಸಿಂಗಪುರ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್​​ಗೆ ಹಾಕಿದ್ದರು. ಕ್ವಾರಂಟೈನ್​ ಮುಗಿದೇ 15 ದಿನಗಳು ಕಳೆದಿವೆ.
ಇದನ್ನೂ ಓದಿ:40 ಲಕ್ಷದತ್ತ ಕರೊನಾ ದಾಪುಗಾಲು: ವಿಶ್ವದಲ್ಲಿ ಹೆಚ್ಚುತ್ತಲೇ ಇದೆ ಸೋಂಕು
ನಮ್ಮನ್ನು ಊರಿಗೆ ಹೋಗಲು ಬಿಡುತ್ತಿಲ್ಲ. ಗ್ರಾಮದಿಂದ ಹೊರಬಿದ್ದರೆ ಸಾಕು ಪೊಲೀಸರು ಲಾಠಿ ಎತ್ತುತ್ತಿದ್ದಾರೆ. ನಮ್ಮನ್ನು ಇಲ್ಲಿಂದ ಕಳಿಸಿಕೊಡಿ ಎಂದು ಸ್ಥಳೀಯ ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದೇವೆ. ಆದರೆ ಬೆಳಗಾವಿ ಜಿಲ್ಲಾಧಿಕಾರಿ ಅನುಮತಿ ನೀಡುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಕ್ವಾರಂಟೈನ್​ ಮುಗಿದಿದ್ದಕ್ಕೆ ಸರ್ಟಿಫಿಕೇಟ್ ಕೂಡ ಕೊಡುತ್ತಿಲ್ಲ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)
ಅಮೆರಿಕದ ಶ್ವೇತಭವನದಲ್ಲಿ ಮೊಳಗಿತು ವೇದ ಮಂತ್ರ ಘೋಷ- ಪುರೋಹಿತರ ಆಹ್ವಾನಿಸಿದ ಟ್ರಂಪ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − two =
Remember me
