ಬೆಂಗಳೂರು:ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸುಮಾರು ಐನೂರು ವಲಸೆ ಕಾರ್ಮಿರು ತಮ್ಮ ರಾಜ್ಯಗಳಿಗೆ ವಾಪಾಸ್ ಹೋಗಲು ಸಜ್ಜಾಗಿದ್ದು, ನಮ್ಮನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡಿ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ.
ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬನಹಳ್ಳಿ ಬಳಿ ಸುಮಧುರಾ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ಬಿಹಾರ, ಪಶ್ಚಿಮಬಂಗಾಳ ಸೇರಿ ಇತರ ರಾಜ್ಯದ ಐನೂರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕರೊನಾ ಲಾಕ್​ಡೌನ್​ ವೇಳೆಯೂ ಈ ಸಂಸ್ಥೆ ಆಶ್ರಯದಲ್ಲೇ ಇದ್ದಾರೆ.
ಇದನ್ನೂ ಓದಿತಬ್ಲಿಘಿಗಳನ್ನು ಭಯೋತ್ಪಾದಕರಂತೆ ಕಾಣಬೇಕು ಎಂದಿದ್ಯಾರು?
ಸೋಮವಾರ ರಾತ್ರಿ 10.30ರ ಸುಮಾರಿನಲ್ಲಿ ಕೆಲ ಕಾರ್ಮಿಕರು ಕುಡಿದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ಮಧ್ಯಪ್ರವೇಶಿಸಿದ ಸೆಕ್ಯೂರಿಟಿ ಆ ಕಾರ್ಮಿಕರನ್ನು ಥಳಿಸಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಕಾಡುಗುಡಿ ಪೊಲೀಸರ ಬಳಿ ಜಮಾಯಿಸಿದ ನೂರಾರು ಕಾರ್ಮಿಕರು, ‘ನಾವು ನಮ್ಮೂರಿಗೆ ಹೋಗುತ್ತೇವೆ. ದಯಮಾಡಿ ಹೋಗಲು ವ್ಯವಸ್ಥೆ ಮಾಡಿ’ ಎಂದು ಕೋರಿದರು. ಸರ್ಕಾರದಿಂದ ಆದೇಶ ಬಂದ ಕೂಡಲೇ ನಿಮ್ಮನ್ನು ಕಳಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದರು. ಊರಿಗೆ ಹೋಗಲೇ ಬೇಕೆಂದು ಪೊಲೀಸರ ಬಳಿ ಕಾರ್ಮಿಕರು ಅಂಗಲಾಚುತ್ತಿರುವ ದೃಶ್ಯ ವೈರಲ್​ ಆಗಿದೆ.
https://www.facebook.com/VVani4U/videos/1123227758040839/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
