ಬೆಂಗಳೂರು: ಸೈನ್ಯ ಸೇರಿದರೆ ಅಥವಾ ಸೈನಿಕನಾದಲ್ಲಿ ಏನು ಪ್ರಯೋಜನ ಎಂಬ ಪ್ರಶ್ನೆಯನ್ನು ಕೆಲವರು ಕೇಳುವುದುಂಟು. ಇಂತಹವರು ಯೋಧನಾಗಿ ದೇಶಸೇವೆ ಮಾಡಿದ ಸಾರ್ಥಕತೆ ಪಡೆಯುವ ಜತೆಗೆ ನಿವೃತ್ತಿ ಬಳಿಕ ಶಿಸ್ತಿನ ಜೀವನ ನಡೆಸಲು ಸಾಧ್ಯ. ಪ್ರತಿಯೊಂದು ವಿಷಯದಲ್ಲೂ ಕರಾರುವಕ್ಕಾದ ನಿರ್ಧಾರ ಕೈಗೊಂಡು ಗುರಿ ಸಾಧಿಸಲು ಪ್ರೇರಣೆ ಸಿಗುತ್ತದೆ ಎಂದು ನಿವೃತ್ತ ವಿಂಗ್ ಕಮಾಂಡರ್ ಪಿ.ವಿ.ಶೆಟ್ಟಿ ಪ್ರತಿಪಾದಿಸಿದರು.
ಕಾರ್ಗಿಲ್ ವಿಜಯ್ ದಿವಸ್ ರಜತೋತ್ಸವ ನಿಮಿತ್ತ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನರು ತಮ್ಮ ಜೀವನದಲ್ಲಿ ಮೇಲೆ ಬರಲು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ‘ಗ್ರ್ಾ’ ರೀತಿ ತಮ್ಮ ವ್ಯಕ್ತಿತ್ವವನ್ನು ಸದಾ ಕಾಲ ಉತ್ತಮಪಡಿಸಿಕೊಳ್ಳಲು ಸೈನಿಕನಂತೆ ಕಾರ್ಯನಿರ್ವಹಿಸಬೇಕು. ಸೇನೆಯಲ್ಲಿ ಕಲಿತ ಪಾಠವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಹೇಳಿದ ಬಳಿಕ ಅವರಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ. ಇದರಿಂದ ಪ್ರೇರಣೆಗೊಂಡು ಪ್ರತೀವರ್ಷ ಎರಡು ಭಾರಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಏರ್ಪಡಿಸಿ ಅವರನ್ನು ಶಿಸ್ತು ಸಿಪಾಯಿಗಳನ್ನಾಗಿ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಕಣ್ಮುಂದೆ ಹಾದುಹೋದ ನೈಜ ಚಿತ್ರಣ:
ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ನಿವೃತ್ತ ಕ್ಯಾ. ನವೀನ್ ನಾಗಪ್ಪ ಅವರು ತಮ್ಮ ಸಹ ಸೈನಿಕರೊಂದಿಗೆ ಜತೆಗೂಡಿ ವೈರಿಗಳೊಂದಿಗೆ ಕಾದಾಟ ನಡೆಸಿ ಭಾರತದ ಭೂ ಭಾಗಗಳನ್ನು ಮರುವಶಕ್ಕೆ ಪಡೆದ ಘಟನಾವಳಿಯನ್ನು ಸಭಿಕರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಅತೀ ದುರ್ಗಮ ಹಾದಿಯಲ್ಲಿ ತೆರಳಿ ಶತೃಗಳನ್ನು ಸೆದೆಬಡಿಯುವ ವೇಳೆ ಸಿಡಿದ ಗ್ರೆನೇಡ್‌ನಿಂದಾಗಿ ತಮ್ಮ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದನ್ನು ವಿವರಿಸುವ ವೇಳೆ ಸಾರ್ವಜನಿಕರ ಕೆನ್ನಾಳಿಗೆಗಲು ತೇವಗೊಂಡವು. ಸುದೀರ್ಘ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಜೀವನದಲ್ಲಿ ಮತ್ತೆ ಹೊಸ ಜೀವನ ನಡೆಸಲು ಸೈನಿಕನಲ್ಲಿರುವ ಛಲವೇ ಕಾರಣ. ಇಂತಹ ಛಲದಂಕಮಲ್ಲರಂತೆ ಗಡಿಯಲ್ಲಿ ಕಾರ್ಯನಿರ್ವಹಿಸುವ ಕಾಯಕ ಮಾಡಲು ಯುವಜನತೆ ಹಿಂದೇಟು ಹಾಕಬಾರದು ಎಂದು ಕಿವಿಮಾತು ಹೇಳಿದರು.
ವಿಶೇಷ ಪುರವಣಿ ಬಿಡುಗಡೆ:
ಕಾರ್ಗಿಲ್ ವಿಜಯ್ ದಿವಸ್ ರಜತೋತ್ಸವ ಸ್ಮರಣೆಗಾಗಿ ವಿಜಯವಾಣಿ ತನ್ನ ಜು.26 ಸಂಚಿಕೆ ಜತೆಗೆ ‘ವೀರ ಯೋಧರಿಗೆ ನಮನ’ ಶೀರ್ಷಿಕೆಯಡಿ 8 ಪುಟಗಳ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಲಾಯಿತು. ಶಾಸಕ ಜ್ಯೋತಿಗಣೇಶ್ ಹಾಗೂ ಇತರ ಗಣ್ಯರು ವಿಶೇಷ ಪುರವಣಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾಲೇಜು ವಿದ್ಯಾರ್ಥಿಗಳು ಕೂಡ ಪುರವಣಿ ಓದಿ ಯೋಧರ ಬಗ್ಗೆ ಹೆಮ್ಮಪಟ್ಟರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
