ವಿಲಾಸ ಮೇಲಗಿರಿ
ಬೆಂಗಳೂರು :ಹಾಲಿನ ಉತ್ಪಾದನೆ ಹೆಚ್ಚಿಸಲು ನೀಡುವ ಹುದುಗಿದ (ಫರ್ಮೆಂಟ್) ಆಹಾರದಿಂದ ರಾಸುಗಳಲ್ಲಿ ನಾಲಿಗೆ ಹುಣ್ಣು ಕಂಡು ಬರುತ್ತಿರುವುದು ರೈತರನ್ನು ಪೇಚಿಗೆ ಸಿಲುಕಿಸಿದೆ. ಇಂತಹ ರಾಸುಗಳ ಹಾಲು ಸೇವನೆಯಿಂದ ಮನುಷ್ಯರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವಾಗುವ ಸಾಧ್ಯತೆ ಇದೆ ಎಂಬುದು ಮತ್ತೊಂದು ಆತಂಕಕಾರಿ ಸಂಗತಿ.
ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಆಸೆಯಿಂದ, ಬ್ರಿವರಿ ಕಾರ್ಖಾನೆಗಳು ಬಿಯರ್ ತಯಾರಿಸಿದ ಬಳಿಕ ಉಳಿಯುವ ಹುದುಗಿದ ಜೋಳ, ಬಾರ್ಲಿ, ಓಟ್ಸ್ ತ್ಯಾಜ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ ರಾಸುಗಳಿಗೆ ಆಹಾರವನ್ನಾಗಿ ಕೊಡಲಾಗುತ್ತಿದೆ. ಇದರಿಂದ ಕಾಲುಬಾಯಿ ಜ್ವರದ ಮಾದರಿಯ ನಾಲಿಗೆ ಹುಣ್ಣುಗಳು ಕಂಡುಬರುತ್ತಿವೆ.
ಆಹಾರದಲ್ಲಿ ದಂಡಿ ವಿಷ
ರೈತನ ಮನೆಯಲ್ಲಿನ ಹಿಂಡಿ ಮತ್ತು ಬೂಸಾದಲ್ಲಿ ಅಫ್ಲೋಟಾಕ್ಸಿನ್ ಬಿ 1 ಪ್ರಮಾಣ ಕೆಜಿಗೆ 32.61 ಮೈಕ್ರೋ ಗ್ರಾಮ್ ಮತ್ತು 31.59 ಮೈಕ್ರೋ ಗ್ರಾಮ್ಷ್ಟಿತ್ತು. ಎಫ್​ಡಿಎ ಅಧಿಸೂಚನೆ ಪ್ರಕಾರ ಹೈನುರಾಸುಗಳಿಗೆ ಸಿದ್ಧಪಡಿಸಿದ ಒಂದು ಕೆಜಿ ಪಶು ಆಹಾರದಲ್ಲಿ ಅಫ್ಲೋಟಾಕ್ಸಿನ್ ಬಿ 1 ಪರಿಮಿತಿ ಕೆಜಿಗೆ 20 ಮೈಕ್ರೋ ಗ್ರಾಂ ಮಾತ್ರ. ಹಾಗೆಯೇ ಹಾಲಿನಲ್ಲಿ ಅಫ್ಲೋಟಾಕ್ಸಿನ್ ಎಂ1 ಪರಿಮಿತಿ 0.5 ಮೈಕ್ರೋ ಗ್ರಾಂ. ಆದರೆ, ಹುದುಗಿದ ಆಹಾರದಲ್ಲಿ ಅಫ್ಲೋಟಾಕ್ಸಿನ್ 147.59 ಮೈಕ್ರೋ ಗ್ರಾಂ ಇದ್ದು ರಾಸು ಮತ್ತು ಮನುಷ್ಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹದ್ದಾಗಿದೆ.
ಪರಿಹಾರಗಳೇನು?
ಸಿದ್ಧಪಡಿಸಿದ ಪಶು ಅಥವಾ ಕುಕ್ಕಟ ಆಹಾರವನ್ನು ತೇವಾಂಶ ಇರದ ಕೋಣೆಯಲ್ಲಿ ನೆಲದಿಂದ ತುಸು ಎತ್ತರದಲ್ಲಿ ಶೇಖರಿಸಿಡಬೇಕು. ಇಲ್ಲವೇ ಸಿದ್ಧಪಡಿಸಿದ ಪಶು ಆಹಾರದಲ್ಲಿ ಮೈಕೋಟಾಕ್ಸಿನ್ ಪ್ರಮಾಣವನ್ನು ಮಾನ್ಯತೆ ಪಡೆದ ಪಶು ಆಹಾರ ಪರೀಕ್ಷಾ ಪ್ರಯೋಗಾಲಯದಿಂದ ಖಚಿತಪಡಿಸಿಕೊಂಡು ಬಳಸುವುದು ಸೂಕ್ತ. ಪಶು ಆಹಾರತಜ್ಞರ ಶಿಫಾರಸಿನ ಮೇರೆಗೆ ಮೈಕೋಟಾಕ್ಸಿನ್, ಬೈಂಡರ್​ಗಳಾದ ಹೈಡ್ರೇಟಡ್ ಸೋಡಿಯಂ ಕ್ಯಾಲ್ಸಿಯಂ, ಅಲ್ಯುಮಿನೋ ಸಿಲಿಕೇಟ್ಸ್, ಬೆಂಟೋನೈಟ್ ಮತ್ತು ಜಿಯೋಲೈಟ್​ಗಳನ್ನು ಸಿದ್ಧಪಡಿಸಿದ ಪಶು ಆಹಾರದಲ್ಲಿ ಉಪಯೋಗಿಸಬಹುದು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬೈಕ್‌ ಸವಾರರ ಜಾಲಿರೈಡ್‌ಗೆ ಐದು ಕಾರುಗಳು ‘ಬಲಿ’! ಸರಣಿ ಅಪಘಾತದಿಂದ ಆತಂಕ
ಅಷ್ಟೇ ಅಲ್ಲ, ಮಳೆಗಾಲದಲ್ಲಿ ಸರಿಯಾಗಿ ಒಣಗಿಸದೇ ಸಂಗ್ರಹಿಸಿಟ್ಟ ಧಾನ್ಯಗಳು, ಜೋಳ, ಕಡಲೆಬೀಜ, ಹತ್ತಿಬೀಜ, ಸೋಯಾ ಅವರೆ, ಕೊಬ್ಬರಿ, ಕೊಯ್ಲೋತ್ತರ ಹುರುಳಿ, ಅವರೆ, ಶೇಂಗಾ ಸಪ್ಪೆ ಮೇಲೆ ವಿಷ ಶಿಲೀಂಧ್ರಗಳು ಬೆಳೆದು ಅದನ್ನು ತಿನ್ನುವ ರಾಸುಗಳಲ್ಲಿಯೂ ಈ ಬಾಧೆ ಕಾಡುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಕನಕಪುರದ ಮಾಳಗಾಳಿನ ರೈತರೊಬ್ಬರು ರಾಸುಗಳಿಗೆ ಕಾಲುಬಾಯಿ ಜ್ವರ ಬಂದಿದೆಯೆಂದು ಪರೀಕ್ಷೆಗಾಗಿ ನಾಲಿಗೆ ಮತ್ತು ವಸಡಿನ ಮೇಲ್ಪದರದ ಮಾದರಿಯನ್ನು ತಂದಿದ್ದರು. ರೋಗ ದೃಢೀಕರಣ ಮಾಡುವಂತೆ ಪಶುವೈದ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಂ.ವೀರೇಗೌಡ, ಡಾ.ಚಂದ್ರಶೇಖರ್ ಅವರ ಬಳಿ ಮನವಿ ಮಾಡಿ, ರಾಸುಗಳು ಮೇವು ಸೇವಿಸದೆ, ಜೊಲ್ಲು ಸುರಿಸುತ್ತಾ ಜ್ವರದಿಂದ ಬಳಲುತ್ತಿರುವ ಮಾಹಿತಿ ನೀಡಿದಾಗ ರಾಸುಗಳ ದೇಹ ಸೇರುವ ಶಿಲೀಂಧ್ರದಿಂದಾಗುವ ಅಪಾಯಗಳು ಬೆಳಕಿಗೆ ಬಂದಿವೆ.
ಇದನ್ನೂ ಓದಿ:ಮದುವೆ ದಿನವೇ ಮುಟ್ಟಾಗಿದ್ದಳಾಕೆ : ಡಿವೋರ್ಸ್​ಗೆ ಅದುವೇ ಕಾರಣವಾಯ್ತಾ?
ಬೆಳಕಿಗೆ ಬಂದದ್ದು ಹೇಗೆ?:ರಾಸುಗಳಿರುವ ಸ್ಥಳಕ್ಕೆ ತೆರಳಿ ರಾಸುಗಳ ನಾಲಿಗೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಹೂಕೋಸಿನ ಆಕೃತಿಯ ಹುಣ್ಣು ಗೋಚರಿಸಿತ್ತು. ಅಲ್ಲಿಯೇ ಸಮೀಪದಲ್ಲಿದ್ದ ಪ್ಲಾಸ್ಟಿಕ್ ಡ್ರಮ್ಳಲ್ಲಿ ಹುದುಗಿದ ಆಹಾರವನ್ನು ಪರೀಕ್ಷಿಸಿದಾಗ ಅದರ ಮೇಲೆ ವಿಷದ ಶಿಲೀಂಧ್ರ (ಮೈಕೋಟಾಕ್ಸಿನ್) ಬೆಳೆದಿದ್ದು ಕಂಡುಬಂದಿತ್ತು. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಷಶಾಸ್ತ್ರ ಪ್ರಯೋಗಾಲಯದಲ್ಲಿ ಡಾ.ಲೋಹಿತ್ ಹಾಗೂ ಡಾ.ಗೌತಮ್ ಪರೀಕ್ಷಿಸಿದಾಗ ಅಫ್ಲೊಟಾಕ್ಸಿನ್ ಬಿ1 ಪ್ರಮಾಣ ಕೆಜಿಗೆ 147.59 ಮೈಕ್ರೋಗ್ರಾಮ್ಷ್ಟು ಅತ್ಯಧಿಕವಾಗಿದ್ದ ಅಂಶ ಪತ್ತೆಯಾಯಿತು.
ಇದನ್ನೂ ಓದಿ:ಗ್ರಾಮಾಯಣ : ಹಕ್ಕು ಚಲಾವಣೆಯಲ್ಲಿ ಗೊಂದಲ, ಮತದಾನ ಬಹಿಷ್ಕಾರಕ್ಕೆ ಮುಂದಾದ ಸಿದ್ದಯ್ಯಪುರ ಗ್ರಾಮಸ್ಥರು..
ಕ್ಯಾನ್ಸರ್​ಕಾರಕ ವಿಷ :ಅಫ್ಲೊಟಾಕ್ಸಿನ್ ಹೆಚ್ಚಿರುವ ವಿಷಯುಕ್ತ ಆಹಾರ ತಿಂದ ರಾಸುಗಳಲ್ಲಿ ರಕ್ತಹೀನತೆ, ಭೇದಿ, ಚರ್ಮದಡಿ ರಸ್ತಸ್ರಾವ, ರಾಸುಗಳ ಬೆದೆಚಕ್ರದಲ್ಲಿ ವ್ಯತ್ಯಾಸ, ಕುಂಠಿತ ಬೆಳವಣಿಗೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಕಳೆದುಕೊಂಡು ರಾಸುಗಳು ಇತರ ಕಾಯಿಲೆಗಳಿಗೆ ತುತ್ತಾಗುತ್ತವೆ. ಈ ಟಾಕ್ಸಿನ್​ಗಳು ಹೈನು ರಾಸುಗಳಲ್ಲಿ ಸಸಾರಜನಕದ ಅವಶ್ಯಕತೆ ಹೆಚ್ಚಿಸುವ ಜತೆಗೆ ಕ್ಯಾನ್ಸರ್​ಕಾರಕವಾಗಿ ವರ್ತಿಸುತ್ತವೆ. ಅಫ್ಲೊಟಾಕ್ಸಿನ್ ಬಿ1 ಪಚನಗೊಂಡ ನಂತರ ಅಫ್ಲೊಟಾಕ್ಸಿನ್ ಎಂ1 ಆಗಿ ಪರಿವರ್ತನೆಗೊಂಡು 12 ಗಂಟೆಯೊಳಗೆ ಹಾಲಿನ ಮುಖೇನ ಹೊರಹಾಕಲ್ಪಡುತ್ತದೆ. ಆ ಹಾಲನ್ನು ಸೇವಿಸಿದವರ ಮೇಲೆ ಅದು ದುಷ್ಪರಿಣಾಮ ಉಂಟು ಮಾಡುವುದಲ್ಲದೇ ಕ್ಯಾನ್ಸರ್​ಕಾರಕವೂ ಆಗಬಹುದು ಎಂದು ಡಾ.ವೀರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ನಿರ್ಭಯಾ ನಿಧಿ ಅಕ್ರಮ ಆರೋಪದ ಬಗ್ಗೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್​ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 10 =
Remember me
