ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ಬೈಪಾಸ್ ರಸ್ತೆಯ ಬೇವಿನ ಮರವೊಂದರಲ್ಲಿ ಹಾಲಿನ ಮಾದರಿಯಲ್ಲಿ ದ್ರವ ಹೊರ ಬಂದಿದ್ದು ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ವಿವಿಧ ಭಾಗಗಳಿಂದ ಜನರು ಬಂದು ವೀಕ್ಷಿಸಲು ಮುಗಿ ಬಿದ್ದರು.ಇಲ್ಲಿನ ವಿಘ್ನೇಶ್ವರ ಸರ್ಕಲ್ ಬಳಿ ಇರುವ ಬೇವಿನ ಮರದ ಕೊಂಬೆಯಲ್ಲಿ ಹಾಲಿನ ಮಾದರಿ ದ್ರವ ಉಕ್ಕಿ ಹರಿದು, ರಸ್ತೆಯ ಬದಿಗೆ ಬೀಳುತ್ತಿರುವುದನ್ನು ಕೆಲವರು ಯಾರೋ ನೋಡಿದ್ದಾರೆ. ಇದೇ ವೇಳೆ ದಾರಿಹೋಕರು ಸ್ಥಳದಲ್ಲಿ ಜಮಾಯಿಸಿದ್ದು ನಾನಾ ರೀತಿಯಲ್ಲಿ ಚರ್ಚೆಗಳಾಗಿವೆ. ಕೆಲವೇ ಕ್ಷಣದಲ್ಲಿ ಸುದ್ದಿ ವ್ಯಾಪಕವಾಗಿ ಹರಡಿದೆ. ಇದರಿಂದ ದೊಡ್ಡ ಪವಾಡ ನಡೆಯುತ್ತಿದೆ ಎಂಬ ಅಶ್ಚರ್ಯಕರ ಭಾವನೆಯಲ್ಲಿ ಸುತ್ತಲಿನ ಜನರು ಬಂದಿದ್ದಾರೆ. ಇವರುಗಳ ಪೈಕಿ ಅನೇಕರು, ಇದು ದೈವ ಸ್ವರೂಪಿ ಮರ ಎಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.ಬೇವಿನ ಮರದಲ್ಲಿ ಬಿಳಿ ದ್ರವ ಸುರಿಯುವಂತಹುದು, ಇದು ಹಾಲಿನ ಮಾದರಿಯಲ್ಲಿ ಕಾಣುವಂತಹುದು ಅಪರೂಪ. ಇಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗಿವೆ. ಪ್ರಾರಂಭದಲ್ಲಿ ಅನೇಕರು ಕತೆ ಕಟ್ಟಿ ಏನೇನೋ ಹೇಳುತ್ತಿದ್ದರು. ಇದಕ್ಕೆ ಚಿಂತಕರು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ ಪ್ರಕೃತಿ ಸಹಜ ಪ್ರಕ್ರಿಯೆ ಎಂಬುದನ್ನು ವಿವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
