ಬೆಂಗಳೂರು:ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 2 ರೂಪಾಯಿ ನೀಡಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮುಲ್) ನಿರ್ಧರಿಸಿದೆ.
ಬೆಂಗಳೂರು, ಬೆಂ,ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ರೈತರಿಗೆ ಈ ಹೊಸ ದರ ಅನ್ವಯವಾಗಲಿದೆ. ಕರೊನಾ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತಗೊಳಿಸಲಾಗಿತ್ತು. ಒಕ್ಕೂಟವು ಈಗ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಶೇ.4.2 ಜಿಡ್ಡಿನಾಂಶ ಇರುವ ಹಾಲಿಗೆ 2 ರೂ. ಹೆಚ್ಚಿಸಿ, ಪ್ರತಿ ಲೀಟರ್​ಗೆ 27,40 ರೂ.ನಂತೆ ಖರೀದಿಸಲಿದೆ. ಫೆ.6ರಿಂದ ಇದು ಜಾರಿಗೆ ಬರಲಿದ್ದು, 1.50 ಲಕ್ಷ ರೈತರಿಗೆ ಪ್ರಯೋಜನ ಸಿಗಲಿದೆ. ಈ ಹಿಂದೆ 25,40 ರೂ.ನಂತೆ ಖರೀದಿಸಲಾಗುತ್ತಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಮುಲ್​ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದರು.ಇದನ್ನೂ ಓದಿರಿಶ್ರೀಮೈಲಾರ ಜಾತ್ರೆ ರದ್ದು: ಕಾರ್ಣಿಕ ಭವಿಷ್ಯ ಹೇಳೋಕೂ ಅಡ್ಡಿ! ಕಾರಣ ಇಲ್ಲಿದೆ
ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಿಸುವಂತೆ ಕೆಎಂಎಫ್​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಎಲ್ಲ ಒಕ್ಕೂಟಗಳೂ ಹಾಲಿನ ದರ ಹೆಚ್ಚಿಸಲು ಬೇಡಿಕೆ ಇಟ್ಟಿವೆ. ಈ ಬಗ್ಗೆ ಶೀಘ್ರದಲ್ಲೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಅಲ್ಲದೆ, ಸರ್ಕಾರ ಕ್ಷೀರ ಯೋಜನೆಯಡಿ ರೈತರಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದನ್ನು 6 ರೂ.ಗೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಿಂದಿನ ಸರ್ಕಾರ ಪ್ರೋತ್ಸಾಹ ಧನವನ್ನು ಹೆಚ್ಚಿಸಿದ್ದರೂ ಕಾರಣಾಂತರಗಳಿಂದ ಹಣ ಬಿಡುಗಡೆ ಆಗಿರಲಿಲ್ಲ ಎಂದು ಬಮುಲ್​ ಮಾಜಿ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ಒಕ್ಕೂಟ ವ್ಯಾಪಿಯ ಕನಕಪುರ ಡೇರಿ ಘಟಕ್ಕೆ ಕೇಂದ್ರ ಸರ್ಕಾರದಿಂದ ರಪ್ತು ಪರವಾನಗಿ ಸಿಕ್ಕಿದೆ. ಈ ಘಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯಂತ್ರೋಪರಕಣಗಳನ್ನು ಅಳವಡಿಸಲಾಗಿದೆ. ಮೊಜೆರೆಲ್ಲಾ ಬೆಣ್ಣೆ, ತುಪ್ಪ, ಬೆಣ್ಣೆ, ಹಾಲಿನ ಪುಡಿ ಹಾಗೂ 90 ದಿನಗಳ ಜೀವಿತಾವಧಿಯ ನಂದಿನಿ ತೃಪ್ತಿ ಹಾಲು ಸೇರಿ ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಅಲ್ಲದೆ, ಪ್ರಸ್ತುತ ಸಾಲಿನಲ್ಲಿ ಇದೇ ಘಟಕದಲ್ಲಿ ಪ್ರತಿ ನಿತ್ಯ 6 ಲಕ್ಷ ಲೀಟರ್ ಹಾಲನ್ನು ಪರಿವರ್ತಿಸುವ ಮತ್ತೊಂದು ಘಟಕ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ಉತ್ಪಾದಿಸುವ ನಂದಿನಿ ಹಾಲಿನ ಉತ್ಪನ್ನಗಳನ್ನು ಹೊರ ದೇಶಗಳಿಗೆ ರಪ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಬಮುಲ್ ಎಂಡಿ ಡಾ.ಕೆ.ಸ್ವಾಮಿ ತಿಳಿಸಿದರು.
ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?

ಮಕ್ಕಳಿಬ್ಬರು ನೀರುಪಾಲು! ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಬಂದ ಅಮ್ಮ-ಚಿಕ್ಕಮ್ಮನೂ ಬದುಕಲಿಲ್ಲ

ಶ್ರೀಮೈಲಾರ ಜಾತ್ರೆ ರದ್ದು: ಕಾರ್ಣಿಕ ಭವಿಷ್ಯ ಹೇಳೋಕೂ ಅಡ್ಡಿ! ಕಾರಣ ಇಲ್ಲಿದೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve − ten =
Remember me
