|ಶಿವಾನಂದ ಹಿರೇಮಠಗದಗ
ಚರ್ಮಗಂಟು, ಕಾಲುಬೇನೆ, ಕಾಲುಬಾಯಿ ರೋಗದಿಂದ ಆಕಳುಗಳ ಹಾಲು ಉತ್ಪಾದನೆ ಸಾಮರ್ಥ್ಯ ಇಳಿಕೆಯಾಗಿದ್ದು, ರಾಜ್ಯದಲ್ಲಿ ಕ್ಷೀರ ಬರ ಎದುರಾಗಿದೆ. ಮಾರುಕಟ್ಟೆಯ ಬೇಡಿಕೆಯಷ್ಟು ಕೆಎಂಎಫ್​ಗೆ ಹಾಲು ಪೂರೈಕೆ ಸಾಧ್ಯವಾಗುತ್ತಿಲ್ಲ. ನಿತ್ಯ 20 ಲಕ್ಷ ಲೀಟರ್ ಹಾಲು ಕಡಿಮೆ ಲಭ್ಯವಾಗುತ್ತಿದ್ದು, ಇದರಿಂದ ಶೇ. 20ರಷ್ಟು ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಹಾಲು ಪೂರೈಕೆ ಕಡಿಮೆಯಾದ ಪರಿಣಾಮ ಬೆಣ್ಣೆ, ಹಾಲಿನ ಪೌಡರ್ ಉತ್ಪಾದನೆ ಮತ್ತು ಸಂಸ್ಕರಣೆ ಸಾಧ್ಯವಾಗುತ್ತಿಲ್ಲ.
ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ದಾಖಲೆಯ 90 ಲಕ್ಷ ಲೀಟರ್ ಹಾಲು ರೈತರಿಂದ ಕೆಎಂಎಫ್​ಗೆ ಪ್ರತಿನಿತ್ಯ ರವಾನೆ ಆಗುತ್ತಿತ್ತು. ಪ್ರಸ್ತುತ ಸರಾಸರಿ 67 ಲಕ್ಷ ಲೀಟರ್​ನಿಂದ 71 ಲಕ್ಷ ಲೀಟರ್ ಬರುತ್ತಿದೆ. ಜಾನುವಾರುಗಳಿಗೆ ಅಂಟಿದ ಚರ್ಮಗಂಟು, ಮಳೆ, ಮೇವಿನ ಕೊರತೆ ಮತ್ತು ಅಧಿಕ ತಾಪಮಾನವು ಹಾಲು ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರಿವೆ. ಕೆಎಂಎಫ್ ಅಡಿ ಕಾರ್ಯನಿರ್ವಹಿಸುತ್ತಿರುವ 16 ವಿಭಾಗೀಯ ಹಾಲು ಉತ್ಪನ್ನ ಮಂಡಳಿಗಳು ಮಾರುಕಟ್ಟೆಗೆ ಸರಾಸರಿ ಶೇ 15ರಿಂದ 23ರಷ್ಟು ಹಾಲು ಪೂರೈಸುವುದನ್ನು ಕಡಿತಗೊಳಿಸಿವೆ. ಮಾರುಕಟ್ಟೆಯಲ್ಲಿನ ನಂದಿನಿ ಮಳಿಗೆಗಳಲ್ಲಿ ಬೆಳಗ್ಗೆ 7.30ರಿಂದ 8 ಗಂಟೆ ಒಳಗಾಗಿ ಹಾಲಿನ ಪ್ಯಾಕೆಟ್​ಗಳು ಖಾಲಿಯಾಗುತ್ತಿವೆ. ಕ್ಷೀರಭಾಗ್ಯ ಯೋಜನೆಯೂ ಪ್ರತಿಕೂಲ ಪರಿಣಾಮ ಎದುರಿಸುತ್ತಿದೆ.
ಅಧಿಕ ಪ್ರಮಾಣದ ಇಳಿಕೆ:ಧಾರವಾಡ ಒಕ್ಕೂಟ ವ್ಯಾಪ್ತಿಯ ಗದಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತಿನಿತ್ಯ 1.15 ಲಕ್ಷ ಲೀಟರ್​ನಿಂದ 95 ಸಾವಿರ ಲೀಟರ್​ಗೆ ಇಳಿಕೆ, ತುಮಕೂರಿನಲ್ಲಿ 1.20 ಲಕ್ಷ ಲೀಟರ್​ನಿಂದ 77 ಸಾವಿರ ಲೀಟರ್​ಗೆ ಹಾಲು ಇಳಿಕೆ ಕಂಡಿದೆ. ಕೋಲಾರ, ಶಿವಮೊಗ್ಗ, ಬಳ್ಳಾರಿ, ಚಿಕ್ಕಬಳ್ಳಾಪುರ ಹಾಲು ಉತ್ಪನ್ನ ಮಂಡಳಿಗಳಲ್ಲಿಯೂ ಇದೇ ಸಮಸ್ಯೆಯಿದೆ. ಹಾಲಿನ ಕೊರತೆಯಿಂದಾಗಿ ಕೆಎಂಎಫ್​ನಲ್ಲಿ ಮೊದಲಿದ್ದ ಮಾಸಿಕ 2 ಸಾವಿರ ಟನ್ ತುಪ್ಪದ ಉತ್ಪಾದನೆಯು 1,720 ಟನ್​ಗೆ ಕುಸಿದಿದೆ. ಪ್ರತಿ ತಿಂಗಳು 400 ಟನ್ ಉತ್ಪಾದನೆ ಆಗುತ್ತಿದ್ದ ಬೆಣ್ಣೆಯೂ 150 ಟನ್​ಗೆ ಕುಸಿದಿದೆ.
ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣ ಹಾಲಿನ ಕೊರತೆ ಅನುಭವಿಸುತ್ತಿದ್ದೇವೆ. ಬೆಣ್ಣೆ, ತುಪ್ಪ, ಹಾಲು ಪೌಡರ್ ಉತ್ಪಾದನೆಗೆ ಹೊರ ರಾಜ್ಯಗಳ ಉಳಿಕೆ ಹಾಲನ್ನು ಖರೀದಿಸುವ ಕುರಿತು ರ್ಚಚಿಸಲಾಗುವುದು.
|ಎಚ್.ಹಿರೇಗೌಡರನಿರ್ದೇಶಕರು, ಕೆಎಂಎಫ್ ಧಾರವಾಡ
ರೈತರಿಂದ ಹಾಲು ಖರೀದಿ ಸಂದರ್ಭದಲ್ಲಿ ಸರ್ಕಾರದ ಮಾನದಂಡದ ಪ್ರಕಾರ ಹಾಲಿನಲ್ಲಿ 3.5 ಕೊಬ್ಬಿನ ಅಂಶವಿದ್ದರೆ ಮಾತ್ರ ಕೆಎಂಎಫ್ ಖರೀದಿಸುತ್ತದೆ. ಆದರೆ, ಚರ್ಮಗಂಟು ರೋಗದ ಪರಿಣಾಮ ಜಾನುವಾರುಗಳ ಹಾಲಿನಲ್ಲಿ ಕೊಬ್ಬಿನ ಅಂಶವು ಶೇ 3.5ರ ಪ್ರಮಾಣಕ್ಕೆ ತಲುಪುತ್ತಿಲ್ಲ. ಗುಣಮಟ್ಟದ ಕೊರತೆಯಿಂದ ಕೆಎಂಎಫ್, ರೈತರಿಂದ ಹಾಲು ಖರೀದಿ ನಿರಾಕರಿಸಲಾಗುತ್ತಿದೆ. ಇದೇ ಹಾಲನ್ನು ಖಾಸಗಿ ಮಾರಾಟಗಾರರು ರೈತರಿಂದ ಖರೀದಿಸಿ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಖಾಸಗಿಯವರಿಗೆ ಈ ಮಾನದಂಡದ ಹಂಗು ಇಲ್ಲ. ಹೀಗಾಗಿ, ಖಾಸಗಿಯವರ ಸ್ಪರ್ಧೆಯಿಂದ ಕೆಎಂಎಫ್ ಹಿನ್ನಡೆ ಅನುಭವಿಸುತ್ತಿದೆ.
ಹೊರ ರಾಜ್ಯಗಳಿಂದ ಖರೀದಿ:ಒಂದೆಡೆ ಹಾಲು ಉತ್ಪನ್ನ ಕಡಿಮೆ ಯಾದರೆ, ಮತ್ತೊಂದೆಡೆ ಹಾಲು, ಮತ್ತು ಹಾಲಿನ ಪೌಡರ್ ಬೇಡಿಕೆ ಗಣನೀಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಹಾಲು ಖರೀದಿಗೆ ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆ. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಲೀಟರ್​ಗೆ 5 ರೂ. ಹೆಚ್ಚಿಸಲು ಬೇಡಿಕೆ:ಲೀಟರ್ ಹಾಲಿಗೆ ಕನಿಷ್ಠ 5 ರೂ. ಹೆಚ್ಚಿಸುವಂತೆ ರೈತರು ಬೇಡಿಕೆ ಇಟ್ಟಿದ್ದಾರೆ. ಕೆಎಂಎಫ್ ದರಕ್ಕಿಂತ ಖಾಸಗಿ ವ್ಯಾಪಾರಸ್ಥರು ಲೀಟರ್ ಹಾಲಿಗೆ 10ರಿಂದ 15 ರೂ. ಅಧಿಕ ಬೆಲೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್​ನಲ್ಲೂ 5 ರೂ. ಹೆಚ್ಚಿಸಲು ಆಗ್ರಹ ಕೇಳಿಬರುತ್ತಿದೆ.
ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
