ಉತ್ತರಕನ್ನಡ:ಹೆದ್ದಾರಿಯಲ್ಲಿ ಪೆಟ್ರೋಲ್​-ಡೀಸೆಲ್ ಟ್ಯಾಂಕರ್ ಅಥವಾ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್​ಗಳು ಅಪಘಾತಕ್ಕೀಡಾದಾಗ ಜನರು ಅವುಗಳನ್ನು ತುಂಬಿಸಿಕೊಂಡು ಹೋಗಲು ಮುಗಿಬಿದ್ದ ಪ್ರಕರಣಗಳು ಈಗಾಗಲೇ ಸಾಕಷ್ಟು ನಡೆದಿವೆ. ಅಂಥದ್ದೇ ಒಂದು ಪ್ರಕರಣ ಇದೀಗ ಸಂಭವಿಸಿದ್ದು, ಇಲ್ಲಿದ್ದ ಪೆಟ್ರೋಲ್​-ಡೀಸೆಲ್, ಆಲ್ಕೊಹಾಲೂ ಅಲ್ಲ, ಬದಲಿಗೆ ಹಾಲು.
ಹೌದು.. ಹಾಲಿನ ಟ್ಯಾಂಕರ್​ವೊಂದು ರಸ್ತೆಯಲ್ಲಿ ಪಲ್ಟಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ಅರೆಬೈಲ್ ಘಟ್ಟದಲ್ಲಿ ಈ ಅಪಘಾತ ಸಂಭವಿಸಿದ್ದು, ಹಾಲು ರಸ್ತೆಯಲ್ಲಿ ಹೊಳೆಯಂತೆ ಹರಿದಿದೆ.
ವಾಹನದಿಂದ ಚೆಲ್ಲುತ್ತಿದ್ದ ಹಾಲನ್ನು ತೆಗೆದುಕೊಳ್ಳಲು ಜನರು ಬಾಟಲಿ-ಕ್ಯಾನ್​ಗಳನ್ನು ಹಿಡಿದುಕೊಂಡು ಬಂದು ಬಿಟ್ಟಿ ಹಾಲಿಗಾಗಿ ಮುಗಿಬಿದ್ದ ಪ್ರಸಂಗವೂ ನಡೆದಿದೆ. ಹಾಲಿನ ಈ ಟ್ಯಾಂಕರ್​ ಕೊಲ್ಲಾಪುರದಿಂದ ಕೇರಳ ಕಡೆ ತೆರಳುತ್ತಿದ್ದು, ಬ್ರೇಕ್​ ಫೇಲ್ ಆಗಿ ಡಿವೈಡರ್​ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು.
ಸ್ನೇಹಿತನ ಶವ ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಾರ್ಗ ಮಧ್ಯೆ ಸ್ಥಳದಲ್ಲೇ ಸಾವು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − four =
Remember me
