ಬೆಂಗಳೂರು:ಜಾಗತಿಕವಾಗಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗದ ಮುಖ್ಯಸ್ಥೆ ಪ್ರೊ. ಕೆ. ಗೀತಾ ಹೇಳಿದರು.
‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ – 2023’ ಅಂಗವಾಗಿ ಕೇಂದ್ರ ವಾರ್ತಾ ಇಲಾಖೆ ಬೆಂಗಳೂರು ವಿಭಾಗದಿಂದ ಗುರುವಾರ ಆಯೋಜಿಸಿದ್ದ ‘ಸಿರಿಧಾನ್ಯಗಳಲ್ಲಿ ಪೌಷ್ಠಿಕಾಂಶ ಮತ್ತು ವೈವಿದ್ಯಮಯ ಖಾದ್ಯಗಳು’ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಿರಿಧಾನ್ಯ ಪದಾರ್ಥಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಭಾರತದಲ್ಲಿ ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆ. ಸಿರಿಧಾನ್ಯ ಕುರಿತು ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 36.1 ಇದೆ. ಇತರೆ ರಾಷ್ಟ್ರಗಳು ಶೇ. 30.6 ಇದ್ದರೆ, ನೈಗರ್ ಶೇ. 11.5, ಚೀನಾ ಶೇ. 8.1, ನೈಜೀರಿಯಾ ಶೇ. 7 ಹಾಗೂ ಮಾಲಿ ಶೇ. 6.6 ಪಾಲು ಹೊಂದಿವೆ ಎಂದರು.
ಸಿರಿಧಾನ್ಯ ಬಳಕೆಯಲ್ಲಿ ಹಿನ್ನಡೆನಗರೀಕರಣ, ಹೆಚ್ಚುತ್ತಿರುವ ತಲಾದಾಯದಿಂದಾಗಿ ಗ್ರಾಹಕರ ರುಚಿ ಮತ್ತು ಆದ್ಯತೆ ಬದಲಾಗಿವೆ. ಇದರಿಂದಾಗಿ ದೇಶದಲ್ಲಿ ಸಂಸ್ಕರಿಸಿದ ಮತ್ತು ಸೇವಿಸಲು ಸಿದ್ಧವಾದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ಸಿರಿಧಾನ್ಯಗಳ ಬಳಕೆಯಲ್ಲಿ ಹಿಂದಿದೆ. ಅಲ್ಲದೆ ಸಂಸ್ಕೃರಿಸಿದ ಆಹಾರ ಉತ್ಪನ್ನಗಳು ಹೆಚ್ಚಾಗಿ ಸೋಡಿಯಂ, ಸಕ್ಕರೆ, ಟ್ರಾನ್ಸ್ ಕೊಬ್ಬು ಹಾಗೂ ಕಾರ್ಸಿನೋಜನ್‌ಗಳನ್ನು ಹೊಂದಿವೆ. ಈ ಉತ್ಪನ್ನಗಳು ಕೇವಲ ನಗರದಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ಬೇಡಿಕೆ ಹೊಂದಿವೆ. ಇದರಿಂದ ತಾಯಂದಿರು ಮತ್ತು ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ, ಮಧುಮೇಹ ಮತ್ತು ಸ್ಥೂಲಕಾಯ ಸೇರಿ ನಾನಾ ಸಮಸ್ಯೆಗಳು ಹೆಚ್ಚುತ್ತಿದೆ ಎಂದು ವಿವರಿಸಿದರು.
ಸಿರಿಧಾನ್ಯಗಳ ಬಳಕೆಗೆ ಉತ್ತೇಜನಆರ್ಕ, ಊದಲು, ಸಾಮೆ, ಬಿಳಿ ಜೋಳ, ಕೂರಲು, ಸಜ್ಜೆ, ರಾಗಿ, ಬರಗು, ನವಣೆ ಸೇರಿ ಸಿರಿಧಾನ್ಯಗಳಲ್ಲಿ ಉತ್ತಮ ಪೌಷ್ಟಿಕಾಂಶಗಳು ಇವೆ. ಇವುಗಳ ಸಮತೋಲಿತ ಬಳಕೆಯಿಂದ ಅಪೌಷ್ಠಿಕ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಿರುವ ಸರ್ಕಾರ ಇದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆದು ಉಪಯೋಗಿಸಲು ಉತ್ತೇಜನ ನೀಡುತ್ತಿದೆ ಎಂದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಎಪಿಇಡಿಎ ವ್ಯವಸ್ಥಾಪಕ ನಿರ್ದೇಶಕ ಆರ್. ರವೀಂದ್ರ ಮಾತನಾಡಿ, ಪ್ರಸ್ತಕ ಸಾಲಿನ ಅಂತಾರಾಷ್ಟ್ರೀಯ ಸಿರಿಧಾನ್ಯ ಸಮ್ಮೇಳನದಲ್ಲಿ ಉದ್ದಿಮೆದಾರರು, ವಿಷಯತಜ್ಞರು, ಅಂತಾರಾಷ್ಟ್ರೀಯ ಖರೀದಿದಾರರು ಭಾಗವಹಿಸಲಿದ್ದಾರೆ. ಇದೇ ವೇಳೆ ಎಪಿಇಡಿಎ ಪ್ರಾದೇಶಿಕ ಕಚೇರಿಯಲ್ಲಿ ಸಿರಿಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಆರೋಗ್ಯ ಪೂರ್ಣ ಜೀವನಕ್ಕೆ ಸಿರಿಧಾನ್ಯಗಳ ಬಳಕೆ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.
1.50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್

ಕಬಾಬ್ ವಿಚಾರಕ್ಕೆ ಹಲ್ಲೆ: ಕೋಣನಕುಂಟೆಯ ಮಾಂಸಾಹಾರಿ ಹೋಟೆಲ್ ಮಾಲೀಕನಿಗೆ ಗಂಭೀರ ಗಾಯ

ಕಲಬುರಗಿಯಿಂದ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗೆ ಸನ್ಮಾನ ಮಾಡಿ ಕಾಲಿಗೆ ಬಿದ್ದ ನಟ ದುನಿಯಾ ವಿಜಯ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
