ಬೆಂಗಳೂರು:ಧಾರವಾಡದ ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಠಾನ (ಸಾಕಾರ) ಹಾಗೂ ಶಿವಮೊಗ್ಗದ ಮಿಂಚು ಶ್ರೀನಿವಾಸ ಕುಟುಂಬ ವರ್ಗ ಸ್ಥಾಪಿಸಿರುವ ‘ಮಿಂಚು ಶ್ರೀನಿವಾಸ ಪತ್ರಿಕಾ ಪ್ರಶಸ್ತಿ’ಗಳು ಪ್ರಕಟವಾಗಿವೆ.
ಹಿರಿಯ ಪತ್ರಕರ್ತೆ, ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕಿ ಡಾ.ಆರ್. ಪೂರ್ಣಿಮಾ ‘ಮಿಂಚು ಶ್ರೀನಿವಾಸ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಮಂಕುತಿಮ್ಮನ ಕಗ್ಗದ ಪ್ರಸಿದ್ಧ ವಾಚಕಿ, ‘ವಿಜಯವಾಣಿ’ ಅಂಕಣಕಾರ್ತಿ ಪುತ್ತೂರಿನ ಕವಿತಾ ಅಡೂರು ಅವರು ಸಿ.ಆರ್. ಭಟ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದತ್ತಾತ್ರೇಯ ಕುಲಕರ್ಣಿ ಶಿಕ್ಷಣ ಸಿರಿ ಪ್ರಶಸ್ತಿಗೆ ಧಾರವಾಡದ ಕವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರೀತಿ ಕಾಮತ್, ಎಂಎಲ್ ಜೋಶಿ ಉದಯೋನ್ಮುಖ ಕ್ರೀಡಾಪಟು ಪ್ರಶಸ್ತಿಗೆ ಮಲ್ಲಕಂಬ ಹಾಗೂ ಯೋಗಪಟು ಅನನ್ಯ ಹಿರೇಮಠ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಏ. 16ರಂದು ಸಂಜೆ 5.30ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಯಲಿದೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ, ಪತ್ರಕರ್ತೆ ರಶ್ಮಿ ಎಸ್., ಸಾಕಾರ ಸಂಸ್ಥೆ ಕಾರ್ಯಾಧ್ಯಕ್ಷೆ ಡಾ.ಸಿ.ಶುಭದಾ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಭಾಗವಹಿಸಲಿದ್ದಾರೆ.
ಗುತ್ತಿಗೆದಾರ ಸಂತೋಷ್ ಉಡುಪಿಗೆ ಬಂದಿದ್ದೇಕೆ?; ಉದ್ದೇಶ ಏನಿತ್ತು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 20 =
Remember me
