ಕಿರು ಚಿತ್ರಮಂದಿರ (ಮಿನಿ ಥಿಯೇಟರ್) ತೆರೆಯುವರಿಗೆ ಅನುಮತಿ ಕೊಡಲು ಸರ್ಕಾರ ಕರ್ನಾಟಕ ಸಿನಿಮಾ ಕಾಯ್ದೆ-2014ಕ್ಕೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ. 30 ದಿನದೊಳಗೆ ಆಕ್ಷೇಪ ವ್ಯಕ್ತವಾಗದಿದ್ದಲ್ಲಿ ಗೃಹ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಲಿದೆ.
4 ಸಾವಿರ ಅಡಿ ವಿಸ್ತೀರ್ಣದಲ್ಲಿ 199 ಆಸನ ಇದ್ದರೆ ‘ಮಿನಿ ಥಿಯೇಟರ್’ ಎಂದು ಪರಿಗಣಿಸಲಾಗುತ್ತದೆ. ವಾಣಿಜ್ಯ ಕೇಂದ್ರ, ಶಾಪಿಂಗ್ ಮಾಲ್, ಕನ್ವೆನ್ಷನ್ ಸೆಂಟರ್, ಬಸ್ ಮತ್ತು ರೈಲು ನಿಲ್ದಾಣ, ಬಹುಮಹಡಿ ಕಟ್ಟಡಗಳಲ್ಲಿ ಮಿನಿಥಿಯೇಟರ್ ತೆರೆಯಲು ಅವಕಾಶವಿದೆ. ಆಸಕ್ತ ಉದ್ಯಮಿಗಳು ಆನ್​ಲೈನ್​ನಲ್ಲಿ ಶುಲ್ಕ ಪಾವತಿಸಿ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕು.
30 ದಿನದೊಳಗಾಗಿ ಲೋಕೋಪಯೋಗಿ ಇಲಾಖೆ, ಸ್ಥಳೀಯ ಸಂಸ್ಥೆಗಳು ಅಥವಾ ನಗರ ಸ್ಥಳೀಯ ಸಂಸ್ಥೆ, ವಿದ್ಯುತ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಿರಪೇಕ್ಷಣಾ ಪ್ರಮಾಣಪತ್ರ ನೀಡಲಿದ್ದಾರೆ. ಎಲ್ಲ ವ್ಯವಸ್ಥೆ ನಿರ್ವಹಿಸಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಸಂಬಂಧಪಟ್ಟ ಇಲಾಖೆಯಿಂದ ಎನ್​ಒಸಿ ಬಂದ ಮೇಲೆ ಮಿನಿಥಿಯೇಟರ್​ಗೆ ಪರವಾನಗಿ ನೀಡಲಾಗುತ್ತದೆ. ಎನ್​ಒಸಿ ನೀಡಲು ಸಮಸ್ಯೆ ಇದ್ದರೆ ಲೋಪಗಳನ್ನು ಆನ್​ಲೈನ್​ನಲ್ಲೇ ಉಲ್ಲೇಖಿಸಿ ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಲಾಗುತ್ತದೆ ಎಂದು ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಮಾಹಿತಿ ಫಲಕ ಇರಬೇಕು:ಕೇಂದ್ರ ಸೆನ್ಸಾರ್ ಮಂಡಳಿಯಿಂದ ‘ಎ’ ಮತ್ತು ‘ಯು’ ಸರ್ಟಿಫಿಕೇಟ್ ಪಡೆದ ಸಿನಿಮಾ ಪ್ರಸಾರ ಮಾಡಬೇಕು. ತೆರೆ ಕಾಣುವ ಸಿನಿಮಾ ಯಾವ ಸರ್ಟಿಫಿಕೇಟ್​ಗೆ ಸೇರಿದೆ. ಅದನ್ನು ಮಕ್ಕಳು ಮತ್ತು ವಯಸ್ಕರು ನೋಡಬಹುದಾ? ಯಾವ ಸಮಯಕ್ಕೆ ಶುರುವಾಗುತ್ತದೆ? ಎಂಬ ಮಾಹಿತಿ ಫಲಕವನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶನ ಮಾಡಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ. ಸರ್ಕಾರದಿಂದ ಪಡೆದ ಪರವಾನಗಿಗೆ 1 ವರ್ಷ ಆಯಸ್ಸು ಇರುತ್ತದೆ. ನವೀಕರಣಕ್ಕಾಗಿ ಮತ್ತೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಹೊಸದಾಗಿ ಪರಿಶೀಲನೆ ನಡೆಸಿ ಎನ್​ಒಸಿ ನೀಡಿದ ಮೇಲೆ ಪರವಾನಗಿ ನವೀಕರಣ ಮಾಡಲಾಗುತ್ತದೆ.
ಹಳ್ಳಿಗೂ ಬರಲಿದೆ…
ಗ್ರಾಮೀಣ ಭಾಗದಲ್ಲೂ ಮಿನಿ ಥಿಯೇಟರ್ ತೆರೆಯಲು ಆಕ್ಷೇಪವಿಲ್ಲ. ಥಿಯೇಟರ್ ವಿಸ್ತೀರ್ಣದ ಶೇ.20 ಭಾಗ ವಾಹನ ನಿಲ್ಲಿಸಲು ಸ್ಥಳ ಬಿಡಬೇಕು. ಮಲ್ಟಿಪಲ್ ಸ್ಕ್ರೀನ್ ಚಿತ್ರಮಂದಿರದಿಂದ 2 ಕಿ.ಮೀ. ಅಂತರ ಕಾಯ್ದುಕೊಳ್ಳಬೇಕು. ಅಗ್ನಿಶಮನ ವ್ಯವಸ್ಥೆ, ನೀರಿನ ಟ್ಯಾಂಕ್ ಕಡ್ಡಾಯ. ಸಿಂಗಲ್ ಸ್ಕ್ರೀನ್ ಥಿಯೇಟರ್ ಅನ್ನು ಮಿನಿ ಡಿಜಿಟಲ್ ಥಿಯೇಟರ್ ಆಗಿ ಪರಿವರ್ತಿಸಿಕೊಳ್ಳಲು ಅವಕಾಶವಿದೆ. ಅಪಾರ್ಟ್​ವೆುಂಟ್, ಲೇಔಟ್​ನಲ್ಲಿ ತೆರೆಯಲು ಅನುಮತಿ ಇಲ್ಲ.
| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
