ಕೊಪ್ಪಳ:ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಜೋಡಿಯೊಂದರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದು ಎರಡೂ ಕುಟುಂಬಸ್ಥರ ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿತ್ತು. ಅಷ್ಟರಲ್ಲಿ ಎದುರಾದ ಜವರಾಯ ಐವರ ಪ್ರಾಣ ಹೊತ್ತೊಯ್ದು, ಶೋಕ ಸಾಗರಕ್ಕೆ ದೂಡಿದ್ದಾನೆ.
ಹೌದು, ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ವರನ ಮನೆಗೆ ವಧುವಿನ ಕಡೆಯವರು ಮಿನಿಬಸ್​ನಲ್ಲಿ ಶುಕ್ರವಾರ ಹೋಗುತ್ತಿದ್ದರು. ಕುಕನೂರು ತಾಲೂಕು ನಿಟ್ಟಾಲಿ ಕ್ರಾಸ್ ಬಳಿ ಮಿನಿಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ 10 ಜನರು ಗಾಯಗೊಂಡಿದ್ದಾರೆ. ಸತ್ತವರ ಪೈಕಿ ಐವರು ವಧುವಿನ ಕಡೆಯವರು!
ಅಪಘಾತದಲ್ಲಿ ಬೈಕ್ ಸವಾರ ಕುಕನೂರು ತಾಲೂಕು ಬೆಣಕಲ್ ಗ್ರಾಮದ ಸಂತೋಷ ವುಂಕಿ(25) ಮತ್ತು ಮಿನಿಬಸ್ ನಲ್ಲಿದ್ದ ರಂಗಪ್ಪ ನಾಗಣ್ಣವರ(80), ಭೀಮವ್ವ ಗೋಡಿ(70), ಶಿವಾನಂದಪ್ಪ(50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದರು.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಅಗಸನಕೊಪ್ಪ ಗ್ರಾಮದಿಂದ ಕೊಪ್ಪಳ ತಾಲೂಕು ಹಿರೇಸಿಂಧೋಗಿ ಗ್ರಾಮಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ವಧುವಿನ ಕಡೆಯವರನ್ನು ಕರೆದುಕೊಂಡು ಮಿನಿಬಸ್ ಬರುತ್ತಿತ್ತು. ನಿಟ್ಟಾಲಿ ಕಡೆಯಿಂದ ಬಂದ ಬೈಕ್​ಗೆ ಮಿನಿಬಸ್ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ತಗ್ಗಿಗೆ ಬಿದ್ದಿದೆ. ಗಾಯಾಳುಗಳನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ತಂಗಿ ಗಂಡನಿಂದಲೇ ನಡೆಯಿತು ಘೋರ ಕೃತ್ಯ, ರಕ್ತದ ಮಡುವಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟ ಅತ್ತಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − five =
Remember me
