ಬೀದರ್:ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ತವರು ಜಿಲ್ಲೆ ಬೀದರ್​ನಲ್ಲಿ ಇಂದು ಬೆಳಗ್ಗೆ 15 ರಿಂದ 20 ಜರ್ಸಿ ಆಕಳುಗಳ ಶವ ಪತ್ತೆಯಾಗಿದ್ದು, ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ. ಬೀದರ್ ತಾಲೂಕಿನ ಸಿಂದೋಲ್ ಗ್ರಾಮದ ಸೇತುವೆಯೊಂದರ ಕೆಳಗೆ ಈ ಶವಗಳು ಪತ್ತೆಯಾಗಿವೆ.
ಆಕಳುಗಳಿಗೆ ಬಹುತೇಕ ವಿಷಪ್ರಾಶನ ಮಾಡಿರಬಹುದು. ಅದಿಲ್ಲದೇ ಹೋದರೆ, ನೆರೆ ರಾಜ್ಯಕ್ಕೆ ಗೋವುಗಳನ್ನು ಸಾಗಿಸುವಾಗ ಮೃತಪಟ್ಟ ಗೋವುಗಳನ್ನು ಇಲ್ಲಿ ಎಸೆದು ಹೋಗಿರಬಹುದು. ಅದೂ ಅಲ್ಲದೇ ಹೋದರೆ ತೆಲಂಗಾಣದಿಂದ ದುಷ್ಕರ್ಮಿಗಳು ಈ ಗೋವುಗಳ ಶವವನ್ನು ಇಲ್ಲಿ ತಂದು ಎಸೆದು ಹೋಗಿದ್ದಿರಲೂ ಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಿಎಂ ಭೇಟಿ ಸಾಧ್ಯವಾಗುತ್ತಿಲ್ಲ, ವಿಭಾಗವಾರು ಸಭೆ ವಿಫಲವಾಗಿದೆ – ಶಾಸಕ ಯತ್ನಾಳ್​ ಮತ್ತೆ ಅಸಮಾಧಾನ
ಹಳ್ಳದಲ್ಲಿ ಹಸುಗಳ ಶವ ಪತ್ತೆಯಾದ ಕಾರಣ ಆ ನೀರು ಬಳಸುವ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ. ರೋಗ ಭೀತಿಯೂ ಹರಡಿದೆ. ಸ್ಥಳಕ್ಕೆ ಮನ್ನಳ್ಳಿ ಪೊಲೀಸರು ಭೇಟಿ ನೀಡಿದ್ದು, ಗೋವುಗಳ ಶವ ವಿಲೇವಾರಿಗೆ ಕ್ರಮ ತೆಗೆದುಕೊಂಡು, ತನಿಖೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಗ್ರಾ.ಪಂ​. ಚುನಾವಣೇಲೂ ನೋಟಾ ಜಾರಿಗೆ ತನ್ನಿ- ಮತಪತ್ರದ ಬದಲೊಂದು ಮನವಿಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nine =
Remember me
