|ರುದ್ರಣ್ಣ ಹರ್ತಿಕೋಟೆಬೆಂಗಳೂರು
ವಿವಿಧ ಖಾಸಗಿ ವಲಯಗಳಲ್ಲಿನ ಕಾರ್ವಿುಕರ ಕನಿಷ್ಠ ವೇತನದ ವಿಚಾರದಲ್ಲಿ ರಾಜ್ಯ ಸರ್ಕಾರ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಒಂದೆಡೆ ಕಾರ್ವಿುಕರ ಒತ್ತಡ ಇದ್ದರೆ, ಇನ್ನೊಂದೆಡೆ ಉದ್ದಿಮೆದಾರರ ವಿರೋಧದಿಂದ ಸರ್ಕಾರ ಇಕ್ಕಟ್ಟಿನಲ್ಲಿದೆ. ಕರೊನಾ ಸಂಕಷ್ಟದಿಂದಾಗಿ ಒಂದು ವರ್ಷದ ಹಿಂದೆ ಆಗಬೇಕಾಗಿದ್ದ ಕನಿಷ್ಠ ವೇತನ ಪರಿಷ್ಕರಣೆ ಆಗಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗಬೇಕೆಂಬ ನಿಯಮ ಒಂದು ಅವಧಿಗೆ ಬ್ರೇಕ್ ಆಗಿದೆ. ಆದರೆ, ಹಣದುಬ್ಬರ ಹೆಚ್ಚಾಗಿ ಕಾರ್ವಿುಕರ ಬದುಕು ದುಸ್ತರ ವಾಗಿರುವುದರಿಂದ ಈಗ ಕನಿಷ್ಠ ವೇತನ ಪರಿಷ್ಕರಣೆ ಅನಿವಾರ್ಯವಾಗಿದೆ.
ರಾಜ್ಯ ಸರ್ಕಾರದ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಸಭೆ ಇತ್ತೀಚೆಗೆ ನಡೆದಿದ್ದು, ಕಾರ್ವಿುಕ ಸಂಘಟನೆಗಳು ಹಾಗೂ ಉದ್ಯಮ ಸಂಸ್ಥೆಗಳು ತಂತಮ್ಮ ಸಲಹೆಗಳನ್ನು ಸಭೆಯ ಮುಂದಿಟ್ಟಿವೆ. ಎರಡು ಕಡೆಯಿಂದಲೂ ವೈಜ್ಞಾನಿಕ ಅಧ್ಯಯನ ಮಾಡಿಯೇ ಪರಿಷ್ಕರಣೆಯ ಪ್ರಮಾಣದ ಬಗ್ಗೆ ವಿವರಿಸಿವೆ. ಮಂಡಳಿ ಈಗ ಸರ್ಕಾರಕ್ಕೆ ಶಿಫಾರಸು ಕಳುಹಿಸಬೇಕಾಗಿದೆ.
ಈ ಸಭೆಯ ನಡಾವಳಿಯನ್ನು ಸರ್ಕಾರಕ್ಕೆ ಕಳುಹಿಸುವಾಗ ಕಾರ್ವಿುಕ ಸಂಘಟನೆಗಳು ವೈಜ್ಞಾನಿಕವಾಗಿ ನೀಡಿರುವ ಮಾಹಿತಿಯನ್ನು ಕಡ್ಡಾಯವಾಗಿ ಸೇರಿಸಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ. ಇದರಿಂದಾಗಿ ಇಲಾಖೆಗೆ ಒಂದು ರೀತಿಯಲ್ಲಿ ಸಂಕಷ್ಟ ಎದುರಾಗಿದೆ. ಸಭೆಯ ನಡಾವಳಿ ಸರ್ಕಾರಕ್ಕೆ ಹೋದ ನಂತರ ಆಕ್ಷೇಪಣೆಗಳನ್ನು ಕರೆದು ಅಂತಿಮ ಅಧಿಸೂಚನೆ ಪ್ರಕಟವಾಗಬೇಕಾಗುತ್ತದೆ. ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕನಿಷ್ಠ ವೇತನ ಪರಿಷ್ಕರಣೆ ಮತ್ತಷ್ಟು ತಡವಾಗಬಹುದು.
ಸರ್ಕಾರಕ್ಕೆ ಆತಂಕ ಏಕೆ?:ಕರೊನಾದಿಂದ ಉದ್ಯಮಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಿ ಒಂದು ವರ್ಷಕ್ಕೂ ಹೆಚ್ಚಿನ ಬಾಕಿ ಕೊಡುವುದು ಆರ್ಥಿಕವಾಗಿ ಉದ್ಯಮಗಳ ಮೇಲೆ ಹೊರೆ ಆಗುತ್ತದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಕೆಂಪುಹಾಸು ಹಾಕಿ ರಾಜ್ಯದ ಉದ್ದಿಮೆಗಳನ್ನು ಸೆಳೆಯಲು ಸಿದ್ಧವಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಕಾರ್ವಿುಕರು ಕೇಳಿದಷ್ಟು ಹೆಚ್ಚಳ ಮಾಡಿದರೆ ಉದ್ದಿಮೆಗಳು ನ್ಯಾಯಾಲಯದ ಮೆಟ್ಟಿಲು ಹತ್ತುತ್ತವೆ, ಮಾಡದಿದ್ದರೆ ಕಾರ್ವಿುಕರು ಕಾನೂನು ಹೋರಾಟ ಮಾಡುತ್ತಾರೆ. ಆದ್ದರಿಂದಲೇ ಸರ್ಕಾರದ ನಿರ್ಧಾರ ಕುತೂಹಲ ಮೂಡಿಸಿದೆ.
ಸರ್ಕಾರ ಯಾವುದೇ ನೆಪ ಹೇಳದೆ ಕನಿಷ್ಠ ವೇತನವನ್ನು 32 ಸಾವಿರ ರೂ.ಗೆ ನಿಗದಿ ಮಾಡಬೇಕು. ಇಂದಿನ ಬೆಲೆ ಏರಿಕೆಯಲ್ಲಿ ಕಾರ್ವಿುಕರು ಬದುಕುವುದೇ ಕಷ್ಟವಾಗಿದೆ. ಹಳೆಯ ಬಾಕಿಯನ್ನೂ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ. ಗಾರ್ವೆಂಟ್ಸ್ ಕಂಪನಿಗಳು ತುಟ್ಟಿಭತ್ಯೆಯನ್ನು ನೀಡಿರಲಿಲ್ಲ. ನ್ಯಾಯಾಲಯಕ್ಕೆ ಹೋಗಿ ಪಡೆದಿದ್ದೇವೆ.
|ಎಲ್. ಕಾಳಪ್ಪಎಚ್​ಎಂಕೆಪಿ ಪ್ರಧಾನ ಕಾರ್ಯದರ್ಶಿ
ಸರ್ಕಾರದಿಂದ ಉದ್ದೇಶಿತ ಹೆಚ್ಚಳ:ಸರ್ಕಾರ ಎರಡರಿಂದ ಮೂರು ಸಾವಿರ ರೂ.ಗಳಷ್ಟು ವೇತನ ಹೆಚ್ಚಳಕ್ಕೆ ಕರಡು ಸಿದ್ಧಪಡಿಸಿತ್ತು. ಉದಾಹರಣೆಗೆ ಸೆಕ್ಯೂರಿಟಿ ಏಜೆನ್ಸಿ ನೌಕರರಿಗೆ ಈಗ ನೀಡುವ 12 ಸಾವಿರ ರೂ.ಗಳನ್ನು 15,769 ರೂ.ಗಳಿಗೆ ಹೆಚ್ಚಿಸುವುದು ಕರಡು ಪ್ರತಿಯಲ್ಲಿತ್ತು. ಆದರೆ, ಇದನ್ನೊಪ್ಪದ ಕಾರ್ವಿುಕರು ತಮ್ಮದೇ ವಾದ ಮುಂದಿಟ್ಟಿದ್ದಾರೆ.
ಮಂಡಳಿ ಸಭೆಯ ನಡಾವಳಿ ಇನ್ನಷ್ಟೇ ಬರಬೇಕಾಗಿದೆ. ಕಾರ್ವಿುಕರು ಮತ್ತು ಉದ್ದಿಮೆದಾರರ ಹಿತ ಗಮನದಲ್ಲಿಟ್ಟುಕೊಂಡು ನ್ಯಾಯಸಮ್ಮತ ನಿರ್ಧಾರ ಮಾಡುತ್ತೇವೆ. ನೆರೆಯ ರಾಜ್ಯಗಳಲ್ಲಿ ಕನಿಷ್ಠ ವೇತನ ಎಷ್ಟಿದೆ ಎಂಬುದರ ವರದಿ ತರಿಸುತ್ತೇವೆ. ಕಳೆದ ಬಾರಿ ಎಷ್ಟು ಏರಿಕೆ ಮಾಡಲಾಗಿದೆ ಎಂಬುದನ್ನು ಸಹ ಪರಿಶೀಲನೆ ಮಾಡಿ ನಿರ್ಧರಿಸುತ್ತೇವೆ.
|ಅರಬೈಲ್ ಶಿವರಾಮ ಹೆಬ್ಬಾರ್ಕಾರ್ವಿುಕ ಸಚಿವ
ಎಷ್ಟು ಏರಿಕೆಗೆ ಒತ್ತಡ?:ಈಗ ಕನಿಷ್ಠ ವೇತನ 12 ರಿಂದ 16 ಸಾವಿರ ರೂ.ಗಳ ತನಕ ಇದೆ. ಇದನ್ನು ಕನಿಷ್ಠ 32 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕು. 2021ರ ಏಪ್ರಿಲ್​ನಿಂದಲೇ ಅನ್ವಯಿಸಬೇಕೆಂಬುದು ಕಾರ್ವಿುಕ ಸಂಘಟನೆಗಳ ವಾದವಾಗಿದೆ. ಆದರೆ, ಉದ್ಯಮ ಸಂಸ್ಥೆಗಳು 22 ರಿಂದ 24 ಸಾವಿರ ರೂ.ಗಳನ್ನು ನೀಡಲು ಸಾಧ್ಯ ಎಂದು ಪ್ರತಿವಾದ ಮಂಡಿಸಿವೆ ಎಂದು ಗೊತ್ತಾಗಿದೆ. ಒಟ್ಟು 32 ರೀತಿಯ ಉದ್ಯೋಗಗಳನ್ನು ಗುರುತಿಸಲಾಗಿದೆ. ಅಂತೆಯೇ, ಅಷ್ಟೇ ರೀತಿಯ ಕನಿಷ್ಠ ವೇತನಗಳಿವೆ. ಸಮಿತಿ ಈಗ 9 ಉದ್ಯೋಗಗಳ ವೇತನ ಪರಿಷ್ಕರಣೆಯ ಬಗ್ಗೆ ಮಾತ್ರ ಚರ್ಚೆ ನಡೆಸಿದೆ. ಬಹುತೇಕ ಕನಿಷ್ಠ ವೇತನ ಒಂದೇ ಪ್ರಮಾಣದಲ್ಲಿದೆ. ಕುಟುಂಬವೊಂದು ಸರಳ ಜೀವನ ನಡೆಸಲು ತಿಂಗಳಿಗೆ 31,566 ರೂ.ಗಳ ಅಗತ್ಯವಿದೆ ಎಂಬುದನ್ನು ಅಧ್ಯಯನ ಮಾಡಿ ಸಂಘಟನೆಗಳು ವರದಿ ನೀಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
