ವಿಜಯನಗರ:ಸಚಿವ ಆನಂದ್ ಸಿಂಗ್ ಕುಟುಂಬಸ್ಥರ ವಿರುದ್ಧ ಭೂಮಿ ಪರಾಭಾರೆ ಮಾಡಿರುವ ಆರೋಪ ಮಾಡಲಾಗಿದೆ. ಅವರು ಅರಣ್ಯ ಸಚಿವರಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಪಾದನೆ ಹೊರಿಸಲಾಗಿದೆ.
ಸಚಿವರ ಪುತ್ರ, ಅಳಿಯ ಸೇರಿದಂತೆ 9 ಜನರ ಹೆಸರಲ್ಲಿ ಇನಾಮ್ ಆಸ್ತಿ ರಿಜಿಸ್ಟರ್ ಆಗಿದ್ದು ಬೇನಾಮಿ ಆಸ್ತಿ ಗಳಿಕೆಯಲ್ಲಿ ಸಚಿವರ ಕುಟುಂಬಸ್ಥರೇ ಮೂವರು ಇದ್ದಾರೆ ಎನ್ನಲಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ಬಳಿಯ ಪೈಮಾಸಿ ನಂಬರ್ 4 ರಲ್ಲಿ 380 ಎಕೆರೆ ಇನಾಮ್ ಜಮೀನಿದೆ. ಅದರಲ್ಲಿ ಸಚಿವರ ಪ್ರಭಾವ ಬಳಸಿ 180 ಎಕರೆ ಜಮೀನು ಒಂಭತ್ತು ಜನರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎನ್ನಲಾಗಿದೆ. 1982 ರಲ್ಲಿ ರಾಜರತ್ನಂ ಶ್ರೀನಿವಾಸ್ ರಾಜಮನೆತನದವರ ಹೆಸರಲ್ಲಿ 74 ಎಕರೆ ಗ್ರ್ಯಾಂಟ್ ಆಗಿತ್ತು. ಆದರೆ ರಾಜಮನೆತನದ ಆಸ್ತಿ 380 ನಮಗೆ ಬೇಕು ಅಂದಾಗ ಕೋರ್ಟ್ ತಡೆಹಿಡಿದಿತ್ತು.
ಇದನ್ನೂ ಓದಿ:ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು; ‘ಆನಂದ’ದಲ್ಲಿ ತಲೆದೂಗಿದ ಸಚಿವ…
ಇನಾಮ್ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಕಾರಣಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ. ಆದರೂ 36 ಎಕರೆ ಜಮೀನು ಕೂಡಾ ಆನಂದ್​ ಸಿಂಗ್​ ಕುಟುಂಬಸ್ಥರ ಹೆಸರಲ್ಲಿ ರಿಜಿಸ್ಟರ್ ಆಗಿದೆ. ಈ ಅಕ್ರಮದಲ್ಲಿ ಗ್ರಾಮ ಲೆಕ್ಕಾದಧಿಕಾರಿಗಳು, ಕಂದಾಯ ನೀರಿಕ್ಷಕರು, ಅರಣ್ಯಾಧಿಕಾರಿಗಳು ಭಾಗಿ ಆಗಿದ್ದಾರೆ ಎನ್ನಲಾಗಿದೆ. 180 ಎಕರೆ ಸರ್ಕಾರಿ ಜಮೀನು ಸರ್ಕಾರಕ್ಕೆ ಉಳಿಯಬೇಕು ಅಂತ ಒತ್ತಾಯ ಮಾಡಲಾಗಿದ್ದು ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
1. ಸಿದ್ದಾರ್ಥ ಸಿಂಗ್ ಹೆಸರಲ್ಲಿ 13 ಎಕರೆ ನೋಂದಣಿ2. ಧರ್ಮೇಂದ್ರ ಸಿಂಗ್ ಹೆಸರಲ್ಲಿ 22.19 ಎಕರೆ ನೋಂದಣಿ3. ಅಬ್ದುಲ್ ರಹೀಮ್ 22.75 ಎಕರೆ ಜಮೀನು ನೋಂದಣಿ4. ಸಿ. ಕುಮಾರಸ್ವಾಮಿ ಶೆಟ್ಟಿ 22.75 ಎಕರೆ ನೋಂದಣಿ5. ಪಿ‌. ನಾಗರಾಜ್ ಹೆಸರಲ್ಲಿ 22.75 ಎಕರೆ ನೋಂದಣಿ6. ಎನ್.ಶ್ರೀನಿವಾಸ್ 14.76 ಎಕರೆ ನೋಂದಣಿ7. ಪಿ.ಬಸವನಗೌಡ ಹೆಸರಲ್ಲಿ 16.96 ಎಕರೆ ಜಮೀನು ನೋಂದಣಿ8. ಸೂರ್ಯತೇಜ್ ವಿ. ಹೆಸರಲ್ಲಿ 15.24 ಎಕರೆ ನೋಂದಣಿ.9. ಮತ್ತೊಬ್ಬರ ಹೆಸರಲ್ಲಿ 13 ಹಾಗೂ 16 ಎಕರೆ ನೋಂದಣಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
