ಬೆಂಗಳೂರು:ನಿನ್ನೆಯಷ್ಟೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈಗ ಈ ಕಾರ್ಯಕ್ರಮದ ವಿಷಯವಾಗಿ ರಾಜ್ಯದಲ್ಲಿ ವಿವಾದದ ಅಲೆಗಳೇ ಏಳುತ್ತಿವೆ. ಮಾಜಿ ಪ್ರಧಾನಿ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಹಿಂದಿನ ದಿನ ಆಹ್ವಾನಿಸಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಜೆಡಿಎಸ್​ ಆರೋಪಿಸಿದೆ.
ಈ ಬಗ್ಗೆ ಸಚಿವ ಅಶ್ವಥ್​ ನಾರಾಯಣ ಪ್ರತಿಕ್ರಿಯೆ ನೀಡಿದ್ದು ದೇವೇಗೌಡರನ್ನು ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದಿದ್ದಾರೆ.
‘ನಾನು ಅಕ್ಟೋಬರ್​ನಲ್ಲಿ ದೇವೇಗೌಡರನ್ನು ಭೇಟಿಯಾಗಿ ಮೃತ್ತಿಕೆ ಸಂಗ್ರಹಕ್ಕೆ ಆಹ್ವಾನ ನೀಡಿದ್ದೆ. ಅದೇ ವೇಳೆ ಪ್ರತಿಮೆ ಅನಾವರಣಕ್ಕೂ ಆಹ್ವಾನಿಸಿದ್ದೆ. ಆದರೆ ಅದು ಅನೌಪಚಾರಿಕ ಆಹ್ವಾನ. ಅದಾದ ಬಳಿಕ ಪ್ರಧಾನಮಂತ್ರಿ ಬಂದು ಪ್ರತಿಮೆ ಅನಾವರಣ ಮಾಡುವುದು ಎಂದು ನಿಗದಿಯಾಗಿತ್ತು. ಪ್ರಧಾನಮಂತ್ರಿ ಬರುವ ಕಾರ್ಯಕ್ರಮ ಆದ್ದರಿಂದ ಗಣ್ಯರನ್ನು ಮುಖ್ಯಮಂತ್ರಿಯೇ ಕರೆಯುತ್ತಾರೆ. ಆದರೆ ಸಿಎಂ‌, ಕಾರ್ಯಕ್ರಮದ ಒತ್ತಡದಿಂದಾಗಿ ಹಿಂದಿನ ದಿನ ದೂರವಾಣಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ’ ಎಂದು ಅಶ್ವಥ್​ ನಾರಾಯಣ ಹೇಳಿದರು.
ಒಂದು ವೇಳೆ ಪಾಕ್​ ಟಿ20 ವಿಶ್ವಕಪ್​​ ಗೆದ್ದರೆ… ಬಾಬರ್​ ಅಜಾಮ್​ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಗವಾಸ್ಕರ್​
ವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
