ಬೆಂಗಳೂರು:ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಭಯವಾಗಿದ್ದೇಕೆ? ಸಚಿವರಾಗಿ ಭಯ-ಭೀತಿಯಿಲ್ಲದೆ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿದವರು. ಈಗ ಆ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಹರಾ?
ಹೀಗೆಂದು ಪ್ರತಿಪಕ್ಷ ಕಾಂಗ್ರೆಸ್ ಕಾಲೆಳೆಯುವ ಪ್ರಶ್ನೆಗಳನ್ನೇ ವಿಧಾನ ಪರಿಷತ್‌ನಲ್ಲಿ ಮುಂದಿಟ್ಟಿತು. ಅಶ್ಲೀಲ ಸಿಡಿ ಪ್ರಕರಣವೊಂದು ಹೊರಬಿದ್ದ ಮೇಲೆ ಬೈರತಿ ಸೇರಿದಂತೆ 6 ಸಚಿವರು ಕೋರ್ಟ್‌ಗೆ ಹೋಗಿ ನಿರ್ಬಂಧಕಾಜ್ಞೆ ತಂದಿದ್ದರ ಔಚಿತ್ಯವೇನು? ಎಂದು ಪ್ರಶ್ನಿಸಿತು.ಇದನ್ನೂ ಓದಿರಿಧರ್ಮಸ್ಥಳ ವ್ಯಾಪ್ತಿಯಲ್ಲಿ ಮರ ಕಡಿಯುವಾಗ ಅವಘಡ: ಸ್ಥಳದಲ್ಲೇ ಮೂವರ ಸಾವು
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ನ ಪ್ರಸನ್ನಕುಮಾರ್ ಈ ವಿಷಯ ಪ್ರಸ್ತಾಪಿಸಿ, ಭಯ ಬಿದ್ದವರು ಸಚಿವ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಹರಲ್ಲ. ಹೀಗಾಗಿ ನಗರಾಭಿವೃದ್ಧಿ ಸಚಿವರು ನೀಡಿದ ಉತ್ತರ ಬಹಿಷ್ಕರಿಸುವುದಾಗಿ ಹೇಳಿದರು.
ಮಧ್ಯೆ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಶ್ನೆ ಕೇಳಲು ಇಷ್ಟವಿಲ್ಲದಿದ್ದರೆ ಬಿಡಿ. ಬೇರೆ ವಿಷಯ ಪ್ರಸ್ತಾಪಿಸಬೇಡಿ. ಆ ಮಾತನ್ನು ಕಡತದಿಂದ ತೆಗೆದು ಹಾಕಲು ಸೂಚಿಸುವೆ ಎಂದಾಗ ಕಾಂಗ್ರೆಸ್‌ನ ಉಳಿದ ಸದಸ್ಯರು ತಗಾದೆ ತೆಗೆದರು.
ಇದು ಭಾಷಣದ ವೇದಿಕೆಯಲ್ಲ. ಸದನದ ಪ್ರಶ್ನೋತ್ತರ ಕಲಾಪವೆಂದು ಸಭಾನಾಯಕ ಕೋಟ ಶ್ರೀನಿವಾಸ ತಿವಿದರು. ಈ ಮಾತಿಗೆ ಆಡಳಿತ ಪಕ್ಷದ ಸಾಥ್ ನೀಡಿದರಲ್ಲದೆ, ಒಟ್ಟಿಗೆ ಎದ್ದುನಿಂತು ಕಾಂಗ್ರೆಸ್ ವಿರುದ್ಧ ಜೋರು ಮಾಡಿದರು.ಇದನ್ನೂ ಓದಿರಿಬಿಜೆಪಿ ಕಚೇರಿಯಲ್ಲಿ ಸಿಎಂ ಯಡಿಯೂರಪ್ಪ ತನ್ನ ಮಗನನ್ನು ‘ಅಣ್ಣ’ ಎಂದಿದ್ದೇಕೆ?
ಗಟ್ಟಿ ಧ್ವನಿಯಲ್ಲಿ ಆಡಳಿತ ಪಕ್ಷದ ಸದಸ್ಯರನ್ನು ಸುಮ್ಮನಾಗಿಸಿದ ಸಭಾಪತಿ, ಕಾಂಗ್ರೆಸ್‌ನವರ ನಿಲುವು ತಳ್ಳಿ ಹಾಕಿದರು. ಕಡತದಿಂದ ತೆಗೆದು ಹಾಕಲು ಸೂಚಿಸುವ ತಮ್ಮ ನಿರ್ಧಾರವನ್ನ ಸಮರ್ಥಿಸಿಕೊಂಡರು.
ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯ ಬಸವರಾಜ ಪಾಟೀಲ್ ಇಟಗಿ ಕೇಳಿದ ಪ್ರಶ್ನೆಯೂ ನಗರಾಭಿವೃದ್ಧಿ ಸಚಿವರಿಗೆ ಸಂಬಂಧಿಸಿದ್ದಾಗಿತ್ತು. ಅವರೂ  ಬಹಿಷ್ಕರಿಸುತ್ತೇನೆಂದು ತಿಳಿಸಿ, ಕಾರಣ ವಿವರಿಸಲು ಮುಂದಾದಾಗ ಸಭಾಪತಿ ತಡೆಯೊಡ್ಡಿದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸಹ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಸಿ.ಎಂ.ಇಬ್ರಾಹಿಂ, ಎಂ.ನಾರಾಯಣಸ್ವಾಮಿ ಇನ್ನಿತರರು ಮಾತನಾಡಲು ಬಿಡಲ್ಲ. ಹೀಗೆ ಮಾತನಾಡಬೇಕು ಎನ್ನುವುದು ಸರಿಯಲ್ಲವೆಂದು ವಾದಿಸಿದರು. ಒಂದು ಹಂತದಲ್ಲಿ ಇಟಗಿ, ನಾರಾಯಣಸ್ವಾಮಿ ಸಭಾಪತಿ ಪೀಠದ ಮುಂದೆ ಧರಣಿಗೆ ಮುಂದಾದಾಗ ಎಸ್.ಆರ್.ಪಾಟೀಲ್ ತಡೆದು ಸ್ವಸ್ಥಾನಕ್ಕೆ ಕಳುಹಿಸಿದರು.
ಪ್ರಶ್ನೆ ಕೇಳುವುದಿಲ್ಲವೆಂದ ಸದಸ್ಯರಿಗೆ ಕೇಳಲೇಬೇಕೆಂದು ಒತ್ತಡ ಹೇರಲಾಗದು. ಸಂಬಂಧಪಡದ ವಿಷಯ ಪ್ರಸ್ತಾಪಕ್ಕೆ ಅವಕಾಶವಿಲ್ಲ. ಕಡತಕ್ಕೆ ಹೋಗುವುದಿಲ್ಲವೆಂದು ಸಭಾಪತಿ ಪುನರುಚ್ಚರಿಸಿ ಬೇರೆ ಪ್ರಶ್ನೆಯತ್ತ ಕಲಾಪವನ್ನು ಕೊಂಡೊಯ್ದರು.
ಅನುಮತಿ ಕೊಡಿ ನಾವೇ ಹುಲಿಯನ್ನು ಕೊಂದು ಹಾಕ್ತೀವಿ ಎಂದ ಶಾಸಕರು
ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?
ಧರ್ಮಸ್ಥಳ ವ್ಯಾಪ್ತಿಯಲ್ಲಿ ಮರ ಕಡಿಯುವಾಗ ಅವಘಡ: ಸ್ಥಳದಲ್ಲೇ ಮೂವರ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 9 =
Remember me
