ಬೆಂಗಳೂರು:ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಸಂಶಯದ ಸುಳಿಯಲ್ಲಿ ಮುಳುಗುವ ಮುನ್ನ ವಾಸ್ತವಾಂಶ ಏನೆಂಬುದು ಸ್ಪಷ್ಟಪಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಇರುವವರು ಕೊಲಂಬೊಗೆ ಹೋಗುವುದು, ವ್ಯವಹಾರ ಮಾಡುವುದು ತಪ್ಪಲ್ಲ. ಆದರೆ, ಕೊಲಂಬೊಗೆ ಹೋಗಿದ್ದರ ಕಾರಣವೇನು ಎಂಬುದು ಪಾಸ್ ಪೋರ್ಟ್ ತೋರಿಸಲಿ. ಕ್ಯಾಸಿನೋ ಹೂಡಿಕೆ ಮಾಡಿದ್ದರೆ, ಲೋಕಾಯುಕ್ತ ಹಾಗೂ ಚುನಾವಣೆ ಆಯೋಗಕ್ಕೆ ಸಲ್ಲಿಸಿದ‌ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆಯೆ ? ಗೊತ್ತಿಲ್ಲ.
ಇದನ್ನೂ ಓದಿ:ಹಿಂದಿ ದಿವಸ್​ ಆಚರಿಸೋದಾದ್ರೆ, ದೇಶಾದ್ಯಂತ ಕನ್ನಡ ದಿನವನ್ನೂ ಆಚರಿಸಲಿ – ಎಚ್​ಡಿಕೆ ಸರಣಿ ಟ್ವೀಟ್​
ಕಳ್ಳನ ಜತೆಗೆ ಸಂಬಂಧ ….: ಕಳ್ಳನ ಜತೆಗೆ ಫೋಟೋ ತೆಗೆಯಿಸಿಕೊಂಡ ತಕ್ಷಣ ಕಳ್ಳನಾಗುವುದಿಲ್ಲ ನಿಜ. ಆದರೆ, ಕಳ್ಳನ ಜತೆ ಸಂಬಂಧ ಇಟ್ಟುಕೊಳ್ಳುವುದು ಡ್ಯಾಶ್ ಡ್ಯಾಶ್ ಆಗುತ್ತದೆ. ಫಾಝಿಲ್ ಅಹ್ಮದ್ ಜತೆಗಿರುವ ಫೋಟೋದಲ್ಲಿ ಸಿದ್ದರಾಮಯ್ಯ, ಜಮೀರ್ ಜತೆಗೆ ಪುಟ್ಟ ಮಗವಿದೆ ( ತಮ್ಮ ಮೊಬೈಲ್ ನಲ್ಲಿರುವ ಫೋಟೋ ತೋರಿಸಿ) ಫೋಟೋದಲ್ಲಿ ಇರುವವರ ಮುಖಭಾವ ಗಮನಿಸಿದರೆ, ಬಹಳ ಹಳೆಯ ಸಂಬಂಧ ಹಾಗೂ ಆತ್ಮೀಯತೆ ಇದೆ ಎನ್ನುವುದು ವೇದ್ಯವಾಗುತ್ತದೆ.
ಇದನ್ನೂ ಓದಿ:ಯೋಗೀಶ್ ಗೌಡ ಕೊಲೆ ಕೇಸ್​; ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್
ಡ್ರಗ್ಸ್ ಪೆಡ್ಲರ್ ಜತೆಗೆ ಜಮೀರ್ ನಂಟಿದೆ, ಈ ದಂಧೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸುವುದಿಲ್ಲ. ತನಿಖೆ ನಡೆಸುತ್ತಿರುವ ತಂಡ ಸಂಗ್ರಹಿಸಿದ ಮಾಹಿತಿ ಆಧರಿಸಿ ಕ್ರಮಕೈಗೊಳ್ಳುತ್ತದೆ ಎಂದು ಸಿ.ಟಿ.ರವಿ‌ ಹೇಳಿದರು
9 ಲಕ್ಷ ಕೋಟಿ ರೂಪಾಯಿ ದಾಟಿತು ಟಿಸಿಎಸ್ ಮಾರುಕಟ್ಟೆ ಮೌಲ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 6 =
Remember me
