ಮಂಡ್ಯ:ಸರ್ಕಾರ ಪತನವಾಗುವ ಆತಂಕ ವ್ಯಕ್ತಪಡಿಸಿದ ಶಾಸಕನಿಗೆ ಬಹಿರಂಗ ವೇದಿಕೆಯಲ್ಲೇ ಸಚಿವ ಚಲುವರಾಯಸ್ವಾಮಿ ಅವರು ಆತ್ಮಸ್ಥೈರ್ಯ ತುಂಬಿದ ಪ್ರಸಂಗ ನಡೆದಿದೆ.
ಮಂಡ್ಯದಲ್ಲಿ ನಿನ್ನೆ (ಆ.5) ನಡೆದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಾವು ಇರ್ತೀವೋ ಇಲ್ವೋ? ಎನ್ನುವ ಮೂಲಕ ಸರ್ಕಾರ ಪತನದ ಭೀತಿಯನ್ನು ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಟೇಕಾಫ್ ಆಗದ ವಿಶೇಷ ಅಭಿವೃದ್ಧಿ ಯೋಜನೆ: ಮೂರು ತಿಂಗಳ ಆರ್ಥಿಕ ಪ್ರಗತಿಯಲ್ಲಿ ಸಾಧನೆ ಶೂನ್ಯ
ಈ ವೇಳೆ ಶಾಸಕನಿಗೆ ಧೈರ್ಯ ತುಂಬಿದ ಚಲುವರಾಯಸ್ವಾಮಿ, ನಮ್ಮ ಸರ್ಕಾರ ಐದು ವರ್ಷವೂ ಇರುತ್ತೆ ಎಂದರು. ನಾವು ಐದು ಭರವಸೆಯನ್ನು ಈಡೇರಿಸಿ ಸುಭದ್ರ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದರು.
ನಾವು ಇರ್ತೀವೋ ಇಲ್ವೋ ಅಂತ ರವಿ ಪದೇ ಪದೇ ಹೇಳ್ತಾ ಇದ್ದ. ಅವನಿಗೆ ಯಾಕೆ ಆ ರೀತಿ ಮಾತು ಬರುತ್ತಿದೆ ಎಂದು ನನಗೆ ಗೊತ್ತಿಲ್ಲ. ಇಷ್ಟೆಲ್ಲ ಕಾರ್ಯಕ್ರಮ ಕೊಟ್ಟರೂ ಕಾಂಗ್ರೆಸ್ ಸರ್ಕಾರ ಮುಂದುವರೆಯಲ್ಲ ಎಂಬ ಅಪನಂಬಿಕೆ ಯಾಕೆ ಬಂತು ಅಂತ ಗೊತ್ತಿಲ್ಲ. ಆದರೆ, ಇನ್ಮುಂದೆ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಬಿಜೆಪಿ ಅಥವಾ ಜೆಡಿಎಸ್‌ನಿಂದಾಗಲಿ ಸಾಧ್ಯವಿಲ್ಲ ಎಂದರು.(ದಿಗ್ವಿಜಯ ನ್ಯೂಸ್​)
ಫಲಿಸದ ಪ್ರಾರ್ಥನೆ: ಹೃದಯಾಘಾತದಿಂದ 64 ದಿನ ಜೀವನ್ಮರಣ ಹೋರಾಟ ನಡೆಸಿ ಶಾಶ್ವತವಾಗಿ ಕಣ್ಮುಚ್ಚಿದ ಹುಡುಗಿ

ಅನಂತ ಗೆಳೆತನ: ಸ್ನೇಹಿತರ ದಿನದಂದು ಗೆಳೆತನದ ಬಗ್ಗೆ ಕನ್ನಡ ತಾರೆಯರ ಮಾತು

ಸಾಧಿಸುವ ಛಲವಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
