ಮಂಡ್ಯ:ರಾಗಿ ಅಥವಾ ಭತ್ತಕ್ಕೆ ರೈತ ಹೋರಾಟಗಾರ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಹೆಸರನ್ನು ಇಡುವಂತೆ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.
ಕೃಷಿ ಇಲಾಖೆಯ ಕಾರ್ಯದರ್ಶಿ ಹಾಗೂ ಕೃಷಿ ವಿವಿ ಕುಲಪತಿಗೆ ಪತ್ರದ ಮೂಲಕ ಚಲುವರಾಯಸ್ವಾಮಿ ಅವರು ಸೂಚನೆ ನೀಡಿದ್ದಾರೆ.
ಜಿ.ಮಾದೇಗೌಡ ಅವರು ಮಾಜಿ ಸಚವರು ಹಾಗೂ ಮಾಜಿ ಸಂಸದರು. ಕಾವೇರಿ ಹೋರಾಟದ ನೇತೃತ್ವ ವಹಿಸಿ ರೈತಪರವಾಗಿದ್ದ ಧೀಮಂತ ನಾಯಕ. ಅವರ ಹೆಸರನ್ನು ರೈತಾಪಿ ವರ್ಗದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಭತ್ತ ಅಥವಾ ರಾಗಿ ತಳಿಗೆ ಅವರ ಹೆಸರನ್ನು ನಾಮಕರಣ ಮಾಡಿ, ವರದಿ ಸಲ್ಲಿಸುವಂತೆ ಚಲುವರಾಯಸ್ವಾಮಿ ಸೂಚಿಸಿದ್ದಾರೆ.
ಇದನ್ನೂ ಓದಿ:ಟೊಮ್ಯಾಟೋದಿಂದ ಗಳಿಸಿದ ಲಾಭವೇ ರೈತನಿಗೆ ಮುಳುವಾಯ್ತು: ರಾತ್ರಿ ನಡೆಯಿತು ಭೀಕರ ಹತ್ಯೆ!
ಡಾ.ಜಿ.ಮಾದೇಗೌಡರು ಕಳೆದ 60 ವರ್ಷಗಳ ಕಾಲ ಶೈಕ್ಷಣಿಕವಾಗಿ, ರಾಜಕೀಯವಾಗಿ ಹತ್ತು ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹೆಸರು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿ ಉಳಿಯಲು ಭತ್ತ ಅಥವಾ ರಾಗಿ ತಳಿಗೆ ಅವರ ಹೆಸರನ್ನು ನಾಮಕರಣ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು 2023ರ ಜುಲೈ 11ರಂದು ಮನವಿ ಮಾಡಿದ್ದರು. 23ನೇ ವರ್ಷದ ರಾಜ್ಯಮಟ್ಟದ ಜಿ. ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿ ಪ್ರಶಸ್ತಿ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ್ದ ಎನ್.‌ ಚಲುವರಾಯಸ್ವಾಮಿ ಅವರು ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಹೆಸರನ್ನು ಇಡುವ ಬಗ್ಗೆ ಒಲವು ತೋರಿದ್ದರು. ಇದೀಗ ಹೆಸರಿಡಲು ಕೃಷಿ ಇಲಾಖೆಗೆ ಸೂಚನೆ ನೀಡಿದ್ದಾರೆ.
ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಮಾದೇಗೌಡ ಅವರು 2021ರ ಜುಲೈ 17ರಂದು ಕೆ.ಎಂ.ದೊಡ್ಡಿಯ ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.(ದಿಗ್ವಿಜಯ ನ್ಯೂಸ್​)


ಭತ್ತ ಇಲ್ಲವೇ ರಾಗಿ ತಳಿಗೆ ಡಾ. ಜಿ. ಮಾದೇಗೌಡರ ಹೆಸರಿಡಿ: ಕೃಷಿ ಸಚಿವ ಚಲುವರಾಯಸ್ವಾಮಿಗೆ ಶಾಸಕ ದಿನೇಶ್‌ ಗೂಳಿಗೌಡ ಮನವಿ

ರೈತ ಹೋರಾಟಗಾರ, ಮಾಜಿ ಸಂಸದ ಜಿ. ಮಾದೇಗೌಡ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
