ಮೈಸೂರು:ಇಂದು ಮೈಸೂರು ಪ್ರವಾಸ ಕೈಗೊಂಡ ಕೃಷಿ ಸಚಿವ ಚೆಲುವರಾಯಸ್ವಾಮಿ, ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಬ್ಬ 2023ರ ರೈತ ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಜನರೊಂದಿಗೆ ಪಾಲ್ಗೊಂಡರು.
ಇದನ್ನೂ ಓದಿ:ಸಹೋದ್ಯೋಗಿಗಳ ಜತೆ ಪ್ರಚೋದನಾತ್ಮಕ ವರ್ತನೆ; ಪತಿಯಿಂದ ಬೇರೆಯಾದ್ರು ಇಟಲಿ ಪ್ರಧಾನಿ
ಈ ಬಗ್ಗೆ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದರುವ ಸಚಿವರು, “ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ರೈತ ದಸರಾ ಕಾರ್ಯಕ್ರಮದಾಲ್ಲಿ ಪಾಲ್ಗೊಂಡು ಉದ್ಘಾಟಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದೆ. ರೈತ ದಸರಾವನ್ನು ಪ್ರತಿ ಭಾರಿ ಕೃಷಿ ಇಲಾಖೆಯಿಂದ ಆಯೋಜಿಸಲಾಗುತ್ತಿದ್ದು, 2007 ರಿಂದ ಸಾಂಪ್ರದಾಯಿಕ ದಸರಾ ಉತ್ಸವದ ಜತೆಗೆ ರೈತ ದಸರಾ ಕೂಡ ಬೆಸೆದುಕೊಂಡಿದೆ” ಎಂದು ಸಚಿವರು ಹೇಳಿದರು.
“ಪ್ರತಿವರ್ಷ ರೈತ ದಸರಾ ಅಂಗವಾಗಿ ರೈತರಿಗೆ ಗ್ರಾಮೀಣ ಕ್ರೀಡೆ ಏರ್ಪಡಿಸಲಾಗುತ್ತಿತ್ತು, ಮಳೆಯ ಅಭಾವದ ಹಿನ್ನಲೆಯಲ್ಲಿ ಬರ ಪರಿಸ್ಥಿತಿ ಘೋಷಣೆ ಮಾಡಿರುವುದರಿಂದ ಈ ಬಾರಿ ಯಾವುದೇ ಕ್ರೀಡಾಕೂಟ ಆಯೋಜಿಸಿರುವುದಿಲ್ಲ. ಕೃಷಿ ಪೂರಕ ಕಾರ್ಯಕ್ರಮಗಳಾದ ದನ ಕರುಗಳು ಹಾಗೂ ಕುರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈಗಾಗಲೇ 195 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಇದಲ್ಲದೆ ಹೊಸದಾಗಿ 21 ತಾಲ್ಲೂಕುಗಳನ್ನೂ ಬರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ” ಎಂದರು.
ಇದನ್ನೂ ಓದಿ:ರಾಜ್ಯದ ಜನತೆ ಹೇಳ್ತಾರೆ ಸಿದ್ದರಾಮಯ್ಯ ಸುಳ್ಳ, ಡಿಕೆಶಿ ಕಳ್ಳ ಅಂತ: ಕೆ.ಎಸ್ ಈಶ್ವರಪ್ಪ
“ದಸರಾ ಉತ್ಸವದ ಮೂಲಕ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದೆ. ಕೃಷಿ ದಸರಾ ಉದ್ಘಾಟನೆ ವೇಳೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಗೌಡ, ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು” ಎಂದು ಬರೆದುಕೊಂಡಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’; ಈ ಭಾಷೆಯಲ್ಲಿ ರಿಲೀಸ್​ ಆಗಲ್ಲ ಸೈಡ್​ ಬಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
