ಬೆಂಗಳೂರು:ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು ಎಂದು ಟೀಕಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ದಿ ಯಾಕೆ? ಎಂದು ಸಚಿವ ದಿನೇಶ್​ ಗುಂಡೂರಾವ್​ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ:ಯಾರಿಗೂ ಭಾರವಾಗಬಾರದೆಂದು 15 ವರ್ಷದ ಹಿಂದೆ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದ್ದ ವೃದ್ಧ ಸಾವುಬೊಮ್ಮಾಯಿಯವರೆ ನಿಮ್ಮ ಹೊಟ್ಟೆಯೊಳಗಿನ ಸಂಕಟ ಮತ್ತು ಬೇಗುದಿ ಏನೆಂದು ಅರ್ಥವಾಗುತ್ತಿಲ್ಲ. ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಆಕಾಶ ಭೂಮಿ ಒಂದಾಗುವಂತೆ ನೀವು ಮತ್ತು ನಿಮ್ಮ ಪಕ್ಷದವರು ಹಿಂದೆ ಹೇಳಿದ್ದೀರಿ. ಈಗ ಅಕ್ಕಿ ಬದಲು ನಾವು ಹಣ ಕೊಟ್ಟರೆ ಆ ವಿಷಯದಲ್ಲೂ ಹುಳುಕು‌ ಹುಡುಕುತ್ತಿದ್ದೀರಿ, ಈ ನಿಮ್ಮ ರೋಗಕ್ಕೆ ಮದ್ದೆಲ್ಲಿಂದ ತರುವುದು ಎಂದು ಸಚಿವರು ಹೇಳಿದ್ದಾರೆ.ಕೇಂದ್ರ ಸರ್ಕಾರವು ನಾವು ದುಡ್ಡು ಕೊಡುತ್ತೇವೆ ಎಂದರೂ ಅಕ್ಕಿಯನ್ನು ಕೊಡಲಿಲ್ಲ. ಕೇಂದ್ರಕ್ಕೆ ಕೊಡುವ ದುಡ್ಡನ್ನು ನಾವು ಈಗ ಜನರಿಗೆ ಕೊಡುತ್ತಿದ್ದೇವೆ. ಬಿಜೆಪಿಯವರಿಗೆ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವುದು ಇಷ್ಟವಿಲ್ಲ, ಹಾಗಾಗಿ ನಮಗೆ ಅಕ್ಕಿ ಸಿಗದಂತೆ ಮಾಡಿದ್ದೀರಿ. ನಾವು ಅಕ್ಕಿ ಬದಲಾಗಿ ಜನರಿಗೆ ದುಡ್ಡು ಕೊಡುತ್ತಿರುವುದನ್ನು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಗುಣಕ್ಕೆ ಎಂದಿಗೂ ಮತ್ಸರವಿರಬಾರದು, ಅದೇ ರೀತಿ ಯಾರಾದರೂ ಜನರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅವರು ನಿಮ್ಮ ಶತ್ರುಗಳಾದರೂ ಅವರ ಮೇಲೆ ಮತ್ಸರವಿರಬಾರದುನ ಎಂದು ಗುಂಡುರಾವ್​ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ಜಲಜೀವನ್ ಯೋಜನೆಯಲ್ಲಿ ಅವ್ಯವಹಾರದ ಸದ್ದು: ಜಿಪಂ ಸಿಇಒಗೆ ತನಿಖೆಯ ಹೊಣೆನೀವು ಅಧಿಕಾರದಲ್ಲಿದ್ದಾಗ ಜನರಿಗೆ ಒಳ್ಳೆಯದನ್ನು ಮಾಡಲಿಲ್ಲ. ನಿಮ್ಮ ಕೈಲಾಗದೇ ಇರುವುದನ್ನು ನಾವು ಮಾಡುತ್ತಿರುವುದನ್ನು ಕಂಡು ನಿಮಗೆ ಹೊಟ್ಟೆಕಿಚ್ಚು ಶುರುವಾಗಿದೆ. ಮೊಸರಿನಲ್ಲಿ ಕಲ್ಲು ಹುಡುಕುವ ಬುದ್ಧಿ ಬೇಡ ಎಂದು ಸಚಿವರು ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 17 =
Remember me
