ಬೆಂಗಳೂರು: “ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ‌ ಪ್ರಧಾನಿ ಕೊನೆಗೂ ಕರೆ ಕೊಟ್ಟಿದ್ದಾರೆ. ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಲು ಸ್ವಾತಂತ್ರ್ಯ ದಿನಾಚರಣೆಯವರೆಗೂ ಕಾಯಬೇಕಾಯ್ತು” ಎಂದು ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಪ್ರಧಾನಿ‌ನರೇಂದ್ರ ಮೋದಿ, ಇಡೀ ದೇಶ ಮಣಿಪುರ ಜನರ ಜತೆ ಇದೆ. ಶಾಂತಿಯಿಂದ ಪರಿಹಾರ ಸಾಧ್ಯವಿದ್ದು, ಶಾಂತಿ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದರು.
ಈ‌ ಮುನ್ನ ಕಾಂಗ್ರೆಸ್ ನಾಯಕರು, ಮಣಿಪುರ ವಿಚಾರದಲ್ಲಿ ಪ್ರಧಾನಿ ಮಾತನಾಡುತ್ತಿಲ್ಲ ಟೀಕಾ ಪ್ರಹಾರ ನಡೆಸಿದ್ದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಉತ್ತರ ಬಯಸಿದ್ದರು. ಪ್ರಧಾನಿ ಉತ್ತರ ಕೊಡುವಾಗ ಸಭಾತ್ಯಾಗ ಮಾಡಿದ್ದರು.
ಇದೀಗ ಕೆಂಪುಕೋಟೆಯ ಮೇಲಿನ ಭಾಷಣದಲ್ಲೂ ಪ್ರಧಾನಿ ಮಣಿಪುರ ವಿಚಾರ ಮಾತನಾಡಿದ್ದಾರೆ. ಇದಕ್ಕೂ ಸಹ ಕೈ ನಾಯಕರು ವ್ಯಂಗ್ಯವಾಡಿದ್ದಾರೆ.ಮಣಿಪುರದಲ್ಲಿ ಶಾಂತಿ ಕಾಪಾಡುವಂತೆ‌ ಪ್ರಧಾನಿ ಕೊನೆಗೂ ಕರೆ ಕೊಟ್ಟಿದ್ದಾರೆ. ಇದು ಅತಿ ದೊಡ್ಡ ವಿಪರ್ಯಾಸ. ಕೊನೆಗೂ ಮೋದಿಯವರು ಮಣಿಪುರ ವಿಚಾರದಲ್ಲಿ 4 ತಿಂಗಳ ಬಳಿಕ ಬಾಯಿ ಬಿಟ್ಟರು ಎಂಬುದೇ ಸದ್ಯದ ಸಮಾಧಾನ ಎಂದು ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + seven =
Remember me
