ಬೆಂಗಳೂರು:ರಾಜ್ಯದಲ್ಲಿ ಕರೊನಾ ಪರಿಣಾಮಕಾರಿ ನಿಯಂತ್ರಣ, ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕೆಲಸವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಜವಾಬ್ದಾರಿ ನನಗೆ ಒಪ್ಪಿಸಿದ್ದಾರೆ.
ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಬಿಎಸ್ ವೈ ತಮಗೆ ಒಪ್ಪಿಸುವ ನಿರ್ಧಾರ ಕೈಗೊಂಡಿದ್ದರ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವ್ಯಾಖ್ಯಾನಿಸಿದ ರೀತಿಯಿದು. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.ಇದನ್ನೂ ಓದಿ:ಖಾತೆ ಬದಲಾವಣೆ: ಸ್ಫೋಟಗೊಂಡ ಶ್ರೀರಾಮುಲು ಅಸಮಾಧಾನ
ವರಿಷ್ಠರತ್ತ ಬೆರಳು
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಶಾಸಕ ಮುನಿರತ್ನ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಭಾನುವಾರ ರಾತ್ರಿ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆಯಾಗಿದೆ. ಅಂತಿಮವಾಗಿ ವರಿಷ್ಠರ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಡಾ.ಕೆ.ಸುಧಾಕರ್ ವ್ಯಕ್ತಪಡಿಸಿದರು. ಆದರೆ ವಿಳಂಬಕ್ಕೆ ಕಾರಣವೇನು ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಿಖರವಾಗಿ ಉತ್ತರಿಸಲಿಲ್ಲ.
ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ಹೊಂದಾಣಿಕೆ ದೃಷ್ಟಿಯಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರೇ ನಿರ್ವಹಿಸುವುದು ಸೂಕ್ತ. ಕಾರಣಾಂತರಗಳಿಂದ 2000ನೇ ಇಸ್ವಿಯಲ್ಲಿ ಪ್ರತ್ಯೇಕವಾಗಿದ್ದ ಇಲಾಖೆಯನ್ನು ನಮ್ಮ ನಾಯಕ ಬಿಎಸ್ ವೈ ಸರಿಪಡಿಸಿದ್ದಾರೆ. ಸಿಎಂ ಸೇರಿದಂತೆ ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಅನುಗುಣವಾಗಿ ಶಕ್ತಿ-ಯುಕ್ತಿ ಬಳಸಿಕೊಂಡು ಹೊಣೆಗಾರಿಕೆ ನಿರ್ವಹಿಸುವೆ. ಈ ವಿಷಯವಾಗಿ ಶ್ರೀರಾಮುಲು ಜತೆಗೆ ವಿಚಾರ ವಿನಿಮಯ ನಡೆಸಿ ಪರಸ್ಪರ ಸಹಕಾರದಿಂದ ಕೆಲಸ ಮಾಡುವೆ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಇದನ್ನೂ ಓದಿ:ಆರ್​ಆರ್​ ನಗರದ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಫಿಕ್ಸ್​- ಸಚಿವ ಸೋಮಶೇಖರ್​
ಆರೋಗ್ಯ ಇಲಾಖೆ ಒಪ್ಪಿಸಿದ ಅಧಿಕೃತ ಆದೇಶ ಇಂದು ಪ್ರಕಟವಾಗುವ ನಿರೀಕ್ಷೆಯಿದೆ. ಸಿಎಂ ಸೂಚನೆಯಂತೆ ಮೈಸೂರಿಗೆ ಭೇಟಿ ಕರೊನಾ ನಿಯಂತ್ರಣ ಸಂಬಂಧಿಸಿದಂತೆ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಧಿಕಾರಿ ಜತೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡುವೆ. ಮಂಗಳವಾರವೇ ಆರೋಗ್ಯ ಇಲಾಖೆ ಅಧಿಕಾರ ಸ್ವೀಕರಿಸಿ, ಎರಡೂ ಇಲಾಖೆಗಳ ಉನ್ನತಾಧಿಕಾರಿಗಳ ಜತೆ ಸಮಾಲೋಚಿಸಿ ಮುಂದಿನ ಕ್ರಮಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಇದನ್ನೂ ಓದಿ:ಸಮಾಜ ಕಲ್ಯಾಣ ಖಾತೆ ಕಳೆದುಕೊಂಡ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದೇನು?
ರಾಮುಲುಗೆ ಅಸಮಾಧಾನವಿಲ್ಲದಿಢೀರ್ ಇಲಾಖೆ ಬದಲಾಗಿದ್ದಕ್ಕೆ ಹಿರಿಯರಾದ ಶ್ರೀರಾಮುಲುಗೆ ಅಸಮಾಧಾನವಿಲ್ಲ. ಇಲಾಖೆಗಳು ಬದಲಾವಣೆಯಾಗಿದ್ದು, ಸ್ಥಾನಮಾನದಲ್ಲಿ ಯಾವುದೇ ವ್ಯತ್ಯಾಸಗಳಾಗಿಲ್ಲ. ಸಿಎಂ ನಿರ್ಧಾರಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ ಎಂದು ಕೆ.ಸುಧಾಕರ್ ಸ್ಪಷ್ಟಪಡಿಸಿದರು.ಶ್ರೀರಾಮುಲು ಈ ಹಿಂದೆ ಬಯಸಿದ್ದರು ಎಂದು ಹೇಳಲಾದ ಸಮಾಜ ಕಲ್ಯಾಣ ಇಲಾಖೆಯನ್ನೇ ಸಿಎಂ ಕೊಟ್ಟಿದ್ದು, ಬಹು ದೊಡ್ಡ ಇಲಾಖೆಯದು. ಶೋಷಿತರ ಅಭ್ಯುದಯಕ್ಕೆ ಶ್ರಮಿಸುವ ಅವಕಾಶ ನೀಡಿದ್ದು, ವಾರ್ಷಿಕ 25,000 ಕೋಟಿ ರೂ.ಗಳ ಅನುದಾನ ಇರುವ ಇಲಾಖೆಯ ಜವಾಬ್ದಾರಿಯನ್ನು ಸಿಎಂ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ: ಆದಿಚುಂಚನಗಿರಿ ಶ್ರೀಗಳ ಭೇಟಿ ಬಳಿಕ ಡಾ. ಸುಧಾಕರ್ ಹೇಳಿಕೆ
ಪರಿಶೀಲಿಸಿ ಕ್ರಮಕರೊನಾ ನಿರ್ವಹಣೆ ಪರಿಕರಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರ, ಅಕ್ರಮಗಳಾಗಿಲ್ಲ. ಈ ಬಗ್ಗೆ ಸದನದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೂ ನೀವು‌ (ಮಾಧ್ಯಮದವರು) ಪ್ರಶ್ನಿಸುತ್ತಿರುವ ಕಾರಣಕ್ಕೆ ಇಲಾಖೆ ಅಧಿಕಾರ ಸ್ವೀಕರಿಸಿದ ಬಳಿಕ ಮತ್ತೊಮ್ಮೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವೆ. ಏನಾದರೂ ವ್ಯತ್ಯಾಸ ಕಂಡುಬಂದರೆ ಸೂಕ್ತ ಕ್ತಮವಹಿಸಲು ಹಿಂಜರಿಯುವುದಿಲ್ಲ.ಕರೊನಾ ಸೋಂಕು ನಿಯಂತ್ರಣ, ಸಾವಿನ ಪ್ರಮಾಣ ತಗ್ಗಿಸುವುದು ಹಾಗೂ ಜನರಿಗೆ ಸುಲಭವಾಗಿ ಚಿಕಿತ್ಸಾ ಸೌಲಭ್ಯ ಕೈಗೆಟುಕುವಂತೆ ಮಾಡುವುದು ತಮ್ಮ ಮುಂದಿರುವ ಆದ್ಯತೆಗಳಾಗಿವೆ ಎಂದು ಡಾ.ಕೆ.ಸುಧಾಕರ್ ವಿವರಿಸಿದರು.
ಆರೋಗ್ಯ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಶ್ರೀರಾಮುಲುಗೆ ಮತ್ತೊಂದು ಆಘಾತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + nine =
Remember me
