ಬೆಂಗಳೂರು:ಮನೆಯಲ್ಲಿ ಯಾರೂ ಕೂಡ ಕೋವಿಡ್​ ವ್ಯಾಕ್ಸಿನೇಷನ್​ ಪಡೆಯಬಾರದು. ಆಸ್ಪತ್ರೆಯಲ್ಲೇ ಪಡೆಯಬೇಕು. ಈ ಬಗ್ಗೆ ಸುತ್ತೊಲೆ ಹೊರಡಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ್ದಾರೆ.
ಇಂದು(ಸೋಮವಾರ) ಬೆಳಗ್ಗೆ ಹಿರೇಕೆರೂರು ಆಸ್ಪತ್ರೆಯ ಸಿಬ್ಬಂದಿ ಕೃಷಿ ಸಚಿವ ಬಿ.ಸಿ. ಪಾಟೀಲ್​ರ ಮನೆಗೆ ಬಂದು ಸಚಿವರು ಮತ್ತು ಅವರ ಪತ್ನಿ ವನಜಾ ಪಾಟೀಲ್​ಗೆ ಲಸಿಕೆ ಹಾಕಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿದ್ದಾರೆ. ಆದರೆ, ಬಿ.ಸಿ.ಪಾಟೀಲ್​ ಮಾತ್ರ ಆರೋಗ್ಯ ಸಿಬ್ಬಂದಿಯನ್ನ ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಲಸಿಕೆ ಪಡೆದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಅಲ್ಲದೆ, ಕೋವಿಡ್​ ವ್ಯಾಕ್ಸಿನೇಷನ್​ನಲ್ಲೂ ‘ವಿವಿಐಪಿ ಸಂಸ್ಕೃತಿ’ ಇದ್ಯಾ? ಎಂದು ಸಚಿವರ ನಡೆಗೆ ಕಿಡಿಕಾರಿದ್ದರು.ಇದನ್ನೂ ಓದಿರಿಮೊದಲ ರಾತ್ರಿಯೇ ಮದುಮಗಳ ದುರಂತ ಸಾವು! ಮದ್ವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ನರೇಂದ್ರ ಮೋದಿಗಿಂತಲೂ ಬಿ.ಸಿ.ಪಾಟೀಲ್​ ದೊಡ್ಡವರಾ? ಹಿರಿ ಜೀವಗಳು ಆಸ್ಪತ್ರೆ ಬಾಗಿಲಲ್ಲಿ ಕಾದರೂ ಪರವಾಗಿಲ್ಲ, ಇವರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಯೇ ಬಂದು ಲಸಿಕೆ ಕೊಡುತ್ತಾರೆ. ಇದೆಂಥಾ ನ್ಯಾಯ? ಜನಸಾಮಾನ್ಯರಿಗೆ ಒಂದು ಇವರಿಗೊಂದು ಏಕೆ? ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿ.ಸಿ.ಪಾಟೀಲ್​, ಇವತ್ತು ನನ್ನನ್ನು ಭೇಟಿಯಾಗಲು ಹಲವರು ಬಂದಿದ್ದರು. ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಕಾಯಬೇಕಾಗಿತ್ತು. ಸ್ವಾಮಿ ಕಾರ್ಯದ ಜೊತೆಗೆ ಸ್ವ ಕಾರ್ಯ ಸಹ ಅಗಬೇಕು. ಆದ್ರೆ ಇದನ್ನು ವಿವಾದ ಅಂತ ಹೇಳಿದ್ರೆ ಏನ್​ ಮಾಡೋಕೆ ಆಗಲ್ಲ. ವಿವಾದ ಅಂತ ಮೊದಲೇ ಗೊತ್ತಾಗಿದ್ದರೆ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದರು.
ಈ ಎಲ್ಲ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಕೆ.ಸುಧಾಕರ್​, ನಾನು ಬಿ.ಸಿ.ಪಾಟೀಲ್​ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡುವೆ. ನಮ್ಮ ಅಧಿಕಾರಿಗಳು ಅವರಿಗೆ ಹೇಳಬಹುದಿತ್ತು. ಆದರೆ, ಅವರು ಮಂತ್ರಿಗಳು ಅನ್ನೋ ಕಾರಣಕ್ಕೆ ಬಹುಶಃ ಅವರು ಹೇಳಿಲ್ಲ ಅನ್ನಿಸುತ್ತದೆ. ಯಾರ ಮನೆಗೂ ಹೋಗಿ ಲಸಿಕೆ ಹಾಕುವ ಹಾಗಿಲ್ಲ. ಮನೆಯಲ್ಲಿ ಲಸಿಕೆ ಪಡೆದ್ರೆ ತಪ್ಪಿಲ್ಲ ಅನ್ನೋ ತಪ್ಪು ಗ್ರಹಿಕೆಯಿಂದಾಗಿ ಈ ಘಟನೆ ನಡೆದಿದೆ. ಬಿ.ಸಿ.ಪಾಟೀಲ್​ರು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಸ್ವಲ್ಪ ತಪ್ಪಾಗಿದ್ದು, ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ. ಅಧಿಕಾರಿಗಳು ಮಾರ್ಗಸೂಚಿಗಳ ಬಗ್ಗೆ ಹೇಳಬಹುದಾಗಿತ್ತು ಎಂದು ಸ್ಪಷ್ಟಪಡಿಸಿದರು.
ಕೋವಿಡ್​ ವ್ಯಾಕ್ಸಿನೇಷನ್​ನಲ್ಲೂ ‘ವಿವಿಐಪಿ ಸಂಸ್ಕೃತಿ’ ಇದ್ಯಾ? ಬಿ.ಸಿ.ಪಾಟೀಲ್​ ನಡೆಗೆ ಆಕ್ರೋಶ

ಕಾಲೇಜು ಕಟ್ಟಡದಿಂದ ಜಿಗಿದು ಬಿಇ ವಿದ್ಯಾರ್ಥಿ ಆತ್ಮಹತ್ಯೆ! ಡೆತ್​ನೋಟ್​ ಪತ್ತೆ, ಸಹಪಾಠಿಗಳ ಪ್ರತಿಭಟನೆ

ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:ten − 4 =
Remember me
