ಮಂಡ್ಯ:ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ ಎನ್ನಲಾದ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಶುಕ್ರವಾರ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದಾರೆ.
ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಿಡಿಗಳು ಹಲವಾರು ಜನರಿಗೆ ತಮ್ಮ ರಾಜಕೀಯ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆ ಆಗಿವೆ. ಯಾವುದೇ ಫೇಕ್ ಸಿಡಿಗಳನ್ನ ಮಾಡೋದು, ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆ ಮೇಲೆ ಯಾರು ಅದರ ಹಿಂದೆ ಹೋಗುವುದಿಲ್ಲ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿ ಸಂಖ್ಯೆಗಳನ್ನ ನೋಡಿದ್ರೆ ಇಷ್ಟು ಹೊತ್ತಿಗೆ ಅದೆಷ್ಟೋ ಜನ ಜೈಲಿಗೆ ಹೋಗಬೇಕಿತ್ತು ಎಂದು ಸದಾನಂದ ಗೌಡರು ವ್ಯಂಗ್ಯವಾಡಿದರು.
ಕೆಲವರು ತಮ್ಮ ತಾತ್ಕಾಲಿಕ ಬೇಳೆ ಬೇಯಿಸಿಕೊಳ್ಳಲು ಜನರನ್ನ ಬೇರೆ ದಾರಿಗೆ ಎಳೆಯಲು ಕೆಲವರು ಹೀಗೆ ಮಾಡ್ತಾರೆ. ಕುಮಾರಸ್ವಾಮಿ ಇಂತಹ ಕೆಲಸದಲ್ಲಿ ನಿಸ್ಸೀಮರು. ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ…? ಘಟನೆ ನಡೆದ ಕೆಲದಿನಗಳಲ್ಲೇ ಸಿಡಿ ರಿಲೀಸ್ ಮಾಡಬಹುದಿತ್ತು. ತಮ್ಮ ರಾಜಕೀಯ ಮೆಟ್ಟಿಲು ಕುಸಿಯುತ್ತಿರುವ ಈ ಸಂಧರ್ಭದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಾಚರಣೆ ಇದು ಎಂದು ಕುಮಾರಸ್ವಾಮಿ ಅವರ ಕಾರ್ಯವನ್ನು ಟೀಕಿಸಿದರು.
ಅವರದ್ದೇ ಜನ ಕಳುಹಿಸಿ, ಅವರದ್ದೇ ಜನಕ್ಕೆ ಪೊಲೀಸ್ ವೇಷ ಹಾಕಿಸಿ ಎಲ್ಲಾ ವ್ಯವಸ್ಥೆ ಮಾಡಿ ಸಿಡಿ ಮಾಡಿಸಿರ ಬೇಕು. ಇದರ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಡಿವಿಎಸ್ ಸಂದೇಹ ವ್ಯಕ್ತಪಡಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
